ಹುಳಿಯಾರು: ಕೊಬ್ಬರಿಗೆ ೧೫ಸಾವಿರ ರೂ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತಸಂಘದ ನೇತೃತ್ವದಲ್ಲಿ ಆರಂಭವಾಗಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 2ನೇ ದಿನಕ್ಕೆ ಕಾಲಿಟ್ಟಿದೆ.
ರೈತಸಂಘದ ಮುಖಂಡರು ಎಪಿಎಂಸಿ ಕಚೇರಿ ಎದುರುಹಾಕಿರುವ ಷಾಮಿಯಾನದಡಿ ರಾತ್ರಿ ಕಳೆದರು. ಸ್ಥಳದಲ್ಲಿ ಹೋರಾಟಗಾರರಿಗೆ ಊಟದ ವ್ಯವಸ್ಥೆ ನಡೆಯುತ್ತಿದೆ. ಶನಿವಾರದಂದು ತೆಂಗುಬೆಳೆಗಾರರ ಸಂಘದವರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಗ್ರಾಮೀಣ ಪ್ರದೇಶದ ರೈತರಿಂದ ಧರಣಿಗೆ ಬೆಂಬಲ ವ್ಯಕ್ತವಾಗಿದ್ದು ನಿತ್ಯ ಒಂದೊಂದು ಸಂಘಟನೆಯವರು ಪಾಲ್ಗೊಳ್ಳಲು ಹಳ್ಳಿಗಳಿಂದ ರೈತರು ತಮ್ಮ ನಿರಶನ ನಡೆಸುವ ದಿನವನ್ನು ನಿಗದಿಪಡಿಸಿದ್ದಾರೆ. ಇಂದಿನ ಧರಣಿಯಲ್ಲಿ ಕಡೂರು,ಶಿರಾ,ತಿಪಟೂರು,ಹೊಸದುರ್ಗ ತಾಲ್ಲೂಕ್ ರೈತಸಂಘದ ಮುಖಂಡರುಗಳು ಪಾಲ್ಗೊಂಡಿದ್ದರು. ಕೊಬ್ಬರಿಯನ್ನು ರೂ.15 ಸಾವಿರ ಬೆಲೆಗೆ ಕೊಳ್ಳುವವರೆಗೆ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಕಡೂರು ತಾಲ್ಲೂಕ್ ರೈತಸಂಘದ ಅಧ್ಯಕ್ಷ ನಿರಂಜನಮೂರ್ತಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ