ಪಟ್ಟಣದಲ್ಲಿ ಮೂರುದಿನಗಳ ಕಾಲ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶನಿವಾರ ನರಕ ಚತುರ್ದಶಿ ಆಚರಿಸಿದರೆ ಭಾನುವಾರದ ಅಮಾವಾಸ್ಯೆಯಂದು ಕೆಲವರು ಲಕ್ಷ್ಮಿ ಪೂಜೆಯನ್ನೂ ಆಚರಿಸಿದರೆ ಮತ್ತೆ ಕೆಲವರು ಸೊಮವಾರದಂದು ಆಚರಿಸಿದರು. ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕುಟುಂಬದೊಂದಿಗೆ ಲಕ್ಷ್ಮಿ ಪೂಜೆ ಮಾಡಿದ ವ್ಯಾಪಾರಿಗಳು ಸಿಹಿ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆಗಳಲ್ಲಿ ತೈಲ ಅಭ್ಯಂಜನ ನಡೆಸಿ ದೀಪಾವಳಿಯನ್ನು ಆಚರಿಸಿದರು.ಸೋಮವಾರದಂದು ಬಲಿಪಾಡ್ಯಮಿ ಆಚರಿಸಲಾಯಿತು. ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.ಅಂಗಡಿಗಳಲ್ಲಿ ಪಟಾಕಿಗಳ ಖರೀದಿ ಜೋರಾಗಿತ್ತು.ಮಕ್ಕಳು ಹಾಗೂ ಯುವಕರು ಪಟಾಕಿ ಹಚುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ದೇವಾಲಯಗಳಲ್ಲಿ : ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ದೇವಾಲಯ ಸೇರಿದಂತೆ ದುರ್ಗಾಪರಮೇಶ್ವರಿ ,ಬನಶಂಕರಿ ,ಆಂಜನೇಯಸ್ವಾಮಿ, ಕೆಂಚಮ್ಮನವರು ,ಕಾಳಿಕಾಂಭ,ಶನೈಶ್ವರ ದೇವಾಲಯದಲ್ಲಿ ದೀಪಾವಳಿಯ ಅಮವಾಸ್ಯೆಯ ಪೂಜೆ ನೆರವೇರಿಸಿ ಕಾರ್ತೀಕ ದೀಪೋತ್ಸವ ಆಚರಿಸಲಾಯಿತು.
ಬನಶಂಕರಿ ಅಮ್ಮನವರು |
ಹುಳಿಯಾರಮ್ಮನವರ ದೇವಾಲಯದಲ್ಲಿ ಅಲಂಕೃತ ಅಮ್ಮನವರನ್ನು ವಾದ್ಯದ ಸಮೇತ ಹೊರಡಿಸಿ ಕಾರ್ತೀಕ ದೀಪ ಬೆಳಗಿಸಲಾಯಿತು.ಸುತ್ತೇಳು ಹಳ್ಳಿಗಳ ಭಕ್ತಾಧಿಗಳು ದೇವಿಯ ಕುಣಿತವನ್ನು ಕಣ್ತುಂಬಿಕೊಂಡರು.ಅಮ್ಮನವರು ಗದ್ದುಗೆಯಾದ ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗಿಸಲಾಯಿತು. ದೇವಾಲಯದ ಕನ್ವೀನರ್ ದುರ್ಗಪ್ಪ, ಸಮಿತಿಯ ಕೋಡಿಪಾಳ್ಯದ ನಾಗರಾಜು,ಟೈಲರ್ ಹನುಮಂತರಾವ್ ಮೊದಲಾದವರಿದ್ದರು.
ಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿಯಿಂದ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲಂಕೃತ ಅಮ್ಮನವರಿಗೆ ಪೂಜೆ ಸಲ್ಲಿಸಿ ಅಧ್ಯಕ್ಷ ಅನಂತಕುಮಾರ್ ಕಾರ್ತೀಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಶನೈಶ್ವರ ದೇವಾಲಯದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ಕೆಂಚಮ್ಮನವರು ,ಆಂಜನೇಯಸ್ವಾಮಿ ದೇವಾಲಯದಲ್ಲೂ ಸಹ ಒಂದುತಿಂಗಳು ಕಾಲದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ