ಹುಳಿಯಾರು: ತೆಂಗು ಬೆಳೆಗಾರರನ್ನು ರಕ್ಷಿಸಲು ಕ್ವಿಂಟಲ್ ಕೊಬ್ಬರಿಗೆ ೧೫ ಸಾವಿರ ರೂ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಹುಳಿಯಾರಿನ ಎಪಿಎಂಸಿ ಮುಂದೆ ನ.೧೧ ರ ಶುಕ್ರವಾರದಿಂದ ಕರ್ನಾಟಕ ರಾಜ್ಯ ರೈತಸಂಘ ಹಮ್ಮಿಕೊಂಡಿದ್ದು ಬೆಲೆ ಘೋಷಣೆಯಾಗುವವರೆಗೂ ಅಹೋರಾತ್ರಿ ಧರಣಿಯಾಗಿ ಮುಂದುವರೆಯಲಿದೆ.
ಕೊಬ್ಬರಿಗೆ ಬೆಂಬಲ ಬೆಲೆಯ ಬಗ್ಗೆ ಸರ್ಕಾರದ ಭರವಸೆಗಳೆಲ್ಲಾ ಹುಸಿಯಾದ ಹಿನ್ನಲೆಯಲ್ಲಿ ಈ ನಿರಂತರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದ್ದು ೧೦ ಗಂಟೆಯಿಂದ ಪ್ರವಾಸಿಮಂದಿರದಿಂದ ಜಾಥಾ ಹೊರಟು ನೇರವಾಗಿ ಎಪಿಎಂಸಿ ತಲುಪಿ ಅಲ್ಲಿ ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ ನಿರಂತರ ಚಳುವಳಿ ಹೂಡಲಿದ್ದೇವೆ.ಒಂದು ತಿಂಗಳಾದರೂ ಸರಿ ಮೂರು ತಿಂಗಳಾದರೂ ಸರಿ .ಕೊಬ್ಬರಿಗೆ ಬೆಂಬಲ ಬೆಲೆ ೧೫ ಸಾವಿರ ರೂ ಘೋಷಣೆ ಮಾಡುವವರೆಗೂ ಈ ಬಾರಿ ಚಳುವಳಿ ನಿಲ್ಲುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಾದಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಸತೀಶ್ ತಿಳಿಸಿದ್ದು ಸಂಘ ಸಂಸ್ಥೆಗಳು, ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳುವ ಮೂಲಕ ಧರಣಿಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿಮಾಡಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ