ಹುಳಿಯಾರು: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮಪರ್ಕವಾಗಿ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಸಾಧಿಸುವಂತೆ ಸಂಸದ ಮುದ್ದಹನುಮೇಗೌಡ ಕಿವಿಮಾತು ಹೇಳಿದರು.
ಹುಳಿಯಾರಿನ ಸಲಾಮತ್ ವೆಲ್‌ಫೇರ್ ಟ್ರಸ್ಟ್‌ನ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಲ್ಪಸಂಖ್ಯಾತರ ಕಲ್ಯಾಣಾಭಿವೃದ್ಧಿಗಾಗಿ ವಕ್ಫ್ ಬೋರ್ಡ್ ಸ್ಥಾಪಿಸಲಾಗಿದ್ದು ಈ ಸಮಿತಿಯಿಂದ ಸಾಕಷ್ಟು ಅನುಕೂಲ ಪಡೆಯಬಹುದಾಗಿದೆ ಎಂದರು. ಸರಕಾರ ಜಾರಿಗೆ ತರುವ ಯೋಜನೆಗಳ ಬಗ್ಗೆ ಸಮಪರ್ಕವಾದ ಮಾಹಿತಿ ತಿಳಿದುಕೊಂಡು ಅವುಗಳ ಸದಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು. ಸಾರ್ವಜನಿಕವಾಗಿ ಯಾವುದೆ ಕೆಲಸಗಳಾಗಬೇಕಿದ್ದರು ಸರಕಾರದಿಂದ ತಾವು ಮಾಡಿಸಿಕೊಡುವುದಾಗಿ ಭರವಸೆಯಿತ್ತರು.
ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಸದಸ್ಯ ಸಜ್ಜಾದ್ ಮಾತನಾಡಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ ಸಮಾಜದಲ್ಲಿ ನೊಂದ ಜನರಿಗೆ ಆರ್ಥಿಕವಾಗಿ ಸಹಾಯಹಸ್ತ ಚಾಚುತ್ತಿರುವ ಈ ಟ್ರಸ್ಟ್ ಸೇವೆ ಶ್ಲಾಘನೀಯವೆಂದರು.ಅಲ್ಲದೆ ಗ್ರಾಮದ ಸಾರ್ವಜನಿಕರ ಅನುಕೂಲಕ್ಕಾಗಿ ಆಂಬ್ಯೂಲೆನ್ಸ್ ಸೇವೆ ನೀಡಲೆಂದು ವಾಹನ ಖರೀದಿಸಲು ಈಗಾಗಲೇ ಈ ಟ್ರಸ್ಟ್ ಮುಂದಾಗಿದೆ ಎಂದರು.
ಈವೇಳೆ ಸಂಸದ ಮುದ್ದಹನುಮೇಗೌಡ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಸದಸ್ಯ ಸಜ್ಜಾದ್, ಜಿ.ಪಂ.ಸದಸ್ಯ ಸಿದ್ದರಾಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್‌ಸಾಬ್, ಗ್ರಾಪಂ ಸದಸ್ಯ ದಯಾನಂದ್, ಎಪಿಎಂಸಿ ಸದಸ್ಯ ರುದ್ರೇಶ್, ಟ್ರಸ್ಟ್ ಅಧ್ಯಕ್ಷ ಅಬ್ಜಲ್‌ಅಮದ್, ಉಪಾಧ್ಯಕ್ಷ ಸೈಯದ್ ಜಾಫರ್ ಸಾಬ್, ಖಜಾಂಚಿ ಜಾಫರ್ ಸಾದಿಕ್, ಪದಾಧಿಕಾರಿಗಳಾದ ಮಹಬೂಬ್‌ಆಲಂ, ಮನೋಹರ್‌ಪಾಷ, ಅಸ್ಲಾಮ್, ಜಬೀಉಲ್ಲಾ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ