ಕೋಡಿಪಾಳ್ಯದಲ್ಲಿ : ಮೈಲಾರಲಿಂಗೇಶ್ವರಸ್ವಾಮಿ ದೇವರ ದೋಣಿ ಸೇವೆ ------------------ ಹುಳಿಯಾರು : ಹೋಬಳಿ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಭಾನುವಾರ ವಿಶೇಷವಾಗಿ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಶನಿವಾರ ಸಂಜೆ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಸಲಾಗಿತ್ತು. ಭಾನುವಾರ ಬೆಳಿಗ್ಗೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯಾನ ತುಂಬಿಸುವ ಸೇವೆ ಜರುಗಿಸಿದರು. ಮೈಲಾರದೇವರು ಅವಾಹನೆಯಾದ ಗೊರಪ್ಪಗಳು ದೇವಾಲಯದ ಪ್ರಾಂಗಣದಲ್ಲಿ ಕುಪ್ಪಳಿಸುತ್ತಿದ್ದಿದ್ದು ನೆರೆದಿದ್ದವರಲ್ಲಿ ಭಕ್ತಿಭಾವವನ್ನುಂಟುಮಾಡಿ ಮುಂದೇನಾಗುತ್ತದೆ ಎಂದು ತದೇಕಚಿತ್ತದಿಂದ ನೋಡುವಂತಾಗಿತ್ತು . ಪೂಜೆ ಮುಗಿದ ನಂತರ ಬಾಳೆಹಣ್ಣಿನ ಪ್ರಸಾದವನ್ನು ಆಗಮಿಸಿದ್ದ ಭಕ್ತರಿಗೆ ವಿತರಿಸಲಾಯಿತು. ದೇವಾಲಯ ಸಮಿತಿಯವರಾದ ನಿಂಗಪ್ಪ,ದುರ್ಗಪ್ಪ,ಬಸವರಾಜು,ವಿಜಯ್ ಕುಮಾರ್, ರಘುನಾಥ್,ನಾಗರಾಜು ಸೇರಿದಂತೆ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದ ಭಕ್ತರು ಆಗಮಿಸಿ ದೋಣಿ ಸೇವ್ಯಲ್ಲಿ ಪಾಲ್ಗೊಂಡು ಸ್ವಾಮಿಯ ಅಶೀರ್ವಾದಕ್ಕೆ ಭಾಜನರಾದರು.
ಹುಳಿಯಾರು ಹೋಬಳಿ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಭಾನುವಾರ ವಿಶೇಷವಾಗಿ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೊಣೆನ ಸೇವೆ ಮತ್ತು ಎಡೆಸೇವೆ ನಡೆಯಿತು. ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಶನಿವಾರ ಸಂಜೆ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಸಲಾಗಿತ್ತು. ಭಾನುವಾರ ಬೆಳಿಗ್ಗೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯಾನ ತುಂಬಿಸುವ ಸೇವೆ ಜರುಗಿಸಿದರು. ಮೈಲಾರದೇವರು ಅವಾಹನೆಯಾದ ಗೊರಪ್ಪಗಳು ದೇವಾಲಯದ ಪ್ರಾಂಗಣದಲ್ಲಿ ಕುಪ್ಪಳಿಸುತ್ತಿದ್ದಿದ್ದು ನೆರೆದಿದ್ದವರಲ್ಲಿ ಭಕ್ತಿಭಾವವನ್ನುಂಟುಮಾಡಿ ಮುಂದೇನಾಗುತ್ತದೆ ಎಂದು ತದೇಕಚಿತ್ತದಿಂದ ನೋಡುವಂತಾಗಿತ್ತು . ...