ಹುಳಿಯಾರು:ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ತಡೆಯಲು ಮಂಗಳವಾರ ರಾತ್ರಿ ದಿಢೀರ್ ಘೋಷಣೆ ಮಾಡಿ 500 ಮತ್ತು 1,000 ರೂ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಪಡಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಸಂಸೆ ವ್ಯಕ್ತವಾದರೂ ಸಹ ತಮ್ಮಲ್ಲಿ ಉಳಿದಿರುವ ನೋಟುಗಳ ಬದಲಾವಣೆ ಹೇಗೆ ಎಂಬ ಚಿಂತೆ ಎಲ್ಲರಲ್ಲೂ ಮನೆ ಮಾಡಿತ್ತು.
500 ಮತ್ತು 1,000 ರೂ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಪಡಿಸಿರುವಹಿನ್ನಲೆಯಲ್ಲಿ ಸರ್ಕಾರಿ ಆದೇಶದಂತೆ ಹುಳಿಯಾರಿನಲ್ಲೂ ಬ್ಯಾಂಕ್, ಎಟಿಎಂಗಳು ಬುಧವಾರದಂದು ಬಾಗಿಲು ಮುಚ್ಚಿತ್ತು. |
ಟಿವಿಗಳಲ್ಲಿ ವಿಚಾರ ಅರಿತಿದ್ದ ಜನ ಇಂದು ಮುಂಜಾನೆಯೇ ದಿನಪತ್ರಿಕೆಗಳಲ್ಲೂ ಕೊಂಡಿಟ್ಟುಕೊಳ್ಳಲೂ ದಾಂಗುಡಿಯಿಟ್ಟ ಪರಿಣಾಮ ದಿನಪತ್ರಿಕೆಗೆಳ ಸಿಗದಂತಾಗಿತ್ತು.ಅಂತೆಕಂತೆಯೆ ಮಾತಿನ ನಡುವೆಯೇ ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲೆಲ್ಲೂ ಎಲ್ಲರಲ್ಲೂ ನೋಟಿನ ಮಾತೆ ಮಾರ್ಧನಿಸಿತ್ತು.
ನಿತ್ಯ ವ್ಯವಹಾರಕ್ಕೆ ಐನೂರು ನೋಟುಗಳನ್ನು ಇಟ್ಟುಕೊಂಡಿರುವ ಸಾಮಾನ್ಯ ಜನರು ಇಂದು ಮುಂಜಾನೆಯಿಂದಲೂ ಜೇಬಲ್ಲಿ,ಕೈಯಲ್ಲಿ 500- 1000 ರು ನೋಟು ಹಿಡಿದು ಆತಂಕದಿಂದ ಓಡಾಡುತ್ತಿದ್ದ ದೃಶ್ಯ ಕಂಡುಬಂತು.ತಮ್ಮ ಬಳಿ ಸದ್ಯ ಉಳಿದಿರುವ ನೋಟನ್ನು ಹೇಗೆ ಚಲಾವಣೆ ಮಾಡುವುದು, ನೋಟನ್ನು ಎನು ಮಾಡುವುದು ಎಂದು ಪರದಾಡುತ್ತಾ , ಅಂಗಡಿಗಳಲ್ಲಿ ಸಾಮಾನು ಕೊಂಡು ಎಲ್ಲಕ್ಕೂ ಚಿಲ್ಲರೆಯಿಲ್ಲವೆಂದು ಹೇಳಿ ೫೦೦ ರೂ ನೀಡುತ್ತಾ ನಾನಾ ತಂತ್ರಗಳನ್ನು ಪ್ರಯೋಗಿಸಿ ನೋಟನ್ನು ಸಾಗಿಸಲು ಪ್ರಯತ್ನಿಸುತ್ತಿದ್ದಿದ್ದು ಸಾಮನ್ಯವಾಗಿತ್ತು..ಈ ಪ್ರಯತ್ನದಲ್ಲಿ ಕೆಲವಡೆ ಮಾತಿನ ಚಕಮುಖಿ ಕೂಡ ನಡೆಯಿತು.
ಅಂಗಡಿ , ಹೋಟೆಲ್ ಗಳು, ಪೆಟ್ರೋಲ್ ಬಂಕ್, ತರಕಾರಿ, ಹೂವು ಮಾರಾಟಗಾರರ ನಡುವೆ ಇಂದು ೫೦೦ ನೋಟಿನದ್ದೇ ಬಿಸಿಬಿಸಿ ಚರ್ಚೆ ಸಾಗಿತ್ತು.
ಬೇಕೋಬೇಡವೋ ನೋಟನ್ನು ಕಳುಹಿಸುವ ಪ್ರಯತ್ನವಾಗಿ ಬಟ್ಟೆ ಅಂಗಡಿ,ದಿನಸಿಅಂಗಡಿ ಕಡೆಗೆ ಕೆಲವರು ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಕೊಳ್ಳುವಿಕೆ ಮಾಡಿ ೫೦೦ -೧೦೦೦ ರೂ ಗಳನ್ನೆ ನೀಡುತ್ತಿದ್ದರು.
ತರಕಾರಿ,ಟೀಅಂಗಡಿ,ಹೂವಿನ ಅಂಗಡಿಗಳಲ್ಲಿ ಚಿಲ್ಲರೆ ಇದ್ದರೆ ಮಾತ್ರ ವ್ಯವಹಾರ ಎನ್ನುವಂತಾಗಿತ್ತು.ಕೆಲವರು ದಿನಪತ್ರಿಕೆ ತಿಂಗಳ ಬಾಕಿಗಾಗಿ ೫೦೦-೧೦೦೦ ಕೊಟ್ಟುಕಳುಹಿಸಿದ್ದ ಘಟನೆ ಕೂಡ ನಡೆಯಿತು
ಪೆಟ್ರೋಲ್ ಬಂಕಿನಲ್ಲಿ ಹೆಚ್ಚಿನವರು ೫೦ -೧೦೦ ರೂ ಗೆ ಪೆಟ್ರೋಲ್ ಹಾಕಿಸಿ ಐನೂರು- ಸಾವಿರ ರೂಗಳ ನೋಟು ನೀಡುತಿದ್ದರಿಂದ ಚಿಲ್ಲರೆ ಕೊಡಲು ಬಂಕಿನವರು ಪರದಾಡುವಂತಾಯಿತು.ಚಿಲ್ಲರೆ ವಿಷಯಕ್ಕೆ ಜಗಳವೂ ನಡೆದು ಕಡೆಗೆ ಚಿಲ್ಲರೆ ಕೊಟ್ಟರೆ ಮಾತ್ರ ಪೆಟ್ರೋಲ್ ಹಾಕುವ ಪರಿಸ್ಥಿತಿ ಎದುರಾಯಿತು.
ಸರ್ಕಾರಿ ಆದೇಶದಂತೆ ಬ್ಯಾಂಕ್, ಎಟಿಎಂಗಳು ಇಂದು ಬಾಗಿಲು ಮುಚ್ಚಿತ್ತಾದ್ದರೂ ಜನ ಕುತುಹಲಕ್ಕಾಗಿ ಬ್ಯಾಂಕಿನೆಡೆಗೆ ಎಡೆತಾಕುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.ಎಲ್ಲರ ಮೊಬೈಲ್ನಲ್ಲೂ ೫೦೦ ಮತ್ತು ೧೦೦೦ ನೋಟುಗಳು ಅಣಕಕ್ಕೀಡಾಗಿದ್ದು ಸೇರಿದಂತೆ ಜನಸಾಮಾನ್ಯರಿಗೆ ಗೊಂದಲ ನಿವಾರಿಸುವ ಒಂದಷ್ಟು ಪಾಯಿಂಟ್ಸ್ ಕೂಡ ಪುರುಸೊತ್ತಿಲ್ಲದಂತೆ ಹರಿದಾಡಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ