೩ನೇ ದಿನ ಪೂರೈಸಿದ ಧರಣಿ
----------------------
ಹುಳಿಯಾರು:ರೈತ ಪರ ಸರ್ಕಾರ ಎಂದು ಹೇಳುವ ಮುಖ್ಯಮಂತ್ರಿಗಳು ಬರಗಾಲದ ಸಂಕಷ್ಟದಲ್ಲಿ ಸಿಲುಕಿರುವ ರೈತನ ಜೀವನದ ಜೊತೆ ಚೆಲ್ಲಾಟವಾಡುವುದನ್ನ ಬಿಟ್ಟು ಎರಡು ತಿಂಗಳ ಹಿಂದೆ ರೈತರ ಬೆಂಗಳೂರ್ ಚಲೋ ಪಾದಯಾತ್ರೆ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಹಾಗೂ ಕೊಬ್ಬರಿಗೆ ಕನಿಷ್ಟ ೧೫ಸಾವಿರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ತಾಲ್ಲೂಕ್ ನೀರಾವರಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಖ್ಯಾತ ಹೃದಯ ತಜ್ಞ ಡಾ.ಪರಮೇಶ್ವರಪ್ಪ ಒತ್ತಾಯಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ೩ನೇ ದಿನವಾದ ಭಾನುವಾರದಂದು ಪಾಲ್ಗೊಂಡು ಮಾತನಾಡಿದರು.
ಹುಳಿಯಾರಿನ ಸಂಘಸಂಸ್ಥೆಗಳು ಸಹಯೋಗದೊಂದಿಗೆ ರೈತಸಂಗ ಈ ಹಿಂದೆ ೬೦ ದಿನಗಳ ಕಾಲ ನೀರಾವರಿ ಹೋರಾಟ ಮಾಡಿ ಯಶಕಂಡಿದ್ದು ಸರ್ಕಾರ ಈ ಹೋರಾಟವನ್ನು ನಿರ್ಲಕ್ಷಿಸದೆ ತತ್ ಕ್ಷಣವೇ ಸ್ಪಂದಿಸಬೇಕೆಂದು ಆಗ್ರಹಿಸಿದರು.ಮುಖ್ಯಮಂತ್ರಿಗಳು ಮಂಗಳವಾರದಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರವೀಕ್ಷಣೆಗೆ ಆಗಮಿಸಿತ್ತಿದ್ದು ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ಸಹಾಯಧನದೊಂದಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಹಾಗೂ ಎರಡುಮೂರು ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಈ ಹೋರಾಟ ರಾಜ್ಯವ್ಯಾಪಿ ಕೊಂಡೊಯ್ಯಲ್ಲಿದ್ದಾರೆ ಎಂದರು
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರರವರು ಅಂದು ತಮ್ಮೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಮಾತಿನೊಂದಿಗೆ ಧರಣಿ ಹಿಂಪಡೆಯುವಂತೆ ಮಾಡಿದ್ದರು.ಇದೀಗ ಅವರು ಕೊಟ್ಟ ಮಾತಿನಂತೆ ನಡೆದು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ಕೊಬ್ಬರಿಗೆ ಕನಿಷ್ಟ ೧೫ಸಾವಿರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರವನ್ನು ತೆರೆಯುವಂತೆ ಒತ್ತಾಯಿಸಿದರು.
ಕಳೆದ ೩ ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸಹ ಜಿಲ್ಲಾಉಸ್ತುವಾರಿ ಸಚಿವ ಜಯಚಂದ್ರರವರಿಗೆ ರೈತರ ಬಗ್ಗೆ ಸಹಾ ಸೌಜನ್ಯಕ್ಕಾದರು ಧರಣಿ ಸ್ಥಳಕ್ಕೆ ಬಂದು ರೈತರ ಕಷ್ಟಗಳನ್ನ ಕೇಳುವಂತ ಕನಿಷ್ಟ ಪ್ರಜ್ಞೆ ಇಲ್ಲಾದಾಗಿದೆ ಎಂದು ದೂರಿದರು.ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ರೈತನ ಬಗ್ಗೆ ನಿಜವಾಗಿಯು ಕಾಳಜಿ ಇದ್ದರೆ ಹುಳಿಯಾರಿನ ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಕಷ್ಟಗಳ ಬಗ್ಗೆ ಚರ್ಚಿಸಲಿ ಎಂದರು.
ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ತಾಲ್ಲೂಕು ರೈತಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ,ಕಾಮಲಾಪುರದ ಗೋವಿಂದಯ್ಯ, ಯಗಚಿಹಳ್ಳಿ ರೈತಸಂಘದ ಎಂ.ರಾಮಯ್ಯ, ನಾಗರಾಜು, ತ್ಯಾಗರಾಜ್,ತಿಪ್ಪೇಸ್ವಾಮಿ,ಶಿರಾ ತಾಲ್ಲೂಕು ರೈತಸಂಘದ ಧನಂಜಯ,ಹೊಸಳ್ಳಿ ಅಶೋಕ್,ಬಸ್ ಕುಮಾರ್, ಏಜಾಜ್,ಮುನಿಯಪ್ಪ,ನಾಗರಾಜ್ ಇತರರು ಪಾಲ್ಗೊಂಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ