ಹುಳಿಯಾರು: ಗ್ರಾಮೀಣ ಭಾಗದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಳ್ಳಲು ಕೂಡ ಹಣವಿಲ್ಲದೆ ಹೈರಾಣಗಿರುವ ಜನಕ್ಕೆ ಇನ್ನೆರಡು ದಿನ ಇದೇ ಪರಿಸ್ಥಿತಿ ಮುಂದುವರಿದರೆ ದೈನಂದಿನ ಬದುಕು ಸಾಗಿಸಲು ದುಸ್ಥಿತಿ ಉಂಟಾಗಲಿದೆ.
ಭಾನುವಾರ ಪಟ್ಟಣದ ಎಸ್‌ಬಿಎಂ ,ಎಸ್ ಬಿಐ,ಡಿಸಿಸಿ ಬ್ಯಾಂಕ್, ಕೆನರಾ ಬ್ಯಾಂಕಿನ ಮುಂದೆ ನೋಟು ಬದಲಾವಣೆಗೆ ಮುಂಜಾನೆಯೇ ಜಮಾಯಿಸಿ ಹಣ ದೊರೆಯುವುದೋ ಇಲ್ಲಾ ಮತ್ತೆ ಇನ್ನೊಂದು ದಿನ ಬರುವ ಪರಿಸ್ಥಿತಿ ಎದುರಾಗುವುದೋ ಎನ್ನುವ ಆತಂಕದಲ್ಲಿದ್ದರು.ಕೆಲವು ಬ್ಯಾಂಕಿನಲ್ಲಿ ತಕರಾರಿಲ್ಲದೆ ಎರಡು ಸಾವಿರ ರೂಗಳ ಹಣ ಬದಲಾವಣೆ ಮಾಡಿಕೊಟ್ಟರೆ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಇಲ್ಲದ ಕಾನೂನುಗಳ ನೆಪವೊಡಿ ಮಧ್ಯಾಹ್ನವಾದರೂ ಹಣ ಕಟ್ಟಿಸಿಕೊಳ್ಳುತ್ತಿದ್ದರೆ ವಿನಃ ಬದಲಾವಣೆ ಮಾಡಿಕೊಡಲಿಲ್ಲ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಕಾದು ಕಾದು ಉರಿವ ಬಿಸಿಲಿನಲ್ಲಿ ನಿಂತುಕೊಳ್ಳುವ ಜನಕ್ಕೆ ಹಣಬದಲಾವಣೆ ಮಾಡಿಕೊಡದೆ ಬರಿ ಜಮಾ ಮಾಡಿಹೋಗಿ ಇನ್ನೇರಡು ದಿನ ಬಿಟ್ಟು ಬಂದು ತೆಗೆದುಕೊಳ್ಳಿ ಎಂದು ಹೇಳುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.
ಪಟ್ಟಣದಲ್ಲಿ ದಿನೇದಿನೇ ಚಿಲ್ಲರೆ ಸಮಸ್ಯೆ ಬಿಗಡಾಯಿಸುತ್ತಿದ್ದು ನೋಟುಗಳಿಲ್ಲದೆ ವ್ಯವಹಾರಕ್ಕೆ ತೊಡಕಾಗಿದೆ. ಹೊಸ ಪಿಕ್ಚರ್ ಹಾಕಿದ್ದರೂ ಜನರಿಲ್ಲದೆ ಬಿಕೊ ಎನ್ನುತ್ತಿದೆ.ಈ ತಿಂಗಳು ಮದುವೆ ಮತ್ತೊಂದು ಸಮಾರಂಭ ಹಮ್ಮಿಕೊಂಡಿರುವ ಮಂದಿಗಂತೂ ಖಾತೆಯಲ್ಲಿರುವ ಹಣ ಪಡೆಯಲು ಸಾಧ್ಯವಾಗದೆ ಎಲ್ಲಡೆ ಉದರಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಬ್ಯಾಂಕಿನಲ್ಲಿ ಖಾತೆಗೆ ಜಮಾ ಮಾಡುವುದು ಬಿಟ್ಟರೆ ಮತ್ತೊಂದು ಕೆಲಸವೂ ಸಾಗುತ್ತಿಲ್ಲ.ಡಿಡಿ ತೆಗೆಯಲು ಸಾಧ್ಯವಾಗುತ್ತಿಲ್ಲ. ಒಡವೆ ಅಂಗಡಿಗಳು ,ಬಟ್ಟೆಅಂಗಡಿಗಳುಸುತರಾಂ ೫೦೦ ರನೋಟು ತೆಗೆದುಕೊಳ್ಳಲು ಸಿದ್ದರಿಲ್ಲದೆ ಅರ್ಧಕ್ಕೆ ಅರ್ಧ ಬಾಗಿಲು ಹಾಕಿರುವುದು ಕಂಡುಬಂದಿದೆ.
ಬ್ಯಾಂಕ್‌ಗಳಿಂದ ನೋಟು ಬದಲಾವಣೆ ಮಾಡಿಕೊಳ್ಳಲು ಹಾಗೂ ಎಟಿಎಂಗಳಿಂದ ಹಣ ಪಡೆಯಲು ಜನರ ಪರದಾಟ ಮುಂದುವರೆದಿದೆ.ಸರತಿ ಸಾಲಿನಲ್ಲಿ ನಿಂತವರು ಹೆಚ್ಚಿನ ಮಂದಿ ಗ್ರಾಮೀಣ ಪ್ರದೇಶದಿಂದ ಬಂದವರೇ ಆಗಿದ್ದು ತಮ್ಮ ನಿತ್ಯದ ವ್ಯವಹಾರಕ್ಕೆ ಚಿಲ್ಲರೆ ಹಣಕ್ಕಾಗಿ ದಿನಗಟ್ಟಲೇ ಬ್ಯಾಂಕುಗಳ ಮುಂದೆ ಸರದಿಸಾಲಿನಲ್ಲಿ ನಿಂತರೂ ಚಿಲ್ಲರೇ ಸಿಗದೇ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಉದ್ದುದ್ದ ಸರತಿಯಲ್ಲಿ ನೂಕುನುಗ್ಗಲು, ಮಾತಿನ ಚಕಮಕಿ, ವಾಗ್ವಾದ ನಡೆದ ಘಟನೆಗಳು ನಡೆದವು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ