ಹುಳಿಯಾರು: ವಿದ್ಯಾರ್ಥಿಗಳು ಪಠ್ಯದ ಜೊತೆ ಸಾಧಕರ ಜೀವನ ಚರಿತ್ರೆ ಓದಬೇಕು ಎಂದು ಸರ್ಕಾರಿ ಪ್ರೌಢಶಾ ಲೆಯ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಪತ್ರಕರ್ತ ರಂಗನಕೆರೆ ಮಹೇಶ್ ತಿಳಿಸಿದರು.
ಇತಿಹಾಸ ಉಪನ್ಯಾಸಕ ಯೋಗೀಶ್ ಮಾತನಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಜೀವನ ಚರಿತ್ರೆ, ಸಾಧನೆ ಬದುಕಿನಲ್ಲಿ ನಡೆದ ಸಂಕಷ್ಟ ದಿನಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಕ್ರೀಡಾ ವಿಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕರುಗಳಾದ ನಾರಾಯಣ್, ಅನಂತಯ್ಯ, ಶಶಿಭೂಷಣ್, ರಮೇಶ್, ರೇವಣ್ಣ, ಮಲ್ಲಿಕಾರ್ಜುನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ