ಹುಳಿಯಾರು: ಜಿಲ್ಲೆಯ ಗಡಿಭಾಗದಲ್ಲಿರುವ ದಸೂಡಿಗೆ ೧೦೮ ಆಂಬ್ಯೂಲೆನ್ಸ್ ಸೇವೆ ಒದಗಿಸಬೇಕೆಂದು ಒತ್ತಾಯಿಸಿ ದಬ್ಬಗುಂಟೆ ರವಿಕುಮಾರ್ ನೇತೃತ್ವದಲ್ಲಿ ಹುಳಿಯಾರು ಹೋಬಳಿ ದಸೂಡಿ ಪ್ರಾಥಮಿಕ ಆರೊಗ್ಯ ಕೇಂದ್ರದ ಮುಂಭಾಗ ಶುಕ್ರವಾರ ಕೆಲ ಸಮಯ ಪ್ರತಿಭಟನೆ ನಡೆಯಿತು.
ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜಜ್ಜಿತವಾದ ನೂತನ ಕಟ್ಟಡವಿದೆ. ಈ ಆಸ್ಪತ್ರೆ ದಸೂಡಿ, ಗಾಣಧಾಳು, ಹೊಯ್ಸಲಕಟ್ಟೆ ಗ್ರಾಮ ಪಂಚಾಯ್ತಿಗಳ 42 ಗ್ರಾಮಗಳ 21157 ಮಂದಿ ಜನಸಂಖ್ಯೆಗೆ ಆರೋಗ್ಯ ನೆರವಿನ ಆಸರೆಯಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ಈ ಆಸ್ಪತ್ರೆಗೆ ಅಗತ್ಯ ವಾಹನವಿಲ್ಲದಿರುವುದರಿಂದ ಗಡಿ ಪ್ರದೇಶದ ಬಡವರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ ಔಷಧಿಗಳ ಕೊರತೆಯೂ ಕಂಡುಬಂದಿದ್ದು ಹಲವಾರು ಬಾರಿ ಈ ಬಗ್ಗೆ ಗಮನಸೆಳೆದರೂ ಸಹ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.
ತಾಲ್ಲೂಕ್ ವೈದ್ಯಾಧಿಕಾರಿ ಹಾಗೂ ಡಿಎಚ್‌ಓ ಅವರುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿ ಬೇಡಿಕೆ ಈಡೇರಿಸುವ ಭರವಸೆ ದೊರೆತ ಹಿನ್ನಲೆಯಲ್ಲಿ ಪ್ರತಿಭಟನೆ ನಿಲ್ಲಿಸಲಾಯಿತು.ಇನ್ನೊಂದು ತಿಂಗಳಿನಲ್ಲಿ ಸೌಲಭ್ಯ ಕಲ್ಪಿಸದಿದ್ದಲ್ಲಿ ಅಹೋರಾತ್ರಿ ಚಳುವಳಿ ನಡೆಸುವುದಾಗಿ ಪ್ರತಿಭಟನೆಕಾರರು ಎಚ್ಚರಿಸಿದ್ದಾರೆ.
ತಾಪಂ ಸದಸ್ಯ ಪ್ರಸನ್ನಕುಮಾರ್,ದಸೂಡಿ ಗ್ರಾಪಂ ಅಧ್ಯಕ್ಷೆ ಶೋಭಾ,ಉಪಾಧ್ಯಕ್ಷ ಹನುಮೇಶ್,ಸದಸ್ಯರುಗಳಾದ ಓಂಕಾರ್,ಜಯಣ್ಣ, ಮಾಜಿ ಸದಸ್ಯ ರಮೇಶ್,ಉಮ್ಲಾನಾಯ್ಕನ ತಾಂಡ್ಯದ ಯಜಮಾನ ಸೇಚಾಲಾಲ್, ಮಿಲ್ಟ್ರಿ ವೆಂಕಟೇಶ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ