ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಸ್ ಏಜೆಂಟರ ಸಂಘ ಹಾಗೂ ಗೆಳೆಯರ ಬಳಗದಿಂದ ಕನ್ನಡರಾಜ್ಯೋತ್ಸವ ಆಚರಣೆ

ಹುಳಿಯಾರು: ಪಟ್ಟಣದ ಖಾಸಗಿ ಬಸ್ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಗೆಳೆಯರ ಬಳಗದಿಂದ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬುಧವಾರದಂದು ಸರಳವಾಗಿ ಆಚರಿಸಲಾಯಿತು.          ಎ.ಎಸೈ ಶಿವಪ್ಪ ಬಸ್ಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಣೆಯ ಮಹತ್ವ ತಿಳಿಸಿದರು.ತಾಪಂ ಸದಸ್ಯ ಏಜೆಂಟ್ ಕುಮಾರ್ ಮಾತನಾಡಿ ಕನ್ನಡ ನಾಡು ನುಡಿಯ ವೈಭವದ ಬಗ್ಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಏಜೆಂಟರಾಗಿ ಇದೀಗ ತಾಪಂ ಸದಸ್ಯರಾಗಿರುವ ಕುಮಾರ್,ಗ್ರಾಪಂ ಉಪಾಧ್ಯಕ್ಷರಾಗಿರುವ ಗಣೇಶ್ ಹಾಗೂ ಗ್ರಾಪಂ ಸದಸ್ಯರಾಗಿರುವ ರಾಘವೇಂದ್ರ ಸೇರಿದಂತೆ ಸಂಘದ ಹಿರಿಯ ಏಜೆಂಟರಾದ ಎಂ.ಎ.ಲೋಕೇಶ್ ,ಹು.ಕೃ.ವಿಶ್ವನಾಥ್ ಮತ್ತಿತರನ್ನು ಸನ್ಮಾನಿಸಿ ಸಿಹಿ ವಿತರಿಸಲಾಯಿತು.          ಗ್ರಾಪಂ ಸದಸ್ಯರಾದ ಸೈಯದ್ ಜಬೀಉಲ್ಲಾ ,ಏಜೆಂಟರ ಸಂಘದ ಗಂಗಾಧರ್ ಖರಮೋರೆ,ಸುರೇಶ್, ಸ್ಪಾಟ್ ನಾಗರಾಜು,ಸೊಸೈಟಿ ನಾಗರಾಜು, ಸೀಗೆಬಾಗಿ ರಾಜು,ಜಮೀರ್, ಆಟೋ ಚಾಲಕರ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.

ರೈತರ ಧರಣಿ ಬೆಂಬಲಿಸಿ ಹುಳಿಯಾರಿನಲ್ಲಿ ಪಂಜಿನ ಮೆರವಣಿಗೆ

ಹುಳಿಯಾರು: ಕೊಬ್ಬರಿ ಬೆಲೆಗಾಗಿ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಹುಳಿಯಾರು ಸಮೀಪದ ಬೋರನಕಣಿವೆ ಸುವರ್ಣ ವಿದ್ಯಾಚೇತನ ಹಾಗೂ ಸೃಜನ ಮಹಿಳಾ ಸಂಘದ ಸದಸ್ಯರು ಸೋಮವಾರ ರಾತ್ರಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಹುಳಿಯಾರಿನ ರೈತರ ಧರಣಿ ಬೆಂಬಲಿಸಿ ಬೋರನಕಣಿವೆ ಸುವರ್ಣ ವಿದ್ಯಾಚೇತನ ಹಾಗೂ ಸೃಜನ ಮಹಿಳಾ ಸಂಘದ ಸದಸ್ಯರುಗಳು ಪಟ್ಟಣದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.          ಬೋರನಕಣಿವೆಯಿಂದ ಸುಮಾರು ೧೦೦ಕ್ಕೂ ಹೆಚ್ಚುಮಂದಿ ರಾತ್ರಿ ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಧರಣಿ ಸ್ಥಳಕ್ಕೆ ಆಗಮಿಸಿ ಅಲ್ಲಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಂಜಿನ ಮೆರವಣಿಗೆಯಲ್ಲಿ ಸಾಗಿದರು. ರಾಮಗೋಪಾಲ್ ವೃತ್ತ, ಬಿ.ಹೆಚ್.ರಸ್ತೆ, ಪೊಲೀಸ್‌ಠಾಣಿ ವೃತ್ತದಿಂದ ಡಾ:ರಾಜ್‌ಕುಮಾರ್ ರಸ್ತೆಯ ಮೂಲಕ ಬಸ್ ನಿಲ್ದಾಣ, ಗಾಂಧಿಪೇಟೆ ಮಾರ್ಗವಾಗಿ ಎರಡು ಗಂಟೆಗಳಿಗೂ ಹೆಚ್ಚುಕಾಲ ಮೆರವಣಿಗೆ ನಡೆಸಿದರು.           ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ದಬ್ಬಗುಂಟ್ಟೆ ಡಿ.ಬಿ.ರವಕುಮಾರ್ ಮಾತನಾಡಿ ರೈತರು ಕಳೆದ ೧೮ ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಸಹಾ ತಿರುಗಿನೋಡದ ಕುರುಡು ಸರಕಾರ ಇದಾಗಿದೆ ಎಂದು ಟೀಕಿಸಿದರು.      ಸುವರ್ಣ  ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಸರಕಾರಗಳು ರೈತರ ತಾಳ್ಮೆ ಪರೀಕ್ಷಿಸುತ್ತಿದ್ದು ರೈತ

ರೈತರ ಧರಣಿ ಬೆಂಬಲಿಸಿ ರಸ್ತೆಗಿಳಿದ ಯಳನಾಡು ಸ್ವಾಮೀಜಿ

ಹುಳಿಯಾರು: ಕೊಬ್ಬರಿಗೆ ಬೆಲೆಗಾಗಿ ರೈತರು ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯು ಮಂಗಳವಾರದಂದು ೧೯ನೇ ದಿನಕ್ಕೆ ಕಾಲಿಟ್ಟಿದ್ದು ದಿನೇದಿನೇ ಧರಣಿಯ ತೀವ್ರತೆ ಹೆಚ್ಚಾಗುತ್ತಿದ್ದು ಹಳ್ಳಿಹಳ್ಳಿಗೆ ವ್ಯಾಪಿಸುತ್ತಿದ್ದು ಇಂದಿನ ಧರಣಿಗೆ ಸ್ವಾಮೀಜಿಗಳೆ ಬೀದಿಗಿಳಿದು ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು.             ಇಂದಿನ ಧರಣಿಯಲ್ಲಿ ಯಳನಾಡು ಅರಸೀಕೆರೆ ಸಂಸ್ಥಾನದಶ್ರೀಗಳಾದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿದ ಯಳನಾಡು ಭಾಗದ ರೈತರುಗಳು ನಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಅರ್ಧಗಂಟೆ ಸಮಯ ರಸ್ತೆ ತಡೆನಡೆಸಿ ನಂತರ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿನಿರತರೊಂದಿಗೆ ಪಾಲ್ಗೊಂಡರು.          ಈ ಸಮಯದಲ್ಲಿ ವರ್ತಕರ ಸೋಗಲಾಡಿತನದ ಬಗ್ಗೆ ಪ್ರಶ್ನಿಸಿದ ರೈತ ನಾಗಣ್ಣನ ಮಾತು ಸ್ಥಳದಲ್ಲಿ ಜೋರುಗದ್ದಲಕ್ಕೆ ಕಾರಣವಾಯಿತು.ಸ್ವಾಮೀಜಿಗಳ ಉಪಸ್ಥಿತಿಯಲ್ಲಿಯೇ ನಫೆಡ್ ಪ್ರಾರಂಭವಾಗದಂತೆ ಕೊಬ್ಬರಿ ಬೆಲೆ ಏರಿಸಿರುವ ವರ್ತಕರ ಕ್ರಮದ ಬಗ್ಗೆ ರೈತ ಹೋರಾಟಗಾರರು ಮತ್ತು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ನಡುವೆ ಕೆಲವು ಸಮಯ ಮಾತಿನ ಜಟಾಪಟಿ ನಡೆದು ಎಲ್ಲರಲ್ಲೂ ಗೊಂದಲ ಮೂಡಿಸಿತು.             ರೈತ ಸಂಘದ ನಾಗಣ್ಣ ಮಾತನಾಡಿ ನಾವು ಧರಣಿ ಪ್ರಾರಂಭಿಸುವಾಗ ೫೦೧೧ ರೂ ಕುಸಿತಕಂಡಿದ್ದ ಕೊಬ್ಬರಿಯ ಬೆಲೆಗೆ ನಮ್ಮ ಹೋರಾಟ ನಡೆದು ಅದರ

ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕದ ವೈಭವ

ಹುಳಿಯಾರು : ಕಾರ್ತಿಕಮಾಸದ ಕಡೆ ಸೋಮವಾರದ ಪ್ರಯುಕ್ತ ಹುಳಿಯಾರಿನ ಈಶ್ವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ವೈಭವದಿಂದ ಜರುಗಿತು. ಮುಂಜಾನೆ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು. ಈಶ್ವರ ಲಿಂಗಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು.ಕೆಂಚಮ್ಮದೇವಿಯನ್ನು ಕರೆತರಲಾಗಿತ್ತು ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸಂಜೆ ಈಶ್ವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವಾಲಯದಲ್ಲಿ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಆಗಮಿಸಿದ ಭಕ್ತಾಧಿಗಳಿಗೆ ದೇವಾಲಯ ಸಮಿತಿಯಿಂದ ಅನ್ನಸಂರ್ತಪಣೆ ನಡೆಯಿತು.

ಧರಣಿಗೆ ತಾಲ್ಲೂಕು ವಕೀಲರ ಸಂಘ ಬೆಂಬಲ

ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ಮುಂದುವರೆದ ಧರಣಿ ಸತ್ಯಾಗ್ರಹ ಹುಳಿಯಾರು: ಕೊಬ್ಬರಿ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತಸಂಘನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ವಿವಿಧ  ಸಂಘಟನೆಗಳು  ಕೈಜೋಡಿಸುವ ಮೂಲಕ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದ್ದು ತಾಲ್ಲೂಕು ವಕೀಲರ ಸಂಘ ಸಹ ಧರಣಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡಿತ್ತು.              ವಕೀಲ ಬಿ.ಕೆ.ಸದಾಶಿವು ಮಾತನಾಡಿ ರಾಜ್ಯ ಸರ್ಕಾರ ರೈತರಿಗಾಗಿ ಆವರ್ತನಿಧಿ ಸ್ಥಾಪಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದ ಪರಿಸ್ಥಿತಿಯಲ್ಲಿ ಬೆಂಬಲ ಬೆಲೆಯಲ್ಲಿ ಕೊಂಡು ರೈತರಿಗೆ ನೆರವಾಗಬೇಕು. ಆದರೆ ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಯಾವುದೇ ರಾಜ್ಯ ಸರ್ಕಾರಗಳು ಆವರ್ತನಿಧಿ ಸ್ಥಾಪಿಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದರು.          ಕೊಬ್ಬರಿಗೆ ಬೆಲೆ ಹೆಚ್ಚಳಕ್ಕೆ ಕಳೆದ ೧೫ ದಿವಸಗಳಿಂದಲೂ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರೂ ರೈತರ ಸಮಸ್ಯೆ ಏನೆಂದು ವಿಚಾರಿಸದ ಸರ್ಕಾರ ರೈತರ ಉಪವಾಸ ಸತ್ಯಾಗ್ರಹಕ್ಕೆ ಬೆದರಿ ಎಲ್ಲೋ ಕೂತು ಕೇಂದ್ರಸರ್ಕಾರದ ಬೆಂಬಲ ಬೆಲೆಗೆ ಒಂದು ಸಾವಿರ ಪ್ರೋತ್ಸಾಹ ಧನ ಘೋಷಿಸಿ ನಾಫೆಡ್ ಕೇಂದ್ರ ತೆರಸಿದೆ. ರೈತರು ಮಾತ್ರ ಸರ್ಕಾರ ನೀಡಲಿರುವ ಸಾವಿರ ರೂ. ಸಾಕಾಗುತ್ತಿಲ್ಲ ಎಂದು ನಾಫೆಡ್ ನತ್ತ ಮುಖ ಹಾಕದೆ ಧರಣಿ ಮುಂದುವರಿಸಿರುವುದು ಸರ್ಕಾರಕ್ಕೆ ಮುಖಭಂಗವಾಗಿದೆ.ಸರ್ಕಾರ ಈಗಲಾದರೂ ಎಚ್ಚೆತ್ತು ರೈತರ ಸಮಸ

ಪೂರ್ವ ಸಿದ್ಧತೆಯೇ ಮಾಡಿಲ್ಲ ....ಆದರೂ

ಪೂರ್ವ ಸಿದ್ಧತೆಯೇ ಮಾಡಿಲ್ಲ ....ಆದರೂ ಇಂದಿನಿಂದ ಆರಂಭವಾಗಲಿದೆ ನಫೆಡ್ ಕೊಬ್ಬರಿ ಖರೀದಿ ಕೇಂದ್ರ --------------------------------------- ಹುಳಿಯಾರು: ಸರ್ಕಾರದ ಬೆಂಬಲ ಬೆಲೆಯಲ್ಲಿ ಜಿಲ್ಲೆಯ ಎಂಟು ಕಡೆ ಕೊಬ್ಬರಿ ಖರೀದಿ ಕೇಂದ್ರವನ್ನು ನ.೨೩ರಿಂದ ಸ್ಥಾಪಿಸಲಾಗುವುದು ಎಂದು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಜಿಲ್ಲಾ ಉಪನಿರ್ದೇಶಕ ವಿ.ರಾಜಣ್ಣ ತಿಳಿಸಿದ್ದು ಇವರ ಹೇಳಿಕೆ ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಜಿಲ್ಲೆಯ ಎಂಟು ಕಡೆ ಕೊಬ್ಬರಿ ಖರೀದಿ ಕೇಂದ್ರವನ್ನು ನ.೨೩ರಿಂದ ಸ್ಥಾಪಿಸಲಾಗುವುದು ಎಂದು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಜಿಲ್ಲಾ ಉಪನಿರ್ದೇಶಕ ವಿ.ರಾಜಣ್ಣ ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಘೋಶಿಸಿದರು.              ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ಹನ್ನೆರಡನೇ ದಿನದ ಧರಣಿಯಲ್ಲಿ ಮಘಳವಾರದಂದು ಪಾಲ್ಗೊಂಡಿದ್ದ ಅವರು ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ,ತಿಪಟೂರು,ತುರುವೇಕೆರೆ,ಕುಣಿಗಲ್,ಗುಬ್ಬಿ, ಶಿರಾ,ತುಮಕೂರು ಗಳಲ್ಲಿ ನ. ೨೩ರ ಬುಧವಾರ ಖರೀದಿ ಕೇಂದ್ರವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಾಗುವುದು ಎಂದರು.            ಹುಳಿಯಾರಿನ ಮಾರುಕಟ್ಟೆ ಆವರಣದಲ್ಲಿರುವ ಗೋದಾಮಿನಲ್ಲಿ .ಕೇವಲ ಎರಡು ಚೀಲಗಳನಿಟ್ಟು ಪೂಜೆ ಮಾಡಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ರೈ

ಬುಧವಾರದಿಂದ ಕೊಬ್ಬರಿ ಖರೀದಿ ಆರಂಭಿಸುತ್ತೇವೆ ಧರಣಿ ಕೈ ಬಿಡಿ: ಎಪಿಎಂಸಿ ಡಿಡಿ

ಬುಧವಾರದಿಂದ ಕೊಬ್ಬರಿ ಖರೀದಿ ಆರಂಭಿಸುತ್ತೇವೆ ಧರಣಿ ಕೈ ಬಿಡಿ: ಎಪಿಎಂಸಿ ಡಿಡಿ ಫಸ್ಟ್ ರೈತರ ಕೊಬ್ಬರಿ ತೂಗಿ ಆಮೇಲೆ ಧರಣಿ ಕೈ ಬಿಡ್ತಿವಿ : ಧರಣಿ ನಿರತರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಮನವೊಲಿಕೆ ಪ್ರಯತ್ನವೂ ವಿಫಲ ------------------------------------------------- ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಹುಳಿಯಾರು ಎಪಿಎಂಸಿ ಎದುರು ಕಳೆದ ೧೧ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಹಾಗೂ ೨ ದಿನಗಳಿಂದ ಉಪವಾಸ ಕುಳಿತಿರುವ ಸ್ಥಳಕ್ಕೆ ತುಮಕೂರು ಎಪಿಎಂಸಿ ಉಪ ನಿರ್ದೆಶಕ ಡಾ.ರಾಜಣ್ಣ ಅವರು ಮಂಗಳವಾರ ಭೇಟಿ ನೀಡಿದರು. ನ್ಯಾಫೆಡ್ ಕೇಂದ್ರ ಆರಂಭಿಸಿ ರೈತರ ಕೊಬ್ಬರಿ ಖರೀಧಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು ಸೋಮವಾರ ತಡರಾತ್ರಿ ಫ್ಯಾಕ್ಸ್ ಮೆಸೆಜ್ ಬಂದಿದೆ. ಅಲ್ಲದೆ ರಾಜ್ಯ ಸರ್ಕಾರ ಸಹ ಮಂಗಳವಾರ ರಾತ್ರಿಯೊಳಗೆ ತನ್ನ ಪಾಲಿನ ಪ್ರೋತ್ಸಾಹ ಧನ ಎಷ್ಟೆಂದು ಘೋಷಿಸಲಿದ್ದು ಅದರಂತೆ ಬುಧವಾರದಿಂದ ಖರೀಧಿ ಕೇಂದ್ರ ಆರಂಭಿಸುತ್ತೇವೆ. ಹಾಗಾಗಿ ಧರಣಿ ಕೈ ಬಿಡಿ ಎಂದು ಡಾ.ರಾಜಣ್ಣ ಮನವಿ ಮಾಡಿದರು. ಹುಳಿಯಾರು ಎಪಿಎಂಸಿ ಎದುರು ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಉಪವಾಸ ಕುಳಿತಿರುವ ಕೆಂಕೆರೆ ಸತೀಶ್ ಅವರ ಮನವೊಲಿಸುತ್ತಿರುವ ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ ಹಾಗೂ ಎಪಿಎಂಸಿ ಡಿಡಿ ಡಾ.ರಾಜಣ್ಣ.                 ಕೇಂದ್ರ ಸರ್ಕಾರ ಖರೀಧಿ ಕೇಂದ್ರ ಆರಂಭಿಸಲು ನಿರ್

ಉಪವಾಸನಿರತರಲ್ಲಿ ನಾಲ್ಕು ಮಂದಿ ಆಸ್ಪತ್ರೆಗೆ ದಾಖಲು

ಕೆಂಕೆರೆಸತೀಶ್ ರಿಂದ ಮುಂದುವರಿದ ಉಪವಾಸ ಸತ್ಯಾಗ್ರಹ ಉಳಿದ ರೈತರಿಂದ ಮುಂದುವರಿದ ಧರಣಿ --------------------------- ಹುಳಿಯಾರು : ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ್ದ ಐವರು ರೈತರ ಪೈಕಿ ನಾಲ್ಕು ಮಂದಿ ಅಸ್ವಸ್ಥರಾಗಿದ್ದು ಧರಣಿ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ ಹಾಗೂ ತಹಸೀಲ್ದಾರ್ ಗಂಗೇಶ್ ಅವರುಗಳ ಆರೋಗ್ಯ ತಪಾಸಣೆ ನಡೆಸಿ ಬಲವಂತವಾಗಿ ಎಳನೀರು ಕುಡಿಸಿ ಉಪವಾಸ ಕೈ ಬಿಡಿಸಿ ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ.             ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್, ಉಪಾದ್ಯಕ್ಷ ಮಲ್ಲಿಕಾರ್ಜುನಯ್ಯ, ಹಿರಿಯ ರೈತ ಮುಖಂಡ ಸೂರಗೊಂಡನಹಳ್ಳಿ ಗಂಗಜ್ಜ,ಕೆಂಕೆರೆ ಗ್ರಾಪಂ ಸದಸ್ಯರಾದ ಕಾಡಿನರಾಜ ನಾಗರಾಜು ಅವರುಗಳೇ ಉಪವಾಸ ಸತ್ಯಗ್ರಹ ಹೂಡೀದವರಾಗಿದ್ದು ಸೋಮವಾರದಿಂದ ಹನಿ ನೀರು ಸಹ ಸೇವಿಸದೆ ಉಪವಾಸ ನಿರಶನ ನಡೆಸಿದ್ದರು.           ಇವರಲ್ಲಿ ಗ್ರಾಪಂ ಸದಸ್ಯಕಾಡಿನರಾಜ ನಾಗರಾಜು ಹಾಗೂ ಗಂಗಣ್ಣ ಅವರುಗಳು ಮಂಗಳವಾರ ೧೧ ಗಂಟೆಯಷ್ಟರಲ್ಲಿ ಶುಗರ್ ಹಾಗೂ ಬಿಪಿ ಕಡಿಮೆಯಾಗಿ ಅಸ್ವಸ್ಥಗೊಂಡರು. ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೆ ದೌಡಾಯಿಸಿ ಆರೋಗ್ಯ ತಪಾಸಣೆ ನಡ

ಅಂತೂ ಬಂದರೂ ತಹಸೀಲ್ದಾರ್ ಗಂಗೇಶ್

ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದಿಹೆ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೂ ಇವರನ್ನು ಸರ್ಕಾರದವತಿಯಿಂದ ಯಾರೊಬ್ಬರೂ ಕ್ಯಾರೇ ಎನ್ನದಿದ್ದರಿಂದ ತೀವ್ರ ಅಸಹನೆಗೊಳಗಾದ ರೈತರು ಇಂದು ರಸ್ತೆ ತಡೆ ಮತ್ತು ಐವರು ರೈತರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರಿಂದ ಎಚ್ಚತ್ತ ತಹಸೀಲ್ದಾರ್ ಗಂಗೇಶ್ ಇಂದು ಧರಣಿ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ಕಾಲ ಕಳೆದೂ ಸಮಸ್ಯೆ ಆಲಿಸಿ ಧರಣಿ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಪಟ್ಟರು. ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ಧ್ರಣಿ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಗಂಗೇಶ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರ ಮನವೊಲಿಸಲು ಮುಂದಾಗಿರುವುದು         ಧರಣಿ ನಿರತರೊಂದಿಗೆ ಮಾತನಾಡಿದ ತಹಸೀಲ್ದಾರ್ ಗಂಗೇಶ್ ನನ್ನ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆ ಇದಾಗಿಲ್ಲ.ಇಲ್ಲಿಯವರೆಗಿನ ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು ಇಲ್ಲಿನ ಆಗುಹೋಗುಗಳನ್ನು ಮತ್ತೊಮ್ಮೆ ಅವರಿಗೆ ತಿಳಿಸುವುದಾಗಿ ಹೇಳಿದರು.ಅಮರಣಾಂತ ಉಪವಾಸವನ್ನು ಕೈಬಿಡುವಂತೆ ಹಾಗೂ ಯಾವುದೇ ಕ್ಷಣಕ್ಕೂ ದುಡುಕು ನಿರ್ಧಾರವನ್ನು ಕೈಗೊಳ್ಳದಂತೆ ಮನವಿ ಮಾಡಿದರು.          ಉಪವಾಸ ಸತ್ಯಾಗ್ರಹದಲ್ಲಿ ವೃದ್ಧರೊಬ್ಬರು ಇರುವುದರಿಂದ ತಾಲ್ಲೂಕ್ ವೈದ್ಯಾಧಿಕಾರಿಗಳೊಂದಿಗೆ

ಸರ್ಕಾರದಿಂದ ದೊರೆಯದ ಸ್ಪಂದನೆ :ಉಪವಾಸ ಕುಳಿತ ಐವರು ರೈತರು

ಬುಧವಾರದಂದು ಬೆಲೆ ಘೋಷಣೆಯಾಗದಿದ್ದಲ್ಲಿ ವಿಷ ಸೇವಿಸುವ ನಿರ್ಧಾರ ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇದುವರೆಗೂ ಶಾಂತಿಯುತವಾಗಿ ಸಾಗಿದ್ದು ಹತ್ತು ದಿನ ಕಳೆದರೂ ಸರ್ಕಾರದ ಪ್ರತಿನಿಧಿಗಳಾಗಲಿ,ಶಾಸಕರಾಗಲಿ,ಈ ಹಿಂದೆ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರಾಗಲಿ ಧರಣಿನಿರತರ ಅಹವಾಲು ಕೇಳದೆ ಉದಾಸೀನ ಮಾಡುತ್ತಾ ಬಂದಿದ್ದರಿಂದ ತೀವ್ರ ಅಸಹನೆಗೊಳಗಾದ ರೈತರು ತಮ್ಮ ಪ್ರತಿಭಟನೆಯ ಹಾದಿಯನ್ನು ಬದಲಾಯಿಸಿದ್ದು ರಸ್ತೆ ತಡೆ ನಂತರ ಐವರು ರೈತರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿದೆ.                              ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ತಿಮ್ಮನಹಳ್ಳಿ ಲೋಕೇಶ್, ಉಪಾದ್ಯಕ್ಷ ಮಲ್ಲಿಕಾರ್ಜುನಯ್ಯ, ಹಿರಿಯ ರೈತ ಮುಖಂಡ ಸೂರಗೊಂಡನಹಳ್ಳಿ ಗಂಗಜ್ಜ,ಕೆಂಕೆರೆ ಗ್ರಾಪಂ ಸದಸ್ಯರಾದ ಕಾಡಿನರಾಜ ನಾಗರಾಜು ಅಮರಣಾಂತರ ಉಪವಾಸ ಸತ್ಯಗ್ರಹ ಕೂರುವ ಮೂಲಕ ಚಳುವಳಿಯನ್ನು ಮಾಡು ಇಲ್ಲವೇ ಮಡಿ ಎನ್ನುವಂತೆ ಮಾಡಿದ್ದಾರೆ.           ಈ ಸಂದರ್ಭದಲ್ಲಿ ಉಪವಾಸ ಕುಳಿತ ತಿಮ್ಮನಹಳ್ಳಿ ಲೋಕೇಶ್ ಅವರು ಮಾತನಾಡಿ ಗಾಂಧೀಜಿ ಮಾರ್ಗದಲ್ಲಿ ನಾವು ಶಾಂತಿಯುತ ಧರಣಿ ನಡೆಸುತ್ತಿದ್ದೇವೆ. ಆದರೂ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತಿಲ್ಲ.ಬೆ

ಹುಳಿಯಾರಿನಲ್ಲಿ ಕೊಬ್ಬರಿ ಬೆಲೆಗಾಗಿ ರೈತರಿಂದ ರಸ್ತೆ ತಡೆ

ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಕಾರರು : ನಿರ್ಲಕ್ಷ್ಯದ ವಿರುದ್ಧ ಸಿಡಿದೆದ್ದ ರೈತರು ------------------------------------ ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಹುಳಿಯಾರು ಎಪಿಎಂಸಿ ಎದುರು ಕಳೆದ ೧೦ ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸರ್ಕಾರವೂ ಸೇರಿದಂತೆ ಜನಪ್ರತಿನಿಧಿಗಳು ಗಮನಹರಿಸದಿದ್ದು ರೈತರ ಶಾಂತಿಯುತ ಧರಣಿ ಮತ್ತೊಂದು ಮಜಲು ತಲುಪಲು ಕಾರಣವಾಗಿ ಸಿಡಿದೆದ್ದ ರೈತರು ಸೋಮವಾರ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.             ಎಪಿಎಂಸಿ ಧರಣಿ ಸ್ಥಳದಿಂದ ರಾಷ್ಟ್ರೀಯ ಹೆದ್ದಾರಿಯವರೆವಿಗೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹೆದ್ದಾರಿಯಲ್ಲಿ ವಾಹನಗಳಿಗೆ ಅಡ್ಡಲಾಗಿ ನಿಂತು ದ್ವಿಚಕ್ರ ವಾಹನಗಳೂ ಸೇರಿದಂತೆ ಯಾವುದೇ ವಾಹನಗಳನ್ನು ಬಿಡದೆ ರಸ್ತೆ ನಡೆಸಿದರು.ರಸ್ತೆ ತಡೆ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರಿಂದ ಪಿಎಸ್‌ಐ ಪ್ರವೀಣ್ ಕುಮಾರ್ ಅವನ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.               ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಪಾದಯಾತ್ರೆ, ಬೈಕ್ ರ್ಯಾಲಿ, ಅಹೋರಾತ್ರಿ ಧರಣಿ ಸೇರಿದಂತೆ ಕಳೆದ ೩ ತಿಂಗಳಿಂದ ಕೊಬ್ಬರಿ ಬೆಲೆಗಾಗಿ ಪ್ರತಿಭಟನೆ ಮಾಡಲಾಗುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೊ

ರೈತರ ಶಾಂತಿಯುತ ಧರಣಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಬೇಕು :ಸೀಮೆಎಣ್ಣೆ ಕೃಷ್ಣಯ್ಯ

ಇಂದಿನ ಧರಣಿಗೆ ಕಾಂಗ್ರೆಸ್, ತಾಲ್ಲೂಕ್ ಕನ್ನಡ ಸಂಘ,ದಲಿತ ಸಂಘರ್ಷ ಸಮಿತಿ,ಜಿಲ್ಲಾ ಜಾಗೃತಿ ಸೇನೆ ಬೆಂಬಲ ಹುಳಿಯಾರು: ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಲೆ ಕೊಬ್ಬರಿಯಾಗಿದ್ದು ಕಳೆದ ವರ್ಷ ೧೮ ಸಾವಿರವಿದ್ದ ಕೊಬ್ಬರಿ ಈಗ ೬ ಸಾವಿರಕ್ಕೆ ಕುಸಿದಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡಲೇ ರೈತರ ನೆರವಿಗೆ ಧಾವಿಸಬೇಕಿದ್ದು ಇನ್ನೂ ಮೀನಾಮೇಷ ಎಣಿಸುವುದರಲ್ಲಿ ಅರ್ಥವಿಲ್ಲ. ರೈತರು ಗಾಂಧೀಜಿ ಆಶಯದಂತೆ ಶಾಂತಿಯುತ ಧರಣಿ ನಡೆಸುತ್ತಿದ್ದು ಅವರ ತಾಳ್ಮೆ ಪರೀಕ್ಷಿಸದೆ,ಅವರನ್ನು ಕೆರಳಿಸುವ ಪ್ರಯತ್ನ ಮಾಡದೆ ರೈತರಿಗೆ ಸ್ಪಂದಿಸಬೇಕು. ರೈತರ ಧರಣಿಗೆ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ ತಿಳಿಸಿದರು. ಹುಳಿಯಾರಿನಲ್ಲಿ ಕೊಬ್ಬರಿ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿದರು.        ಹುಳಿಯಾರು ಎಪಿಎಂಸಿ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.         ಜನಕ್ಕಾಗುವ ಅನ್ಯಾಯವನ್ನು ವಿರೋಧಿಸುವ ವೇದಿಕೆಗಳು ಈ ಚಳುವಳಿಗಳಾಗಿದ್ದು ಜನಬೆಂಬಲವಿಲ್ಲದಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ. ಕೇಂ

ರೈತರ ಸಮಸ್ಯೆ ಆಲಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ...ವ್ಯಾಕ್ ಥೂ

7ನೇ ದಿನದ ಆಹೋರಾತ್ರಿ ಧರಣಿಯಲ್ಲಿ ಉಗಿಯುವ ಚಳುವಳಿ ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪಟ್ಟಣದ ಎಪಿಎಂಸಿಯಲ್ಲಿ ರೈತಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು ಚಳುವಳಿಗಾರರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಸರ್ಕಾರ ವಿರುದ್ದ ಹರಿಹಾಯ್ದ ರೈತರು ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಂದು ಬರೆದಿದ್ದ ಪ್ಲಕ್ಸ್ ಅನ್ನು ಅಳವಡಿಸಿ ಎಲೆಅಡಿಕೆ ಹಾಕಿಕೊಂಡು ಉಗಿಯುವ ಚಳುವಳಿ ನಡೆಸುವ ಮೂಲಕ ವಿಭಿನ್ನ ಹಾದಿ ಹಿಡಿದರು.              7 ದಿನಗಳು ಕಳದರೂ ಸ್ಪಂದಿಸದ ಸರ್ಕಾರದ ವಿರುದ್ಧ ಕೆಂಡಕಾರಿದ ಸಂಚಾಲಕ ಕೆಂಕೆರೆ ಸತೀಶ್ ಜನಪ್ರತಿನಿಧಿಗಳದು ದಪ್ಪ ಚರ್ಮವಾಗಿರುವುದರಿಂದ ಮನವಿ, ಹೋರಾಟಗಳು ಅವರ ಗಮನಕ್ಕೆ ಬಾರವು.ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ರೈತರ ಪಾಲಿಗೆ ಸತ್ತಿದ್ದು ರೈತರ ಸಮಸ್ಯೆ ಆಲಿಸದ,ಸಮಸ್ಯೆಗೆ ಸ್ಪಂದಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ...ವ್ಯಾಕ್ ಥೂ ಎಂದು ಸರ್ಕಾರದ ಮುಖಕ್ಕೆ ಉಗಿಯುವ ಚಳುವಳಿ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ತೀವ್ರತರವಾಗಿ ಕೊಂಡೊಯ್ಯುವುದಾಗಿ ಎಚ್ಚರಿಸಿದರು.              ಸರ್ಕಾರಗಳು ರೈತನ ನೆರವಿಗೆ ಧಾವಿಸುತ್ತಿಲ್ಲ. ಬರ ಸ್ಥಿತಿ ಅವಲೋಕನ ಎಂಬುದು ಎರಡೂ ಸರ್ಕಾರಗಳ ಕಣ್ಣೊರಿಸುವ ನಾಟಕವಾಗಿದೆ. ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆ ಬಾರದೆ, ರೈತರ ಜಾನುವಾರುಗಳಿಗೆ ಮೇವಿಲ್ಲದೆ ರೈತ

ರೈತರ ಬಂಧನ:ಚಂದ್ರಪ್ಪ ಬಣದಿಂದ ಖಂಡನೆ

ಹುಳಿಯಾರು: ಕೊಬ್ಬರಿ ಬೆಂಬಲ ಬೆಲೆ ಕೇಳಲು ಹೊರಟ ರೈತರನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ,ಅವರನ್ನು ಕೂಡಲೇ ಬಿಡುಗಡೆಮಾಡದಿದಲ್ಲಿ ರೈತಸಂಘದ ಹೊಸಳ್ಳಿ ಚಂದ್ರಪ್ಪ ಬಣದಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತುಮಕೂರು ಜಿಲ್ಲಾ ರೈತಸಂಗದ ಹೊಸಳ್ಳಿ ಚಂದ್ರಪ್ಪ ಬಣದ ತಾಲ್ಲೂಕ್ ಅಧ್ಯಕ್ಷ ಈಶ್ವರಪ್ಪ ಎಚ್ಚರಿಸಿದ್ದಾರೆ.          ಹುಳಿಯಾರಿನ ಪ್ರಧಾನ ಕಚೇರಿಯಲ್ಲಿ ಈ ಬಗ್ಗೆ ಸಭೆ ಸೇರಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಬಳಿ ರೈತರುಗಳೇ ಸಮಸ್ಯೆ ಹೇಳಲಿಕ್ಕೆ ಹೋದಾಗ ತುಮಕೂರಿನಿಂದ ಅರ್ಧಕ್ಕೆ ನಮ್ಮನ್ನು ವಾಪಸ್ಸು ಕಳುಹಿಸಿದ್ದರು.ಇದೀಗ ನಮ್ಮ ಜಾಗಕ್ಕೆ ಮುಖ್ಯಮಂತ್ರಿಗಳು ಬಂದಿದ್ದು ಅಲ್ಲಿಯೇ ತೆರಳಿ ನಮ್ಮ ಸಮಸ್ಯೆ ಹೇಳಿಕೊಳ್ಳೊಣವೆಂದು ಹೊರಟರೆ ಎಪಿಎಂಸಿಯ ಮುಂದೆ ರೈತರುಗಳನ್ನು ಬಂಧಿಸಿದ್ದು ಇದೇಂತ ರೈತ ಪರ ಸರ್ಕಾರವೆಂದು ಜಗಜ್ಜಾಹಿರಾಗಿದೆ ಎಂದು ಲೇವಡಿ ಮಾಡಿದರು.           ಬರಗಾಲ ಪೀಡಿತ ಪ್ರದೇಶಗಳ ವೀಕ್ಷಣೆಗ ಬಂದಿರುವ ಮುಖ್ಯಮಂತ್ರಿಗಳು ಮಳೆಬೆಳೆಯಿಲ್ಲದೆ ಕಂಗೆಟ್ಟಿರುವ ತಾಲ್ಲೂಕಿನ ರೈತರ ದುಸ್ಥಿತಿ ಅರಿತು ರೈತರ ಸಂಪೂರ್ಣ ಬೆಳೆ ವಿಮೆ ಹಣ ಬರುವಂತೆ ಕ್ರಮಕೈಗೊಳ್ಳಬೇಕು ಹಾಗೂ ಬರಗಾಲದಿಂದ ತತ್ತರಿಸಿರುವ ರೈತಾಪಿ ವರ್ಗದವರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.           ಜಿಲ್ಲಾಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಮಾತನಾಡಿ ತುಮಕೂರು ಜಿಲ್ಲೆಗೆ ೩೬೦ ಕೋಟಿ ಬರಪರಿಹಾರ ನಿಧಿ ಬಿಡುಗಡೆ ಮಾಡಿರುವುದಾಗಿ ಹೇಳಿರುವ

ಮುಖ್ಯಮಂತ್ರಿಗಳನ್ನು ಭೇಟಿ ಮಾಡ ಹೊರಟ ರೈತರ ಬಂಧನ

        ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರ ಪರಿಸ್ಥಿತಿ ವೀಕ್ಷಿಸಲು ಹಾಗೂ ತಿಪಟೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದಂತಹ ಮುಖ್ಯಮಂತ್ರಿಗಳು ಹುಳಿಯಾರಿನ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಜೊತೆ ಚರ್ಚಿಸಿ ಕೊಬ್ಬರಿ ಬೆಂಬಲ ಬೆಲೆ ಘೋಷಿಸಬೇಕು ಇಲ್ಲದಿದ್ದಲ್ಲಿ ಮುಖ್ಯಮಂತ್ರಿಗಳು ಸಾಗುವ ಮಾರ್ಗಮಧ್ಯೆ ವಾಹನವನ್ನು ತಡೆದು ಕಪ್ಪುಬಾವುಟ ಪ್ರದರ್ಶಿಸಿ ಘೇರಾವ್ ಮಾಡುವುದಾಗಿ ಎಚ್ಚರಿಸಿದ್ದ ರೈತಸಂಘದ ಪ್ರತಿಭಟನಾಕಾರರನ್ನು ಹುಳಿಯಾರಿನ ಎಪಿಎಂಸಿ ಆವರಣದಲ್ಲಿ ಪೋಲಿಸರು ಬಂಧಿಸಿದ ಘಟನೆ ಮಂಗಳವಾರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಜರುಗಿತು. ಬರ ಅಧ್ಯಯನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಭೇಟಿಮಾಡ ಹೊರಟ ಪ್ರತಿಭಟನಕಾರರನ್ನು ಹುಳಿಯಾರು ಎಪಿಎಂಸಿ ಮುಂಭಾಗ ಪೋಲಿಸರು ಬಂಧಿಸಿದರು.          ಇದಕ್ಕೂ ಮುನ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ಸಂಸದ ಮುದ್ಧಹನುಮೇಗೌಡ ಹಾಗೂ ಚಿತ್ರದುರ್ಗ ಸಂಸದ ಬಿ.ಎನ್.ಚಂದ್ರಪ್ಪ ಪ್ರತಿಭಟನಕಾರರ ಸಮಸ್ಯೆ ಆಲಿಸಿದರು.ರೈತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ತರುವುದಾಗಿ ಭರವಸೆ ನೀಡಿದರು.ಆವರು ನಿರ್ಗಮಿಸುತ್ತಿದ್ದಂತೆ ಮುಂಜಾನೆಯೇ ಆಗಮಿಸಿದ್ದ ಕುಣಿಗಲ್ ವೃತ್ತನಿರೀಕ್ಷಕ ಬಾಳೇಗೌಡ ನೇತೃತ್ವದ ತುಮಕೂರು ಗ್ರಾಮಾಂತರ ಪಿಐಸೈ ,ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್ ಅವರುಗಳ ತಂಡ ಎಪಿಎಂಸಿ ಮುಖ್ಯದ್ವಾರಕ್ಕೆ ಬೀಗಹಾಕಿಸಿ ಯಾರನ್ನೂ ಹೊರಗೆ