ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹುಳಿಯಾರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದಿಹೆ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೂ ಇವರನ್ನು ಸರ್ಕಾರದವತಿಯಿಂದ ಯಾರೊಬ್ಬರೂ ಕ್ಯಾರೇ ಎನ್ನದಿದ್ದರಿಂದ ತೀವ್ರ ಅಸಹನೆಗೊಳಗಾದ ರೈತರು ಇಂದು ರಸ್ತೆ ತಡೆ ಮತ್ತು ಐವರು ರೈತರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರಿಂದ ಎಚ್ಚತ್ತ ತಹಸೀಲ್ದಾರ್ ಗಂಗೇಶ್ ಇಂದು ಧರಣಿ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ಕಾಲ ಕಳೆದೂ ಸಮಸ್ಯೆ ಆಲಿಸಿ ಧರಣಿ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಪಟ್ಟರು.
ಹುಳಿಯಾರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ಧ್ರಣಿ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಗಂಗೇಶ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರ ಮನವೊಲಿಸಲು ಮುಂದಾಗಿರುವುದು |
ಧರಣಿ ನಿರತರೊಂದಿಗೆ ಮಾತನಾಡಿದ ತಹಸೀಲ್ದಾರ್ ಗಂಗೇಶ್ ನನ್ನ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆ ಇದಾಗಿಲ್ಲ.ಇಲ್ಲಿಯವರೆಗಿನ ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು ಇಲ್ಲಿನ ಆಗುಹೋಗುಗಳನ್ನು ಮತ್ತೊಮ್ಮೆ ಅವರಿಗೆ ತಿಳಿಸುವುದಾಗಿ ಹೇಳಿದರು.ಅಮರಣಾಂತ ಉಪವಾಸವನ್ನು ಕೈಬಿಡುವಂತೆ ಹಾಗೂ ಯಾವುದೇ ಕ್ಷಣಕ್ಕೂ ದುಡುಕು ನಿರ್ಧಾರವನ್ನು ಕೈಗೊಳ್ಳದಂತೆ ಮನವಿ ಮಾಡಿದರು.
ಉಪವಾಸ ಸತ್ಯಾಗ್ರಹದಲ್ಲಿ ವೃದ್ಧರೊಬ್ಬರು ಇರುವುದರಿಂದ ತಾಲ್ಲೂಕ್ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ಸ್ಥಳದಲ್ಲೇ ೧೦೮ ಅಂಬ್ಯೂಲೆನ್ಸ್ ಇರುವ ವ್ಯವಸ್ಥೆ ಮಾಡಿದರು.ಪಿಎಸೈ ಪ್ರವೀಣ್ ಕುಮಾರ್ ಕೂಡ ಜಾಗ್ರತೆ ವಹಿಸಿದ್ದು ಯಾವುದೇ ಅನಾಹುತ ಸಂಭವಿಸಲು ಅವಕಾಶವಾಗದಂತೆ ಪೋಲಿಸ್ ಕಾವಲು ಹಾಕಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ