ಹುಳಿಯಾರು:ಕೊಬ್ಬರಿ ಬೆಂಬಲ ಬೆಲೆ ಕೇಳಲು ಹೊರಟ ರೈತರನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ,ಅವರನ್ನು ಕೂಡಲೇ ಬಿಡುಗಡೆಮಾಡದಿದಲ್ಲಿ ರೈತಸಂಘದ ಹೊಸಳ್ಳಿ ಚಂದ್ರಪ್ಪ ಬಣದಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತುಮಕೂರು ಜಿಲ್ಲಾ ರೈತಸಂಗದ ಹೊಸಳ್ಳಿ ಚಂದ್ರಪ್ಪ ಬಣದ ತಾಲ್ಲೂಕ್ ಅಧ್ಯಕ್ಷ ಈಶ್ವರಪ್ಪ ಎಚ್ಚರಿಸಿದ್ದಾರೆ.
ಹುಳಿಯಾರಿನ ಪ್ರಧಾನ ಕಚೇರಿಯಲ್ಲಿ ಈ ಬಗ್ಗೆ ಸಭೆ ಸೇರಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಬಳಿ ರೈತರುಗಳೇ ಸಮಸ್ಯೆ ಹೇಳಲಿಕ್ಕೆ ಹೋದಾಗ ತುಮಕೂರಿನಿಂದ ಅರ್ಧಕ್ಕೆ ನಮ್ಮನ್ನು ವಾಪಸ್ಸು ಕಳುಹಿಸಿದ್ದರು.ಇದೀಗ ನಮ್ಮ ಜಾಗಕ್ಕೆ ಮುಖ್ಯಮಂತ್ರಿಗಳು ಬಂದಿದ್ದು ಅಲ್ಲಿಯೇ ತೆರಳಿ ನಮ್ಮ ಸಮಸ್ಯೆ ಹೇಳಿಕೊಳ್ಳೊಣವೆಂದು ಹೊರಟರೆ ಎಪಿಎಂಸಿಯ ಮುಂದೆ ರೈತರುಗಳನ್ನು ಬಂಧಿಸಿದ್ದು ಇದೇಂತ ರೈತ ಪರ ಸರ್ಕಾರವೆಂದು ಜಗಜ್ಜಾಹಿರಾಗಿದೆ ಎಂದು ಲೇವಡಿ ಮಾಡಿದರು.
ಬರಗಾಲ ಪೀಡಿತ ಪ್ರದೇಶಗಳ ವೀಕ್ಷಣೆಗ ಬಂದಿರುವ ಮುಖ್ಯಮಂತ್ರಿಗಳು ಮಳೆಬೆಳೆಯಿಲ್ಲದೆ ಕಂಗೆಟ್ಟಿರುವ ತಾಲ್ಲೂಕಿನ ರೈತರ ದುಸ್ಥಿತಿ ಅರಿತು ರೈತರ ಸಂಪೂರ್ಣ ಬೆಳೆ ವಿಮೆ ಹಣ ಬರುವಂತೆ ಕ್ರಮಕೈಗೊಳ್ಳಬೇಕು ಹಾಗೂ ಬರಗಾಲದಿಂದ ತತ್ತರಿಸಿರುವ ರೈತಾಪಿ ವರ್ಗದವರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಹೊಸಳ್ಳಿ ಚಂದ್ರಪ್ಪ ಮಾತನಾಡಿ ತುಮಕೂರು ಜಿಲ್ಲೆಗೆ ೩೬೦ ಕೋಟಿ ಬರಪರಿಹಾರ ನಿಧಿ ಬಿಡುಗಡೆ ಮಾಡಿರುವುದಾಗಿ ಹೇಳಿರುವುದು ಕೇವಲ ಪತ್ರಿಕಾ ಹೇಳಿಕೆಯಾಗಿದೆಯೇ ಹೊರತು ಇದರಿಂದ ಯಾವುದೇ ರೈತರಿಗೆ ಕಿಂಚಿತ್ ಅನುಕೂಲವಾಗಿಲ್ಲ.ರೈತರಿಗೆಂದೇಯಿರುವ ವಿಮೆ ಯೋಜನೆಯ ಫಲ ಯಾವುದೇ ರೈತರಿಗೆ ತಲುಪಿಲ್ಲ.ಸರ್ಕಾರಿ ನೌಕರರು ಮುಷ್ಕರ ಮಾಡಿದ ಕೂಡಲೇ ಅವರ ಬೇಡಿಕೆಗಳೀಡೆರಿಸುವ ಸರ್ಕಾರ ರೈತರ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸುವುದಿಲ್ಲ.ಉದ್ಯಮಿಗಳ ಸಾವಿರಾರು ಕೋಟಿ ಸಾಲವಿದ್ದರೂ ತಲೆಕೆಡಿಸಿಕೊಳ್ಳದ ಸರ್ಕಾರ ರೈತರ ಸಾವಿರಗಳ ಸಾಲಕ್ಕೆ ಬಡ್ಡಿಸೇರಿಸಿ ಬಲವಂತವಾಗಿ ವಸೂಲಿಗೆ ಮುಂದಾಗುತ್ತದೆ.ಸುಮಾರು ಇಪ್ಪತ್ತು ವರ್ಷಗಳ ಹಿಂದಿದ್ದ ಕೊಬ್ಬರಿ ಬೆಲೆಯೇ ಈಗಲೂ ಇದೆಯೆಂದರೆ ಸರ್ಕಾರಕ್ಕೆ ರೈತಪರ ಕಾಳಜಿ ಎಷ್ಟರ ಮಟ್ಟಿಗಿದೆಯೆಂದು ತಿಳಿಯಬಹುದಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ,ಗೋವಿಂದಪ್ಪ, ರಾಜಶೇಖರ್, ಕರಿಯಪ್ಪ, ಈರಣ್ಣ,ವೆಂಕಟೇಶ್,ಗಿರೀಶ್,ಕೃಷ್ಣಪ್ಪ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ