ಹುಳಿಯಾರು:ಜಿಲ್ಲೆಯಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿ ಹೆಸರಾಗಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳು,ಸರ್ಕಾರಿ ಜಯಂತಿಗಳು ಕಾಟಚಾರಕ್ಕೆಂಬಂತಾಗಿದೆ.
ಹುಳಿಯಾರಿನ ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಟಿಪ್ಪುಜಯಂತಿ. |
ಯಾವುದೇ ಜಯಂತಿಯಿರಲಿ ಅದು ಕೇವಲ ಅಧ್ಯಕ್ಷರು ಹಾಗೂ ಬೆರಳೇಣಿಕೆಯ ಸದಸ್ಯರಿಗಷ್ಟೆ ಸೀಮಿತವೆಂಬಂತೆ ಆಚರಿಸಲಾಗುವ ಪರಿಪಾಠ ಬೆಳೆದುಬಂದಿದೆ.
ಯಾವುದೇ ಕಾರ್ಯಕ್ರಮಕ್ಕೂ ರೂಪುರೇಷೆಗಳಿರುವುದಿಲ್ಲ.ಐದಾರು ಮಂದಿ ಸದಸ್ಯರು,ಮೂರ್ನಾಲು ಮಂದಿ ಸಿಬ್ಬಂದಿ,ಒಂದಷ್ಟು ಜನ ಸೇರಿ ಆಯಾ ಜಯಂತಿಯಂದು ಸಂಬಂಧಿಸಿದ ಮಹನೀಯರ ಫೋಟೊ ಇಟ್ಟು ಪೂಜೆ ಮಾಡಿ ಜಯಂತಿ ಮಾಡಿದ್ದು ಮುಗಿಯಿತು ಎಂಬ ಮನೋಭಾವದಿಂದ ಮನೆ ಸೇರುವ ಕಾರ್ಯಕ್ರಮಗಳಾಗಿರುತ್ತದೆ.
೩೯ ಮಂದಿ ಸದಸ್ಯರು ,ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿಯಿರುವ ಪಂಚಾಯ್ತಿಯಲ್ಲಿ ಕಾಟಾಚಾರದ ಕಾರ್ಯಕ್ರಮಗಳು ನಡೆಯುತ್ತಿರುವುದಕ್ಕೆ ಯಾರು ಹೊಣೆ ಎಂಬಂತಾಗಿದೆ.ಅತಿಥಿಗಳು,ಸಭಿಕರು ಸೇರಿ ಹತ್ತುಹನ್ನೆರಡು ಮಂದಿಯೂ ಮೀರಿರುವುದಿಲ್ಲ.ಸಾರ್ವಜನಿಕರಂತೂ ಯಾವುದೇ ಜಯಂತಿಯಿಂದ ದುರಾದೂರ.ಸದಸ್ಯರು ಬರುವಂತೆ ನೋಡಿಕೊಳ್ಳಬೇಕಾದ ಪಿಡಿಓ ಗಳಾಗಲಿ ಕಾರ್ಯದರ್ಶಿಗಳಾಗಲಿ ಜವಬ್ದಾರಿಯಾಗಿ ಕಾರ್ಯ ನಿರ್ವಹಿಸದೆ ಅವರುಗಳೆ ಗೈರಾಗುವುದು ಎಷ್ಟರ ಮಟ್ಟಿಗೆ ಎನ್ನುವ ಪ್ರಶ್ನೆ ಸದಸ್ಯರುಗಳಲ್ಲೆ ಕೇಳಿಬರುತ್ತದೆ.
ಇಂದಿನ ಟಿಪ್ಪುಜಯಂತಿ ಕಾರ್ಯಕ್ರಮದಲ್ಲಿ ಸೇರಿದ್ದ ಮುಸ್ಲಿಂ ಬಾಂಧವರುಗಳೆಲ್ಲರೂ ಸದಸ್ಯರುಗಳೆ.ಇವರೊಟ್ಟಿಗೆ ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್ ,ಸಿಬ್ಬಂದಿ ಕೃಷ್ಣ ಮೂರ್ತಿ ಬಿಟ್ತರೆ ಮತ್ಯಾರು ಇಲ್ಲ.ಕಾರ್ಯದರ್ಶಿ,ಪಿಡಿಓ ನಾಪತ್ತೆ.ಟಿಪ್ಪುಜಯಂತಿಯಂದು ಟಿಪ್ಪು ಬಗ್ಗೆ ಮಾತಾಡುವವರು ಕೂಡ ಇಲ್ಲ.ಹೋಗಲಿ ಸಮುದಾಯದ ಎಲ್ಲರನ್ನೂ ಆಹ್ವಾನಿಸಲಾಗಿದೆಯೇ ಎಂದರೆ ಅದೂ ಇಲ್ಲಾ.
ಮುಂದಾದರೂ ಕೇವಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಪೂಜೆಗೆ ಸೀಮಿತವಾಗುವ ಐದತ್ತು ನಿಮಿಷದ ಕಾರ್ಯಕ್ರಮದ ಬದಲು ಸಮುದಾಯದ ಎಲ್ಲರೂ ಪಾಲ್ಗೊಂಡು,ಆಯಾ ಮಹಾನುಭಾವರ ಬಗ್ಗೆ ಸಂದೇಶ ಭಾಷಣ ನೀಡಿ ಅರ್ಥಪೂರ್ಣವಾಗಿ ಆಚರಿಸುವಂತಾದಾಗ ಮಾತ್ರ ಜಯಂತಿಗಳ ಆಚರಣೆ ಸಾರ್ಥಕವಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ