ಇಲ್ಲಿ ನೋಟು ಜಮೆ ಮಾಡಿಸಿಕೊಳ್ಳುವುದಿಲ್ಲ,ಹಣವನ್ನು ಕೊಡುವುದಿಲ್ಲ
-----------
ಹುಳಿಯಾರು:ನಮ್ಮ ಕಛೇರಿಯಿಂದ ಬಂದ ಆದೇಶದನ್ವಯ ಖಾತೆಯಿಂದ ಹಣ ಹಿಂಪಡೆಯುವಂತಿಲ್ಲ ಎಂದು ರೈತರನ್ನು ವಾಪಸ್ಸು ಕಳುಹಿಸಿದ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕನ ವಿರುದ್ಧ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು ಕಡೆಗೆ ಖಾತೆಯಿಂದ ಹಣ ಕೊಡುವಂತೆ ಮಾಡಿದ ಘಟನೆ ಹುಳಿಯಾರು ಡಿಸಿಸಿ ಬ್ಯಾಂಕಿನಲ್ಲಿ ಸೋಮವಾರ ಸಂಜೆ ನಡೆಯಿತು.
ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ ಎಂಬುವವರು ಡಿಸಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು ಈತನ ಖಾತೆಗೆ ಹಾಲಿನ ಸೊಸೈಟಿಯಿಂದ ಹಾಲು ಹಾಕಿದ್ದರ ಬಾಬ್ತು ಹಣ ಜಮೆಯಾಗಿತ್ತು.ಇಂದು ಹಣ ಪಡೆಯಲು ಹೋದಂತಹ ರೈತನಿಗೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತನ್ವೀರ್ ಖಾನ್ ಹಣಹಿಂಪಡೆಯಲು ಅವಕಾಶ ನೀಡದೆ ವಾಪಸ್ಸು ಕಳುಹಿಸಿದರು.ನಮಗೆ ಮೇಲಿಂದ ಆದೇಶ ಬಂದಿದ್ದು ಆ ಪ್ರಕಾರ ನಾವು ಹಣ ಕಟ್ಟಿಸಿಕೊಳ್ಳುವಂತಿಲ್ಲಾ ಹಾಗೂ ಹಿಂತೆಗೆಯಲು ಕೂಡ ಕೊಡುವುದಿಲ್ಲ ಎಂದು ಇಲ್ಲದ ತಕರಾರು ತೆಗೆದಿದ್ದಾರೆ.ಆದೇಶದ ಪ್ರತಿ ಕೊಡಿ ಎಂದರೆ ನಮ್ಮಲ್ಲಿ ಪ್ರಿಂಟರ್ ಕೆಟ್ಟಿದೆ ಎಂದು ವಿತ್ತಂಡ ವಾದ ಮಂಡಿಸಿದ್ದಾರೆ.ಪರಿಪರಿಯಾಗಿ ಕೇಳಿದರೂ ಸುತರಾಂ ಒಪ್ಪದೆ ಹಣ ಕೊಡದಿದ್ದರಿಂದ ರೊಚಿಗೆದ ಮಲ್ಲಿಕಾರ್ಜುನಯ್ಯ ರೈತ ಸಂಘದ ಪ್ರತಿನಿಧಿಗಳೊಂದಿಗೆ ಬ್ಯಾಂಕಿಗೆ ಆಗಮಿಸಿ ವ್ಯವಸ್ಥಾಕರ ವಿರುದ್ಧ ಪ್ರತಿಭಟಿಸಿದರು.
ದನಕರುಗಳಿಗೆ ಬೂಸಾ ತೆಗೆದುಕೊಂಡು ಹೋಗಲು ಹಣ ಬೇಕಾಗಿದ್ದು ಕೊಡದಿರಲು ಕಾರಣವೇನು ಎಂದು ಪ್ರಶ್ನಿಸಿದಾಗ ತುಮಕೂರು ಕೇಂದ್ರ ಕಛೇರಿಯಿಂದ ಮೌಖಿಕವಾಗಿ ಆದೇಶ ಬಂದಿದ್ದು ಅದರಂತೆ ಇಂದು ಮಧ್ಯಾಹ್ನದಿಂದ ತಾವು ಹಣಕಟ್ಟಿಸಿಕೊಳ್ಳುವಂತಿಲ್ಲ ಎಂದುತ್ತರಿಸಿದ ವ್ಯವಸ್ಥಾಪಕರು ಮದ್ಯಾಹ್ನದಿಂದ ಯಾವುದೇ ಖಾತೆದಾರರ,ಸೊಸೈಟಿಗಳ,ಪಿಗ್ನಿದಾರರ ಹಣ ಕಟ್ಟಿಸಿಕೊಂಡಿಲ್ಲ ಎಂದುತ್ತರಿಸಿದರು.
ಈ ಬಗ್ಗೆ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಿದಾಗ ನಾವು ಆ ರೀತಿ ಆದೇಶ ಮಾಡಿಲ್ಲವೆಂದು ಹೇಳಿ ಪ್ರತಿಯೊಬ್ಬ ಖಾತೆದಾರರಿಗೂ ನಾಲ್ಕು ಸಾವಿರದಷ್ಟು ಹಣ ಹಿಂಪಡೆಯಲು ಅವಕಾಶವಿದೆ ಎಂದು ಹೇಳಿ ಹಣ ಕೊಡುವ ಏರ್ಪಾಡು ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾರೈತಸಂಘದ ಶಂಕರಣ್ಣ,ರಾಜ್ಯಘಟಕದ ಕೆಂಕೆರೆ ಸತೀಶ್,ತಿಮ್ಮನಹಳ್ಳಿ ಲೋಕಣ್ಣ,ಕೆಂಕೆರೆ ನಾಗಣ್ಣ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ