ಧರಣಿ ಸ್ಥಳಕ್ಕೆ ಮುಖ್ಯಮಂತ್ರಿಗಳು ಬಾರದಿದ್ದಲ್ಲಿ
ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೇರಾವ್
------------
ಹುಳಿಯಾರು:ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರ ಪರಿಸ್ಥಿತಿ ವೀಕ್ಷಿಸಲು ಹಾಗೂ ತಿಪಟೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಮುಖ್ಯಮಂತ್ರಿಗಳು ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಜೋತೆ ಸ್ವಲ್ಪ ಸಮಯ ಚರ್ಚಿಸದಿದ್ದಲ್ಲಿ ಮುಖ್ಯಮಂತ್ರಿಗಳು ಸಾಗುವ ಮಾರ್ಗಮಧ್ಯೆ ವಾಹನವನ್ನು ತಡೆದು ಕಪ್ಪುಬಾವುಟ ಪ್ರದರ್ಶಿಸಿ ಘೇರಾವ್ ಮಾಡುವುದಾಗಿ ಹುಳಿಯಾರಿನಲ್ಲಿ ನಡೆಯುತ್ತಿರುವ ಚಳುವಳಿಯಲ್ಲಿ ಪಾಲ್ಗೊಂಡಿರುವ ಪ್ರತಿಭಟನಕಾರರು ಎಚ್ಚರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಕಲ್ಪತರು ನಾಡಿನ ಪ್ರಮುಖ ಬೆಳೆಯಾದ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಅಲ್ಲದೆ ತಾಲ್ಲೂಕಿನಲ್ಲಿ ತಾಂಡವಾವಾಡುತ್ತಿರುವ ಬರಪರಿಸ್ಥಿತಿಯಿಂದಾಗಿ ರೈತರು ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ಕೂಡಲೇ ನ್ಯಾಫೆಡ್ ಕೇಂದ್ರ ತೆರದು ಕೊಬ್ಬರಿಯನ್ನು ೧೫ಸಾವಿರ ರೂಗಳಿಗೆ ಖರೀದಿಸಲು ಮುಖ್ಯಮಂತ್ರಿಗಳು ಸ್ಥಳದಲ್ಲೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಈ ಹಿಂದೆ ನಡೆದ ಪಾದಾಯಾತ್ರೆಯ ವೇಳೆ ರೈತ ಸಂಘದ ಮುಖಂಡರನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಬ್ಬರಿಗೆ ಬೆಂಬಲ ಬೆಲೆ ನೀಡುವುದಾಗಿ ಹಾಗೂ ಈ ಸಂಬಂಧ ಕೇಂದ್ರಸರಕಾರದ ಜೊತೆ ಚರ್ಚಿಸಿ ಬೆಂಬಲ ಬೆಲೆ ಹೆಚ್ಚಳ ಮಾಡುವುದಾಗಿ ನೀಡುವುದಾಗಿ ಭರವಸೆ ನೀಡಿದ್ದರು.ಆದರೆ ಭರವಸೆ ನೀಡಿ ತಿಂಗಳುಗಳೇ ಕಳೆದರು ಸಹಾ ಇದುವರೆಗೂ ಯಾವುದೆ ಪ್ರಯೋಜನವಾಗಿಲ್ಲಾ ಈಗಲಾದರು ಎಚ್ಚೆತ್ತುಕೊಂಡು ಕೊಬ್ಬರಿಗೆ ೧೫ ಸಾವಿರ ಬೆಂಬಲ ಬೆಲೆ ಘೋಷಿಸಿ ರೈತ್ರಿಗೆ ನೀಡಿದ್ದ ವಾಗ್ದಾನ ಈಡೇರಿಸಲಿ ಎಂದರು. ತಪ್ಪಿದ್ದಲ್ಲಿ ಮುಖ್ಯಮಂತ್ರಿಗಳ ವಾಹವನ್ನು ತಡೆಗಟ್ಟುವುದು ನಿಶ್ಚಿತವಾಗಿದ್ದು ದಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ದವಾಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಶಂಕರಣ್ಣ ಮಾತನಾಡಿ ಈ ಮುಖ್ಯಮಂತ್ರಿಗಳು ಕೇವಲ ಭರವಸೆ ನೀಡುವರೇ ಹೊರತು ಭರವಸೆಯನ್ನ ಕಾರ್ಯರೂಪಕ್ಕೆ ತರುವವರಲ್ಲಾ ಎಂದು ಟೀಕಿಸಿದರು.
ಒಟ್ಟಾರೆ ಮುಖ್ಯಮಂತ್ರಿಗಳ ಮನವೊಲಿಸಿ ಧರಣಿ ಸ್ಥಳಕ್ಕೆ ಅವರನ್ನು ಕರೆತರುವ ಕೆಲಸ ಜಯಚಂದ್ರರವರಾಗಲಿ ಸಂಸದ ಮುದ್ಧಹನುಮೇಗೌಡರಾಗಲಿ ಮಾಡುವರೇ ಎಂದು ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ