ಹುಳಿಯಾರು: ಕೊಬ್ಬರಿ ಬೆಲೆಗಾಗಿ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ರೈತರು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಹುಳಿಯಾರು ಸಮೀಪದ ಬೋರನಕಣಿವೆ ಸುವರ್ಣ ವಿದ್ಯಾಚೇತನ ಹಾಗೂ ಸೃಜನ ಮಹಿಳಾ ಸಂಘದ ಸದಸ್ಯರು ಸೋಮವಾರ ರಾತ್ರಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ಹುಳಿಯಾರಿನ ರೈತರ ಧರಣಿ ಬೆಂಬಲಿಸಿ ಬೋರನಕಣಿವೆ ಸುವರ್ಣ ವಿದ್ಯಾಚೇತನ ಹಾಗೂ ಸೃಜನ ಮಹಿಳಾ ಸಂಘದ ಸದಸ್ಯರುಗಳು ಪಟ್ಟಣದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು. |
ಬೋರನಕಣಿವೆಯಿಂದ ಸುಮಾರು ೧೦೦ಕ್ಕೂ ಹೆಚ್ಚುಮಂದಿ ರಾತ್ರಿ ಹುಳಿಯಾರಿನ ಕೃಷಿಉತ್ಪನ್ನ ಮಾರುಕಟ್ಟೆಯ ಧರಣಿ ಸ್ಥಳಕ್ಕೆ ಆಗಮಿಸಿ ಅಲ್ಲಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಂಜಿನ ಮೆರವಣಿಗೆಯಲ್ಲಿ ಸಾಗಿದರು. ರಾಮಗೋಪಾಲ್ ವೃತ್ತ, ಬಿ.ಹೆಚ್.ರಸ್ತೆ, ಪೊಲೀಸ್‌ಠಾಣಿ ವೃತ್ತದಿಂದ ಡಾ:ರಾಜ್‌ಕುಮಾರ್ ರಸ್ತೆಯ ಮೂಲಕ ಬಸ್ ನಿಲ್ದಾಣ, ಗಾಂಧಿಪೇಟೆ ಮಾರ್ಗವಾಗಿ ಎರಡು ಗಂಟೆಗಳಿಗೂ ಹೆಚ್ಚುಕಾಲ ಮೆರವಣಿಗೆ ನಡೆಸಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ದಬ್ಬಗುಂಟ್ಟೆ ಡಿ.ಬಿ.ರವಕುಮಾರ್ ಮಾತನಾಡಿ ರೈತರು ಕಳೆದ ೧೮ ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಸಹಾ ತಿರುಗಿನೋಡದ ಕುರುಡು ಸರಕಾರ ಇದಾಗಿದೆ ಎಂದು ಟೀಕಿಸಿದರು.
ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಸರಕಾರಗಳು ರೈತರ ತಾಳ್ಮೆ ಪರೀಕ್ಷಿಸುತ್ತಿದ್ದು ರೈತರ ಬಗ್ಗೆ ಸ್ವಲ್ಪವಾದರು ಅನುಕಂಪವಿದ್ದರೆ ಈ ಕೂಡಲೆ ರೈತರ ಕಷ್ಟಗಳಿಗೆ ಸ್ಪಂದಿಸಿ ಕೊಬ್ಬರಿಗೆ ಸಮಪರ್ಕವಾದ ಬೆಲೆಯನ್ನ ನೀಡಲಿ ಎಂದು ಒತ್ತಾಯಿಸಿದರು.
ಈ ಪಂಜಿನ ಮೇರವಣಿಗೆಯಲ್ಲಿ ರಾಜ್ಯರೈತಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್,ತಮ್ಮಡಿಹಳ್ಳಿ ಮಲ್ಲಿಕಾರ್ಜುನ್,ದಸೂಡಿ ತಾ.ಪಂ.ಸದಸ್ಯ ಪ್ರಸನ್ನಕುಮಾರ್, ಗ್ರಾಪಂ ಸದಸ್ಯರುಗಳಾದ ರಘು ಹಾಗೂ ಮಧುಸೂದನ್, ಸುವರ್ಣ ವಿದ್ಯಾಚೇತನದ ಯುವರಾಜು, ಮಂಜುನಾಥ್, ಶಿವಕುಮಾರ್, ಗುರು, ಆನಂದ್ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ