ಹುಳಿಯಾರು ಪಟ್ಟಣದ ಇಂದಿರಾನಗರದಲ್ಲಿರುವ ಶ್ರೀ ಗಜಾನನ ಸೇವಾ ಚಾರಿಟಬಲ್ ಟ್ರಸ್ಟ್ ನ ಗಜಾನನ(ಬೆಂಕಿ ಗಣಪತಿ) ದೇವಾಲಯದಲ್ಲಿ ಗಜಾನನ ದೇವತಾ ಪ್ರತಿಷ್ಠಾಪನಾ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವನ್ನು ನ.೧ ಹಾಗೂ ೨ರಂದು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ನ.೧ರಂದು ಗ್ರಾಮದೇವತೆ ಹುಳಿಯಾರಮ್ಮ ಮತ್ತು ದುರ್ಗಮ್ಮ,ಶ್ರೀ ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಸಂಜೆ ಗಂಗಾಪೂಜೆ,ದೇವನಾಂದಿ,ಕಳಸ ಸ್ಥಾಪನೆ,ಅಂಕುರಾರ್ಪಣೆ,ಹೋಮಾದಿಗಳು ನಡೆದು ಲಘು ಪೂರ್ಣಾಹುತಿ ಸಮರ್ಪಿಸಲಾಗುತ್ತದೆ.
ನ.೨ ರ ಬುಧವಾರದಂದು ಮುಂಜಾನೆ ಹೊಸದುರ್ಗ ಬೆಲಗೂರಿನ ಅವಧೂತರಾದ ಶ್ರೀ ಬಿಂಧುಮಾಧವ ಸ್ವಾಮಿಗಳಿಂದ ವಿಮಾನ ಗೋಪುರ ಕಳಶ ಸ್ಥಾಪನೆ, ಮಹಾಕುಂಭಾಭಿಷೇಕ, ಪ್ರಾಣ ಪತಿಷ್ಟೆ,ಅಭಿಷೇಕ ಅರ್ಚನಾದಿಗಳು ನಡೆದು ಮಹಾಮಂಗಳಾರತಿ ನಂತರ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಅಧ್ಯಕ್ಷ ಟ್ರಾಕ್ಟರ್ ಮಂಜಣ್ಣ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ