ಹುಳಿಯಾರು : ಸರ್ಕಾರ ಖಾಸಗಿ ಶಾಲೆಗಳಿಗೂ ಸಮವಸ್ತ್ರ ವಿತರಿಸುವ ಮೂಲಕ ಮಕ್ಕಳಲ್ಲಿ ನಾವೆಲ್ಲರೂ ಒಂದೇ ಜಾತಿಯ ಮಕ್ಕಳು, ನಮ್ಮಲ್ಲಿ ಬಡವಬಲ್ಲಿದರೆಂಬ ಭೇದವಿಲ್ಲ ಎಂಬ ಭಾವನೆ ಬೆಳೆಸಲು ಸಹಕಾರಿ ಯಾಗಬೇಕು ಎಂದು ಮುಖ್ಯಶಿಕ್ಷಕ ಸಿ.ನಾಗರಾಜು ಮನವಿ ಮಾಡಿದರು.
ಹುಳಿಯಾರು ಸಮೀಪದ ಗಾಣಧಾಳು ವಿಶ್ವಭಾರತಿ ಪ್ರೌಢಶಾಲೆಯಲ್ಲಿ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೂರದ ಗ್ರಾಮಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೈಕಲ್ ವಿತರಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರಬೇಕು. ಸೈಕಲ್‌ನ್ನು ಶಾಲೆಗೆ ಮಾತ್ರ ಬಳಕೆ ಮಾಡಬೇಕೆ ವಿನಃ ಹೊಲ, ತೋಟ, ಸೌದೆ ಒಡೆಯಲು ಬಳಸಬಾರದು ಎಂದು ಕಿವಿ ಮಾತು ಹೇಳಿದರು.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಯ ಸಂದರ್ಭದಲ್ಲಿ ಒತ್ತಡದಲ್ಲಿ ಓದುವುದಕ್ಕಿಂತ ಪ್ರಾರಂಭಿಕ ಹಂತದಿಂದಲೇ ಅಂದಿನ ಪಾಠವನ್ನು ಅಂದೇ ಮನನ ಮಾಡಿಕೊಳ್ಳುವುದು ಒಳಿತು. ಅಲ್ಲದೆ ಈ ಬಾರಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯೊಂದಿಯೇ ತೀರುತ್ತೇನೆ ಎಂದು ಪ್ರತಿಜ್ಞೆ ಮಾಡಿ ಆ ಗುರಿ ಮುಟ್ಟಲು ಶ್ರಮಪಟ್ಟು ಓದಿದಾಗ ಗುರಿ ಮುಟ್ಟಬಹುದು ಎಂದರಲ್ಲದೆ, ಶಿಕ್ಷಕರು ಸ್ವಯಂ ವಿಮರ್ಶೆ ಮಾಡಿಕೊಂಡು ಬೋಧನೆಗೆ ಇಳಿದಾಗ ಮಕ್ಕಳಲ್ಲಿ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ