ಹುಳಿಯಾರು: ಪಟ್ಟಣದ ಖಾಸಗಿ ಬಸ್ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಗೆಳೆಯರ ಬಳಗದಿಂದ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಬುಧವಾರದಂದು ಸರಳವಾಗಿ ಆಚರಿಸಲಾಯಿತು.
ಎ.ಎಸೈ ಶಿವಪ್ಪ ಬಸ್ಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಣೆಯ ಮಹತ್ವ ತಿಳಿಸಿದರು.ತಾಪಂ ಸದಸ್ಯ ಏಜೆಂಟ್ ಕುಮಾರ್ ಮಾತನಾಡಿ ಕನ್ನಡ ನಾಡು ನುಡಿಯ ವೈಭವದ ಬಗ್ಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಏಜೆಂಟರಾಗಿ ಇದೀಗ ತಾಪಂ ಸದಸ್ಯರಾಗಿರುವ ಕುಮಾರ್,ಗ್ರಾಪಂ ಉಪಾಧ್ಯಕ್ಷರಾಗಿರುವ ಗಣೇಶ್ ಹಾಗೂ ಗ್ರಾಪಂ ಸದಸ್ಯರಾಗಿರುವ ರಾಘವೇಂದ್ರ ಸೇರಿದಂತೆ ಸಂಘದ ಹಿರಿಯ ಏಜೆಂಟರಾದ ಎಂ.ಎ.ಲೋಕೇಶ್ ,ಹು.ಕೃ.ವಿಶ್ವನಾಥ್ ಮತ್ತಿತರನ್ನು ಸನ್ಮಾನಿಸಿ ಸಿಹಿ ವಿತರಿಸಲಾಯಿತು.
ಗ್ರಾಪಂ ಸದಸ್ಯರಾದ ಸೈಯದ್ ಜಬೀಉಲ್ಲಾ ,ಏಜೆಂಟರ ಸಂಘದ ಗಂಗಾಧರ್ ಖರಮೋರೆ,ಸುರೇಶ್, ಸ್ಪಾಟ್ ನಾಗರಾಜು,ಸೊಸೈಟಿ ನಾಗರಾಜು, ಸೀಗೆಬಾಗಿ ರಾಜು,ಜಮೀರ್, ಆಟೋ ಚಾಲಕರ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ