ಸಾಸಲು ಸತೀಶ್ ಭೇಟಿ:ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಆಹ್ವಾನ
--------------
ಹುಳಿಯಾರು: ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸೋಮವಾರದಂದು ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು ಇಂದು ತುಮಕೂರು ಜಿಲ್ಲಾಧ್ಯಕ್ಷ ಶಂಕರಣ್ಣನವರ ನೇತೃತ್ವದಲ್ಲಿ ಧರಣಿ ಶಾಂತಿಯುತವಾಗಿ ಮುಂದುವರೆಯಿತು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಕೊಬ್ಬರಿ ಸಮಸ್ಯೆಯ ಬಗ್ಗೆ ಚರ್ಚಿಸಿದರು.ರೈತರ ಪರವಾಗಿ ಸಂಸದ ಮುದ್ಧಹನುಮೇಗೌಡರು ಕೇಂದ್ರದಲ್ಲಿ ಕೂಡ ಬೆಂಬಲ ಬೆಲೆ ಹೆಚ್ಚಳ ಮಾಡಿ ೧೫ ಸಾವಿರದಂತೆ ಖರೀದಿಸಲು ಒತ್ತಾಯಿಸಿದ್ದು ಸರ್ಕಾರ ಶೀಘ್ರವೇ ಕ್ರಮಕೈಗೊಳ್ಳಲಿದೆ ಎಂದರು. ಈ ಬಗ್ಗೆ ತಾಲ್ಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸೋಣ ಬನ್ನಿ ಎಂದು ಆಹ್ವಾನನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಧರಣಿ ನಿರತರು ಈಗಾಗಲೇ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲಾ. ರೈತರ ಬಗ್ಗೆ ಕಿಂಚಿತ್ ಕಾಳಜಿಯಿದ್ದಲ್ಲಿ ಮುಖ್ಯಮಂತ್ರಿಗಳೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲಿ ಎಂದರು.
ಈ ವೇಳೆ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಗ್ರಾಪಂ ಸದಸ್ಯ ದಯಾನಂದ್, ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ಈರಣ್ಣ, ಕೃಷಿಮಾರುಕಟ್ಟೆ ಸಮಿತಿ ಸದಸ್ಯ ರುದ್ರೇಶ್, ಪ್ರದೀಪ್,ರೈತಸಂಘದ ತಾಲ್ಲೂಕ್ ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ಮಲ್ಲೀಕಣ್ಣ, ನಾಗರಾಜ್, ದಾಸಪ್ಪ, ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ