ಹುಳಿಯಾರು:ಪಟ್ಟಣದ ಟಿಪ್ಪು ಸುಲ್ತಾನ್ ಯುವಕ ಸಂಘದವರು ನಿರ್ಮಿಸಲು ಹೊರಟಿರುವ ಟಿಪ್ಪು ಭವನಕ್ಕೆ ಶಾಸಕರ ನಿಧಿಯಿಂದ ೪.೫ಲಕ್ಷ ಅನುದಾನ ಮಂಜೂರುಮಾಡಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಟಿಪ್ಪುಸುಲ್ತಾನ್ ಯುವಕರ ಸ್ವಸಹಾಯ ಸಂಘದ ವತಿಯಿಂದ ಮದೀನ ಮಸೀದಿ ಬಳಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಸಂಘ ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಪ್ರವರ್ಧಮಾನಕ್ಕೆ ಬರಲಿ ಎಂದು ಆಶಿಸಿದ ಅವರು ಟಿಪ್ಪು ಭವನ ಉತ್ತಮ ರೀತಿಯಲ್ಲಿ ಕಟ್ಟಿಕೊಂಡು ಭವನವನ್ನು ಸಮಾಜದ ಉತ್ತಮ ಕಾರ್ಯಕ್ಕೆ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.ಈ ಭವನ ಟಿಪ್ಪು ಸುಲ್ತಾನ್ ದೇಶ ಪ್ರೇಮ, ಅವರ ಸಾಧನೆಗಳನ್ನು , ಇತಿಹಾಸವನ್ನು ಸಾದರಪಡಿಸುವ ಕೇಂದ್ರವಾಗಲಿ ಎಂದರು.ಟಿಪ್ಪು ಆದರ್ಶವನ್ನು ಮೈಗೂಡಿಸಿಕೊಂಡು ಇಂದಿನ ಯುವಶಕ್ತಿ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗಿ ಸ್ವಾಸ್ಥ್ಯ ಸಮಾಜದ ಪ್ರಗತಿಗೆ ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದರು.
ಹುಳಿಯಾರಿನಲ್ಲಿ ಗುರುವಾರದಂದು ಟಿಪ್ಪು ಸುಲ್ತಾನ್ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಬಾಬು ದ್ವಜಾರೋಹಣ ನೆರವೇರಿಸಿದರು.ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಟಿಪ್ಪು ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು..ಕನ್ನಡ ಬಾವುಟದ ಧ್ವಜಾರೋಹಣ ನೆರವೇರಿಸಿ ಭವನೇಶ್ವರಿ ತಾಯಿಗೆ ಜೈಕಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು.ಟಿಪ್ಪುಸುಲ್ತಾನ್ ವೇಷಧಾರಿಗಳು ಗಮನ ಸೆಳೆದರು.
ಕಾವಲಟ್ಟಿ ಬಾಬಾ,ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್ ,ಅನಿಸ್ ಖೈಸರ್,ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್,ಜಾಮಿಯ ಮಸೀದಿ ಮುತುವಲ್ಲಿ ಜಬೀಉಲ್ಲಾ ,ರೈತಸಂಘದ ಸತೀಶ್,ಜಹೀರ್ ಸಾಬ್,ಮುತುವಲ್ಲಿ ಭೈಜುಸಾಬ್,ಅಶೋಕ್ ಬಾಬು,ಗೀತಾಬಾಬು, ಮಾಜಿ ಸಂಘದ ಅಧ್ಯಕ್ಷ ಮಹ್ಮದ್ ಅಪ್ಸರ್,ಇಮ್ರಾಜ್,ಸದ್ದಾಂ ಹುಸೇಣ್,ಮಹಮದ್ ಅಜಹರ್,ಮಹಮದ್ ಫಯಾಜ್ ,ಸೈಯದ್ ಇರ್ಫಾನ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ