ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕೊಬ್ಬರಿ ಬೆಳಗಾರರ ಪ್ರತಿಭಟನೆಗೆ ಮಂಗಳವಾರದಂದು ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಫೋಟೊಗ್ರಾಫರ್ಸ್ ಹಾಗೂ ವಿಡಿಯೋ ಗ್ರಾಫರ್ಸ್ ಸಂಘ ಮತ್ತು ಹುಳಿಯಾರು ಹೋಬಳಿ ಛಾಯಾಗ್ರಾಹಕರ ಸಂಘದವರು ಬೆಂಬಲ ವ್ಯಕ್ತಪಡಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಬ್ಬರಿ ಬೆಂಬಲ ಬೆಲೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಂಗಳವಾರದಂದು ತಾಲ್ಲೂಕ್ ಹಾಗೂ ಹೋಬಳಿ ಛಾಯಾಗ್ರಾಹಕರ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. |
ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಫೋಟೊಗ್ರಾಫರ್ಸ್ ಹಾಗೂ ವಿಡಿಯೋ ಗ್ರಾಫರ್ಸ್ ಸಂಘದ ಕಾರ್ಯದರ್ಶಿ ಸಿದ್ಧು.ಜಿ.ಕೆರೆ ಮಾತನಾಡಿ ಒಂದಡೆ ಬರಗಾಲ,ಮತ್ತೊಂದೆಡೆ ಬೆಳೆದ ಬೆಳೆಗೆ ದರ ಕುಸಿತದ ನಡುವೆ ರೈತ ಕಂಗಾಲಾಗಿದ್ದು ಅನ್ನದಾತನ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕೆಂದರು.
ರೈತ ಚೆನ್ನಾಗಿದ್ದಲ್ಲಿ ಇಡೀ ದೇಶವೇ ಸುಭೀಕ್ಷವಾಗಿರುತ್ತದೆ.ಅಡಿಕೆ ,ಕೊಬ್ಬರಿ ಬೆಳದ ರೈತ ಇಂದು ತನ್ನ ಮಾಲಿಗೆ ಬೆಲೆ ಕೊಡಿ ಎಂದು ಸರ್ಕಾರವನ್ನು ಅಂಗಲಾಚುತ್ತಿರುವುದು ತರವಲ್ಲ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕ್ ಸಂಘದ ಅಧ್ಯಕ್ಷ ಜಯಣ್ಣ ಹಾಗೂ ಹುಳಿಯಾರು ಹೋಬಳಿ ಸಂಘದ ಅಧ್ಯಕ್ಷ ಬಡಗಿ ರಾಜು ಮಾತನಾಡಿ ಧರಣಿ ನಿರತ ರೈತರ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದಾಗಿದ್ದು ಅವರುಗಳು ತಮ್ಮ ಹೊಣೆಗಾರಿಕೆ ಮರೆತು ರೈತರ ಅಳಲನ್ನು ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ತಾಂಡವಾಚಾರ್,ದುರ್ಗರಾಜು,ಗಾಳಿದಿಬ್ಬ ಜಯಣ್ಣ,ಕಂದಿಕೆರೆ ರಮೇಶ್,ಶೆಟ್ಟಿಕೆರೆ ವಿಜಿ, ಸಂಜಯ್, ಜೇನುಕಲ್ ಮಂಜು ,ಹೊಯ್ಸಳಕಟ್ಟೆ ತಿಪ್ಪೇಶ್,ಯತೀಶ್,ಯಳನಾಡು ಈಶ್ವರ್,ಕೆಂಕೆರೆ ಮಂಜುನಾಥ್,ಬಾಬು,ತ್ರಿಮೂರ್ತಿ ಹರೀಶ್,ನೇಸರ,ಪ್ರಭು ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ