ಹುಳಿಯಾರು: ಸಮೀಪದ ಕೆಂಕೆರೆಯ ಪುರದ ಮಠದಲ್ಲಿ ಡಿ,12ರ ಸೋಮವಾರದಂದು ಕೃತಿಕಾ ಮಹೋತ್ಸವದ ಪ್ರಯುಕ್ತ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಉತ್ಸವ ಹಾಗೂ ದಾಸೋಹ ನಡೆಯಲಿದೆ.
ಬೆಳಿಗ್ಗೆ ಪುರದ ಚನ್ನಬಸವೇಶ್ವರ ಸ್ವಾಮಿಯವರನ್ನು ಕೆಂಕೆರೆ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಗುವುದು.ಕೆಂಕೆರೆ ಗ್ರಾಮದೇವತೆ ಕಾಳಮ್ಮ ಹಾಗೂ ಸ್ವಾಮಿಯವರನ್ನು ಮೂಲಸ್ಥಾನ ಪುರದಮಠಕ್ಕೆ ಕರೆದೊಯ್ದು ಉತ್ಸವ ನಡೆಸಲಾಗುವುದು.ಮಧ್ಯಾಹ್ನ ೨.೩೦ ರಿಂದ ಭಕ್ತಾಧಿಗಳಿಗೆ ದಾಸೋಹ ನಡೆಯುವುದು.
ಇಲ್ಲಿನ ವಿಶೇಷವೇ ರಾಗಿಮುದ್ದೆಯ ದಾಸೋಹವಾಗಿದ್ದು ಸುಮಾರು ೮-೧೦ ಸಾವಿರದಷ್ಟು ಆಗಮಿಸುವ ಭಕ್ತಾಧಿಗಳಿಗೆ ಸ್ವಾಮಿಯ ಪ್ರಸಾದವಾಗಿ ರಾಗಿ ಮುದ್ದೆ ಊಟವನ್ನು ಉಣಬಡಿಸಲಾಗುತ್ತದೆ. ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ