ಪೂರ್ವ ಸಿದ್ಧತೆಯೇ ಮಾಡಿಲ್ಲ ....ಆದರೂ
ಇಂದಿನಿಂದ ಆರಂಭವಾಗಲಿದೆ ನಫೆಡ್ ಕೊಬ್ಬರಿ ಖರೀದಿ ಕೇಂದ್ರ
---------------------------------------
ಹುಳಿಯಾರು:ಸರ್ಕಾರದ ಬೆಂಬಲ ಬೆಲೆಯಲ್ಲಿ ಜಿಲ್ಲೆಯ ಎಂಟು ಕಡೆ ಕೊಬ್ಬರಿ ಖರೀದಿ ಕೇಂದ್ರವನ್ನು ನ.೨೩ರಿಂದ ಸ್ಥಾಪಿಸಲಾಗುವುದು ಎಂದು ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಜಿಲ್ಲಾ ಉಪನಿರ್ದೇಶಕ ವಿ.ರಾಜಣ್ಣ ತಿಳಿಸಿದ್ದು ಇವರ ಹೇಳಿಕೆ ಅನೇಕ ಗೊಂದಲಗಳಿಗೆ ಕಾರಣವಾಗಿದೆ.
ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ಹನ್ನೆರಡನೇ ದಿನದ ಧರಣಿಯಲ್ಲಿ ಮಘಳವಾರದಂದು ಪಾಲ್ಗೊಂಡಿದ್ದ ಅವರು ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ,ತಿಪಟೂರು,ತುರುವೇಕೆರೆ,ಕುಣಿಗಲ್,ಗುಬ್ಬಿ, ಶಿರಾ,ತುಮಕೂರು ಗಳಲ್ಲಿ ನ. ೨೩ರ ಬುಧವಾರ ಖರೀದಿ ಕೇಂದ್ರವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಾಗುವುದು ಎಂದರು.
ಹುಳಿಯಾರಿನ ಮಾರುಕಟ್ಟೆ ಆವರಣದಲ್ಲಿರುವ ಗೋದಾಮಿನಲ್ಲಿ .ಕೇವಲ ಎರಡು ಚೀಲಗಳನಿಟ್ಟು ಪೂಜೆ ಮಾಡಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ರೈತರಿಗೆ ಚೀಟಿ ನೀಡಿ ನಂತರದ ದಿನಗಳಲ್ಲಿ ಖರೀದಿಸಲಾಗುವುದು ಎಂದು ಭರವಸೆ ನೀಡಿದ್ದು ಇದು ಹತ್ತು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಲು ಕಾರಣವಾಗಿದೆ.
ಕಣ್ಣೊರೆಸುವ ತಂತ್ರ :ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಆಗ್ರಹಿಸಿ ಕಳೆದ ಹನ್ನೊಂದು ದಿನದಿಂದ ಧರಣಿ ನಡೆಯುತ್ತಿದ್ದು ಕಳೆದೆರಡು ದಿನಗಳಿಂದ ತೀವ್ರ ಸ್ವರೂಪ ಪಡೆದಿದ್ದು ಇದೀಗ ಸರ್ಕಾರ ಎಚ್ಚೆತ್ತು ವರದಿ ಪಡೆದುಕೊಂಡಿದೆ.ರಾಷ್ಟ್ರೀಯ ಕೃಷಿ ಉತ್ಪನ್ನ ಸಹಕಾರ ಮಾರಾಟ ಮಹಾಮಂಡಳಿಯವರು(ನಫೆಡ್) ಬೆಂಬಲಬೆಲೆ ಘೋಷಿಸಿ ಖರೀದಿ ಕೇಂದ್ರ ತೆರಯಲು ಒಪ್ಪಿಗೆ ನೀಡಿದ ನಂತರವಷ್ಟೆ ಕೊಬ್ಬರಿ ಖರೀದಿ ಕೇಂದ್ರವನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ಘೋಷಿಸಬೇಕಿದ್ದು ನಫೆಡ್ ಅಧಿಕಾರಿಗಳ ಬದಲಿಗೆ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕ ಘೋಷಿಸಿರುವ ಖರೀದಿ ಕೇಂದ್ರ ಸ್ಥಾಪನೆ ಕೇವಲ ಧರಣಿನಿರತರ ಕಣ್ಣೊರೆಸುವ ತಂತ್ರವೋ ಎಂಬ ಪ್ರಶ್ನೆ ಕೇಳಿಬಂದಿದೆ.
ಬೆಳಗಾಂ ಅಧಿವೇಶನದಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಕ್ಕೆ ಒಪ್ಪಿಗೆ ನೀಡಲಿದೆ ಎಂಬ ಮಾತು ಕೇಳಿಬಂದಿತ್ತಾದರೂ ಬೆಂಬಲ ಬೆಲೆ ಎಷ್ಟು ಎನ್ನುವುದು ಗೌಪ್ಯವಾಗಿಯೇ ಉಳಿಸಿತ್ತು.ರೈತರ ಪರಾವಗಿ ಸಂಸದ ಮುದ್ಧಹನುಮೇಗೌಡರು ಕೂಡ ಕೆಂದ್ರದ ಬೆಂಬಲ ಬೆಲೆ ೬೨೪೦ ರೂಗಳಿಗೆ ರಾಜ್ಯದ ಪ್ರೋತ್ಸಾಹ ಧನ ಸೇರಿ ಒಟ್ಟು ಹದಿನೈದು ಸಾವಿರದಂತೆ ಖರೀದಿ ಮಾಡಬೇಕೆಂದು ಒತ್ತಡ ತಂದಿದ್ದು ಸರ್ಕಾರ ಮಾತ್ರ ಇದುವರೆಗೂ ಪ್ರೋತ್ಸಾಹ ಧನ ಎಷ್ಟು ಎಂದು ಹೇಳದೆ ಮುಗ್ಗುಮಾಗಿ ಕುಳಿತಿದ್ದು ಖರೀದಿ ಕೇಂದ್ರದಲ್ಲಿ ಎಷ್ಟು ಮೊತ್ತ ನೀಡಿ ಕೊಬ್ಬರಿ ಖರೀದಿಸುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಸಿದ್ಧತೆ ಇಲ್ಲ: ಇಂದು ಆಗಮಿಸಿದ್ದ ಅಧಿಕಾರಿ ಖರೀದಿ ಕೇಂದ್ರ ಪ್ರಾರಂಭಿಸುವುದಾಗಿ ಹೇಳಿದ್ದೇನೋ ಸರಿ ಆದರೆ ಇದಕ್ಕೆ ಬೇಕಾದ ಸಿದ್ಧತೆಗಳ ಸಮರ್ಪಕವಾಗಿ ನಡೆದಿದ್ದೆಯಾ ಎಂದರೆ ಅವರ ಬಳಿ ಉತ್ತರವಿಲ್ಲ.ಕೊಬ್ಬರಿ ಖರೀದಿ ಕೇಂದ್ರ ತೆರೆಯುವ ನಿರೀಕ್ಷೆಯಲ್ಲಿರುವ ಹಲ ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಚೀಟಿ, ಆರ್‌ಟಿಸಿ ಮುಂತಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು ಎಪಿಎಂಸಿಯಲ್ಲಿನ ಖರೀದಿ ಕೇಂದ್ರ ಆರಂಭ ಎಂದು ತಿಳಿದು ಕೊಬ್ಬರಿ ತಂದರೆ ಖರೀದಿಸುವವರು ಯಾರು.ಖರೀದಿ ನಡೆಯದಿದ್ದರೆ ಯಾರುಹೊಣೆ ,ವಾಪಸ್ಸು ಮಾಲನ್ನು ತೆಗೆದುಕೊಂದು ಹೋಗುವುದೋ ಇಲ್ಲ ಕೇಂದ್ರದಲ್ಲೆ ತೂಕ ಹಾಕಿ ಬಿಡುವುದೋ ಉತ್ತರ ಕೊಡುವವರು ಯಾರು.ಖರೀದಿಸುವವರು ಇಲ್ಲದಿದ್ದರೆ ಖಾಸಗಿ ಮಾರಾಟಗಾರರಿಗೆ ಕೊಬ್ಬರಿ ಮಾರಿ ಖರ್ಚಿಗೆ ಹಣ ಮಾಡಿಕೊಂಡು ವಾಪಸ್ ಹೋಗುವ ಸಾಧ್ಯತೆಗಳು ಕೂಡ ಇದೆ.
ಗೊತ್ತಿಲ್ಲ: ಸ್ಥಳದಲ್ಲಿ ನೋಡಿದಂತೆ ಗೋದಾಮು ಬಟ್ಟರೆ ಯಾವುದೇ ಸಿದ್ಧತೆ ಸಾಗಿಲ್ಲ.ರಾಜ್ಯ ಸರ್ಕಾರ ಎಷ್ಟು ಪ್ರೋತ್ಸಾಹ ಧನ ನೀಡಿ ಕೊಬ್ಬರಿ ಖರೀದಿಸಲಿದೆ ಎಂದು ತಿಳಿದಿಲ್ಲ.ಸಹಕಾರಿ ಮಹಾಮಂಡಲದ ಖರೀದಿ ಅಧಿಕಾರಿಗಳು ಯಾರೊಬ್ಬರು ಬಂದಿಲ್ಲ.ಇನ್ನಿತರೆ ಇಲಾಖೆಯ ಅಧಿಕಾರಿಗಳ ನಿಯೋಜನೆಯಾಗಿಲ್ಲ..ಕೊಬ್ಬರಿ ಸಂಗ್ರಹಕ್ಕೆ ಬೇಕಾದ ಚೀಲಗಳಾಗಲಿ,ದಾರಗಳಾಗಲಿ ಬಂದಿಲ್ಲ.ಕೊಬ್ಬರಿ ಕೊಳ್ಳಲು ರೈತರಿಗೆ ದಿನಾಂಕ ನಿಗದಿಪಡಿಸಿಲ್ಲ.ಪ್ರತಿ ದಿನ ಎಷ್ಟು ಚೀಲ ಕೊಬ್ಬರಿ ಕೊಳ್ಳಲಾಗುವುದು ಗೊತ್ತಿಲ್ಲ.ರೈತರಿಗೆ ಚೆಕ್ ನೀಡುವ ವ್ಯವಸ್ಥೆನೋ ಅಥವಾ ಹಣ ಪಾವತಿಸುವ ವ್ಯವಸ್ಥೆಯೋ ಅಲ್ಲದೆ ಹಣದ ವರ್ಗಾವಣೆ ಹೇಗೆ ತಿಳಿಸಿಲ್ಲ. ಪ್ರೋತ್ಸಾಹ ಧನವನ್ನು ಎಷ್ಟು ಕ್ವಿಂಟಲ್‌ಗೆ ಮಿತಿಗೊಳಿಸಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.
ಒಟ್ಟಾರೆ ಇವರ ತರಾತುರಿ ನೋಡಿದರೆ ಸಧ್ಯಕ್ಕೆ ರೈತರ ಕಣ್ಣೊರೆಸುವ ತಂತ್ರವಾಗಿ ಕಾಣುತ್ತಿದೆ.ಕೇವಲ ಪ್ರಾರಂಭವಾದರಷ್ಟೆ ಸಾಲದು ಖರೀದಿ ನಡೆಯಬೇಕು.ಇಲ್ಲದಿದ್ದರೆ ರೈತರು ನಫೆಡ್ ಪ್ರಾರಂಭವಾಗಿದೆ ಎಂದು ಮಾಲಿನ ಸಮೇತ ಬಂದು ವಾಪಸ್ಸು ಹೋಗುವಂತಾಗುತ್ತದೆ.ಸಿದ್ಧತೆ ಇಲ್ಲದೆ ಕಾಟಾಚಾರದ ಖರೀದಿ ಕೇಂದ್ರ ಮತ್ತಷ್ಟು ಸಮಸ್ಯೆಗೆ ಕಾರಣವಾಗಲಿದೆ.
-------------------------------------------------------
ಕೊಬ್ಬರಿ ಖರೀದಿ ಕೇಂದ್ರಕ್ಕೆ ಬುಧವಾರ ಚಾಲನೆ ಎಂದು ತಿಳಿಸಿದ್ದು ಕೇಂದ್ರ ಸರ್ಕಾರದ ರೂ. ೬೨೪೦ ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ ತನ್ನ ಪಾಲಿನ ಪ್ರೋತ್ಸಾಹ ಧನ ಸೇರಿಸಿ ಒಟ್ಟು ೧೫ಸಾವಿರ ಕ್ವಿಂಟಾಲ್ಗೆ ಕೊಬ್ಬರಿ ಖರೀದಿಸಬೇಕು.ಹಾಗಾದಾಗ ಮಾತ್ರವಷ್ಟೆ ರೈತರಿಗೆ ಒಂದಷ್ಟು ನೆರವಾಗುತ್ತದೆ ನಮ್ಮ ಶ್ರಮ ಹಾಕಿದ್ದು ಫಲಿಸುತ್ತದೆ.ಇಲ್ಲದಿದ್ದಲ್ಲಿ ಖರೀದಿ ಕೇಂದ್ರ ತೆರೆಯುವುದೇ ಬೇಡ.ಈ ವಿಷಯದಲ್ಲಿ ಯಾವುದೇ ಕಾರಣಕ್ಕೆ ಹಿಂದೆ ಸರಿಯುವ ಮಾತಿಲ್ಲ :ಕೆಂಕೆರೆ ಸತೀಶ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ