ಹುಳಿಯಾರು: ಬೆಂಕಿ ಆಕಸ್ಮಿಕದಿಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹಗಳ ಸ್ಪೇರ್ ಪಾಟ್ಸ್ ಅಂಗಡಿಯೊಂದು ಸಂಪೂರ್ಣ ಭಸ್ಮವಾಗಿ ಸುಮಾರು ಎಂಟು ಲಕ್ಷ ರೂ ನಷ್ಟವಾದ ಘಟನೆ ಹುಳಿಯಾರಿನಲ್ಲಿ ಬುಧವಾರ ಸಂಜೆ ಜರುಗಿದೆ.
ಇಲ್ಲಿನ ಎ.ಪಿ.ಎಂ.ಸಿ ಮುಂಭಾಗದ ಅಲ್ಪಾ ಮೋಟಾರ್ಸ್ ಅಂಗಡಿಯಲ್ಲಿ ಈ ದುರ್ಘಟನೆ ನಡೆದಿದೆ. ಎಂದಿನಂತೆ ಸಂಜೆ ಅಂಗಡಿಗೆ ಬೀಗ ಮನೆಗೆ ಹೋದ ಕೆಲ ಸಮಯದಲ್ಲೇ ಅಂಗಡಿ ಒಳಗೆ ಬೆಂಕಿ ಕಾಣಿಸಿಕೊಂಡಿದೆ.
ಅಕ್ಕಪಕ್ಕದವರು ಮಾಲೀಕರಿಗೆ ವಿಷಯ ಮುಟ್ಟಿಸಿ ಅಂಗಡಿ ಬೀಗ ತೆಗೆಯುವಷ್ಟರಲ್ಲಿ ಅಂಗಡಿಯಲ್ಲಿದ್ದ ಎರಡು ಆಟೋ ಇಂಜಿನ್ ಸೇರಿದಂತೆ ಅಂಗಡಿಯಲ್ಲಿದ್ದ ಕೇಬಲ್, ಸ್ಪೇರ್ ಪಾರ್ಟ್ಸ್, ಚೇರು, ಟೇಬಲ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದೂ ಅಷ್ಟರಲ್ಲಿ ಮೌಲ್ಯದ ವಾಹನಗಳ ಬಿಡಿಬಾಗಗಳು ಸೇರಿದಂತೆ ೮ ಲಕ್ಷ ರೂ. ಬೆಲೆಬಾಳುವ ವಸ್ತುಗಳು ಭಸ್ಮವಾಗಿದ್ದವು. ಘಟನಾ ಸ್ಥಳಕ್ಕೆ ಹುಳಿಯಾರು ಪೋಲಿಸ್ ಠಾಣಿ ಎ.ಎಸ್.ಐ.ಶಿವಪ್ಪ ಹಾಗೂ ಸಿಬ್ಬಂದಿವರ್ಗ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ