ಹುಳಿಯಾರು : ಪಟ್ಟಣದ ಇಂದಿರಾನಗರದಲ್ಲಿರುವ ಶ್ರೀ ಗಜಾನನ ಸೇವಾ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಬೆಂಕಿ ಗಣಪತಿ ದೇವಾಲಯದಲ್ಲಿ ಗಜಾನನ ದೇವತಾ ಪ್ರತಿಷ್ಠಾಪನಾ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವನ್ನು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಗ್ರಾಮದೇವತೆಗಳಾದ ಹುಳಿಯಾರಮ್ಮ ಮತ್ತು ದುರ್ಗಮ್ಮ,ಶ್ರೀ ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಆಗಮಿಕರಾದ ಅರುಣ್ ಕುಮಾರ್,ಗಣೇಶ್,ಕೃಷ್ಣಮೂರ್ತಿ ತಂಡದಿಂದ ಸಂಜೆ ಗಂಗಾಪೂಜೆ,ದೇವನಾಂದಿ,ಕಳಸ ಸ್ಥಾಪನೆ,ಅಂಕುರಾರ್ಪಣೆ,ಅಷ್ಠ ಬಂಧನ ಹೋಮಾದಿಗಳು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬೆಲಗೂರಿನ ಅವಧೂತರಾದ ಶ್ರೀ ಬಿಂಧುಮಾಧವ ಸ್ವಾಮಿಗಳಿಂದ ವಿಮಾನ ಗೋಪುರ ಕಳಶ ಸ್ಥಾಪನೆ ನಡೆಯಿತು.ಭಕ್ತಾಧಿಗಳ ಸಮ್ಮುಖದಲ್ಲಿ ಮಹಾಕುಂಭಾಭಿಷೇಕ, ಪ್ರಾಣ ಪತಿಷ್ಟೆ,ಅಭಿಷೇಕ ಅರ್ಚನಾದಿಗಳು ನಡೆಯಿತು.ಭಜನಾಸಂಘದಿಂದ ಭಜನೆ ನಡೆಯಿತು.ಆಗಮಿಸಿದ ಅಪಾರ ಸಂಖ್ಯೆಯ ಭಕ್ತಾಧಿಗಳು ಅನ್ನಸಂತರ್ಪಣೆ ನಡೆಯಿತು.
ಟ್ರಸ್ಟ್ ನ ಹಿರಿಯರಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಮಹನೀಯರುಗಳಿಗೆ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಟ್ರಾಕ್ಟರ್ ಮಂಜುನಾಥ್, ಉದಯಶಂಕರ್ ಒಡೆಯರ್, ಪರಮೇಶ್ವರಚಾರ್ ,ಸಣ್ಣರಂಗಯ್ಯ,ಜಗದೀಶ್,ಮಹೇಶ್ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ