ಹುಳಿಯಾರು: ಸಮೀಪದ ಹಂದನಕೆರೆ ಹೋಬಳಿ ಗೋಪಾಲಪುರ, ಲಕ್ಷ್ಮಿಪುರದಲ್ಲಿ ಶ್ರೀಪ್ರಭುಲಿಂಗೇಶ್ವರ ಸ್ವಾಮಿಯವರ ನೂತನ ದೇವಾಲಯ ಪ್ರವೇಶ ಮಹೋತ್ಸವ ಮತ್ತು ಪುನರ್ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ಎರಡುದಿನಗಳ ಕಾಲ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗೋಪಾಲಪುರದ ಶ್ರೀಆಂಜನೇಯ ಸ್ವಾಮಿ ಮತ್ತು ಕರಿಯಮ್ಮದೇವಿ, ಶೀಗೆಬಾಗಿಯ ಶ್ರೀವರದರಾಜ ಸ್ವಾಮಿ ಮತ್ತು ದುರ್ಗಮ್ಮ ದೇವಿ, ನಿರುವಗಲ್ ಶ್ರೀಆಂಜನೇಯಸ್ವಾಮಿ ಮತ್ತು ದುರ್ಗಮ್ಮದೇವಿ, ಲಕ್ಷ್ಮಿಪುರ ಶ್ರೀಗಿರಿಲಕ್ಷ್ಮೀದೇವಿ ಆಗಮನದೊಂದಿಗೆ ಗಂಗಾಪೂಜೆಯೊದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕೆರೆಗೋಡಿ ರಂಗಾಪುರದ ಪಂಡಿತ ಎಂ.ಆರ್. ಶಿವರುದ್ರ ಶಾಸ್ತ್ರೀಗಳ ಪೌರೋಹಿತ್ಯದಲ್ಲಿ ಗಣಪತಿ ಪೂಜೆ, ಗಂಗಾಪೂಜೆ, ೧೦೮ ಕಲಶಗಳ ಪೂಜೆ ನಡೆಯಿತು.
ಕಲಶಾ ಪ್ರತಿಷ್ಟಾಪನೆಯೊಂದಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸ್ವಾಮಿಯವರಿಗೆ ಪುನರ್ ಪ್ರಾಣ ಪ್ರತಿಷ್ಟಾಪನೆ, ನೇತ್ರೋನ್ಮಿಲನ ಕಾರ್ಯ ನಡೆಸಲಾಯಿತು.ಕೆರೆಗೋಡಿ ರಂಗಾಪುರದಶ್ರೀ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಶಿಖರ ಕಲಶ ಪ್ರತಿಷ್ಠಾಪನ ಕಾರ್ಯ ನಡೆದು ಕಲಶಾಭಿಷೇಕ, ಮಹಾರುದ್ರ ಹೋಮ, ಶ್ರೀಪ್ರಭು ಲಿಂಗಸ್ವಾಮಿಯವರಿಗೆ ಅಷ್ಠೋತ್ತರ ಬಿಲ್ವಾರ್ಚನೆ ಮಾಡಲಾಯಿತು.ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಿ ಮಹಾ ಮಂಗಳಾರತಿ ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನದಾಸೋಹ ನಡೆಯಿತು.
ಆಂಜನೇಯಸ್ವಾಮಿ ದೇವಾಲಯದ ಧರ್ಮದರ್ಶಿ ವಾಸುದೇವರಾವ್, ಹನುಮರಾಜು, ಕಂಠಯ್ಯ, ಡಾ.ಗೌರಿಶಂಕರ್,ಶಿವರುದ್ರಸ್ವಾಮಿ,ಬೋರೆಗೌಡ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ