ಹುಳಿಯಾರು: ಹೋಬಳಿ ಯರೇಹಳ್ಳಿ ಮಜುರೆಯ ಶ್ರೀದೊಡ್ಡಮ್ಮದೇವಿ ಹಾಗೂ ಶ್ರೀ ಹಟ್ಟಿಯಮ್ಮದೇವಿಯ ದೇವಾಲಯ ಪ್ರವೇಶ ಮತ್ತು ಗೋಪುರ ಕಳಶ ಸ್ಥಾಪನಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನವೆಂಬರ್ ೫ರಿಂದ ಆರಂಭಗೊಂಡು ಎರಡು ದಿನಗಳ ಕಾಲ ನಡೆಯಲಿವೆ.
ನವೆಂಬರ್ ೫ ರಂದು ಸಂಜೆ ೮ ಗಂಟೆಗೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ದೇವರುಗಳು ಆಗಮಿಸಲಿವೆ. ದೇವಾಲಯದ ಆವರಣದಲ್ಲಿ ದೇವಿಗೆ ಷಷ್ಠಿ, ಅಭಿಷೇಕ, ಮಹಾಲಕ್ಷ್ಮೀ ಸಹಸ್ರ ನಾಮಾರ್ಚನೆ, ನವಗ್ರಹಾರಾಧನೆ, ಪಂಚಕಳಸ ಸ್ಥಾಪನೆ, ೧೦೧ ಕಳಶ ಸ್ಥಾಪನೆ, ವಾಸ್ತುಪೂಜೆ, ಅಗ್ನಿ ಪ್ರತಿಷ್ಠಾಪನೆ, ನವಗ್ರಹ, ಸುದರ್ಶನ, ಶ್ರೀದುರ್ಗಾಹೋಮ, ಮಹಾಮಂಗಳಾರತಿ ನಡೆಯಲಿದೆ.
ನವೆಂಬರ್ ೬ ರಂದು ಬೆಳಿಗ್ಗೆ ೯.೩೦ಕ್ಕೆ ಪಂಚಕಳಶ ಸ್ಥಾಪನೆ ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮತ್ತು ದಾಸೋಹ ನಡೆಯಲಿದೆ.
ಮಧ್ಯಾಹ್ನ ೧೨ಕ್ಕೆ ನಡೆಯುವ ಧಾರ್ಮಿಕ ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಎಸ್.ಕಿರಣ್‌ಕಮಾರ್ ನಡೆಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ವಹಿಸಲಿದ್ದಾರೆ. ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಆಗಮಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ