ಇಂದಿನ ಧರಣಿಗೆ ಕಾಂಗ್ರೆಸ್, ತಾಲ್ಲೂಕ್ ಕನ್ನಡ ಸಂಘ,ದಲಿತ ಸಂಘರ್ಷ ಸಮಿತಿ,ಜಿಲ್ಲಾ ಜಾಗೃತಿ ಸೇನೆ ಬೆಂಬಲ
ಹುಳಿಯಾರು:ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಲೆ ಕೊಬ್ಬರಿಯಾಗಿದ್ದು ಕಳೆದ ವರ್ಷ ೧೮ ಸಾವಿರವಿದ್ದ ಕೊಬ್ಬರಿ ಈಗ ೬ ಸಾವಿರಕ್ಕೆ ಕುಸಿದಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡಲೇ ರೈತರ ನೆರವಿಗೆ ಧಾವಿಸಬೇಕಿದ್ದು ಇನ್ನೂ ಮೀನಾಮೇಷ ಎಣಿಸುವುದರಲ್ಲಿ ಅರ್ಥವಿಲ್ಲ. ರೈತರು ಗಾಂಧೀಜಿ ಆಶಯದಂತೆ ಶಾಂತಿಯುತ ಧರಣಿ ನಡೆಸುತ್ತಿದ್ದು ಅವರ ತಾಳ್ಮೆ ಪರೀಕ್ಷಿಸದೆ,ಅವರನ್ನು ಕೆರಳಿಸುವ ಪ್ರಯತ್ನ ಮಾಡದೆ ರೈತರಿಗೆ ಸ್ಪಂದಿಸಬೇಕು. ರೈತರ ಧರಣಿಗೆ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ ತಿಳಿಸಿದರು.
ಹುಳಿಯಾರಿನಲ್ಲಿ ಕೊಬ್ಬರಿ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿದರು. |
ಹುಳಿಯಾರು ಎಪಿಎಂಸಿ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಜನಕ್ಕಾಗುವ ಅನ್ಯಾಯವನ್ನು ವಿರೋಧಿಸುವ ವೇದಿಕೆಗಳು ಈ ಚಳುವಳಿಗಳಾಗಿದ್ದು ಜನಬೆಂಬಲವಿಲ್ಲದಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳೆರಡು ರೈತರ ನೋವಿಗೆ ಗಮನ ಹರಿಸಬೇಕು.ಸರ್ಕಾರದ ಪ್ರತಿನಿಧಿಗಳಾಗಿ ನಿಮ್ಮ ಹೋರಾಟವನ್ನು, ಬೇಡಿಕೆಯನ್ನುಸರ್ಕಾರಕ್ಕೆ ತಿಳಿಸುವ ಕೆಲಸ ಮಾಡುತ್ತೇವೆ.ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೂ,ಜಿಲ್ಲಾ ಸಚಿವರಿಗೂ ರೈತರ ಸಮಸ್ಯೆಗಳ ಬಗ್ಗೆ ಖುದ್ದಾಗಿ ಭೇಟಿಯಾಗಿ ಸಮಸ್ಯೆಯನ್ನು ತಿಳಿಸುತ್ತೇನೆ.ರೈತರ ಚಳುವಳಿ ಯಶಸ್ವಿಯಾಗಲು ವೈಯುಕ್ತಿಕವಾಗಿ ನನ್ನ ಬೆಂಬಲ ಕೊಡುವೆ ಎಂದರು.
ಕಾಂಗ್ರೆಸ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ |
ದಲಿತ ಸಂಘರ್ಷ ಸಮಿತಿ ಸಂಚಾಲಕ ಲಿಂಗದೇವರು ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಮಾತಿನಲ್ಲಿ ರೈತ ದೇಶದ ಬೆನ್ನೆಲುಬು ಎಂಬು ಹೇಳುತ್ತಲೇ ರೈತನ ಬೆನ್ನಿಗೆ ಚೂರಿ ಹಾಕುತ್ತಿವೆ. ರೈತರ ಕಷ್ಟಕ್ಕೆ ಸ್ಪಂಧಿಸುವುದಿರಲಿ ರೈತರ ಕಷ್ಟಗಳನ್ನೇ ಆಲಿಸದೆ ಪ್ರಧಾನಿ ವಿದೇಶ ಪ್ರವಾಸದಲ್ಲಿ ತೊಡಗಿಕೊಂಡಿದ್ದರೆ ರಾಜ್ಯ ಸರ್ಕಾರ ನಿದ್ರೆಯಲ್ಲಿದೆ. ರೈತ ಒಕ್ಕಲುತನ ಕೈ ಬಿಟ್ಟು ದೇಶದಲ್ಲಿ ಅನ್ನಕ್ಕೆ ಕೊರತೆ ಎದುರಾದಾಗ ಮಾತ್ರ ಸರ್ಕಾರಗಳಿಗೆ ಬುದ್ದಿ ಬರಲಿದೆ ಎಂದರು.
ಕಾಂಗ್ರೆಸ್‌ನ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಅವರು ಮಾತನಾಡಿ ರೈತರ ಕೃಷಿ ಸಾಲವನ್ನು ಸರ್ಕಾರ ಮನ್ನ ಮಾಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ತಕ್ಷಣ ಕೊಬ್ಬರಿಗೆ ಕನಿಷ್ಟ ೧೦ ಸಾವಿರ ರೂ ಬೆಲೆ ಘೋಷಿಸಿ ನ್ಯಾಫೆಡ್ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಲಿಂಗದೇವರು |
ದೇವರಾಜ ಅರಸು ಪತ್ತಿನ ಸಹಕಾರ ಸಂಘದ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ವಿಭಾಗದ ಬಿ.ಶಿವಕುಮಾರ್, ಜಿಲ್ಲಾ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಎಸ್.ಎಂ.ಲಿಂಗರಾಜು, ಎಪಿಎಂಸಿ ಮಾಜಿ ಸದಸ್ಯ ರಹಮತ್ ಉಲ್ಲಾ ಸಾಬ್,ಬಿ.ಕೆ.ಜಯಣ್ಣ, ರೈತ ಸಂಘದ ಕೆಂಕೆರೆ ಸತೀಶ್,ಬಂಗಾರಗೆರೆ ವಿರೂಪಾಕ್ಷಯ್ಯ, ಮಲ್ಲಿಕಾರ್ಜುನಯ್ಯ, ಲೋಕೇಶ್, ಶಿವಣ್ಣ, ದಾಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ