ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕುವ ಉದ್ದೇಶದಿಂದ ಮಾಹಿತಿಹಕ್ಕು ಕಾಯ್ದೆ ಜಾರಿಯಲಿದ್ದು ಪ್ರತಿಯೊಬ್ಬರೂ ಸಹ ಇದರಡಿಯಲ್ಲಿ ನ್ಯಾಯಸಮ್ಮತವಾಗಿ ಅರ್ಜಿಸಲ್ಲಿಸಿ ಮಾಹಿತಿ ಪಡೆಯಬಹುದು ಎಂದು ಸಾಮಾಜಿಕ ಕಾರ್ಯಕರ್ತ ಸಾ.ಚಿ.ರಾಜ್ ಕುಮಾರ್ ತಿಳಿಸಿದರು.
ಹುಳಿಯಾರಿನ ಗಣಪತಿ ದೇವಾಲಯದಲ್ಲಿ ನಡೆನುಡಿ,ಸ್ವಚ್ಚ ಸಮಾಜದಡಿ ಆಯೋಜಿಸಿದ್ದ ಚಳುವಳಿಯಾಗಿ ಮಾಹಿತಿಹಕ್ಕು ಕಾಯ್ದೆ ಮತ್ತು ಲೋಕಾಯುಕ್ತಕಾಯ್ದೆ ಎಂಬ ವಿಚಾರ ಗೋಷ್ಠಿಯಲ್ಲಿ ಮಾಹಿತಿಹಕ್ಕು ಕಾಯ್ದೆಯ ಸ್ವರೂಪ ಮತ್ತು ಮಹತ್ವ ಕುರಿತು ಅವರು ಮಾಹಿತಿ ತಿಳಿಸಿದರು.
ಹುಳಿಯಾರಿನಲ್ಲಿ ನಡೆದ ಚಳುವಳಿಯಾಗಿ ಮಾಹಿತಿಹಕ್ಕು ಹಾಗೂ ಲೋಕಾಯುಕ್ತ ಕಾಯ್ದೆ ವಿಚಾರ ಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸಾ.ಚಿ.ರಾಜ್ ಕುಮಾರ್ ಮಾತನಾಡಿದರು. |
ಸಂವಿಧಾನದಲ್ಲಿ ಪ್ರಜೆಗಳೇ ಪ್ರಭುಗಳು ಎಂದಿದ್ದರೂ ಪ್ರಾಯೋಗಿಕವಾಗಿ ಅದು ಜಾರಿಯಲಿಲ್ಲ, ನಮಗೆ ದೊರೆಯಬೇಕಾದ ಸೌಲಭ್ಯಗಳಬಗ್ಗೆ, ಯೋಜನೆಗಳ ಬಗ್ಗೆ, ಸ್ಥಳೀಯ ಆಡಳಿತಕ್ಕೆ ಬರುವ ಅನುದಾನಗಳ ಬಗ್ಗೆ ಸೇರಿದಂತೆ ಇನ್ನಿತ ವಿಚಾರಗಳ ಬಗ್ಗೆ ಮಾಹಿತಿ ಕೇಳುವುದು ದುಸ್ಥರದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಆರ್.ಟಿ.ಐ ಕಾಯ್ದೆ ಜಾರಿಗೊಳಿಸಿದ್ದು ನಮ್ಮ ಹಕ್ಕುಗಳಿಗೆ ಧಕ್ಕೆಯಾಗದಂತೆ ಹಾಗೂ ನಮಗೆ ಬೇಕಾದ ಮಾಹಿತಿಯನ್ನು ಇದರಡಿಯಲ್ಲಿ ಪಡೆಯಬಹುದಾಗಿದೆ ಎಂದರು. ಸರ್ಕಾರ ರೂಪಿಸುವ ಯೋಜನೆಗಳಿಗೆ ವ್ಯಯಿಸುವ ಹಣ ನಾವುಕಟ್ಟುವ ತೆರಿಗೆಯೇ ಆಗಿದೆ. ಆದರೆ ಇಂದಿನ ಅಧಿಕಾರಿಗಳು,ಜನಪ್ರತಿನಿಧಿಗಳು ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸದೆ ವಂಚನೆಯಲ್ಲಿ ತೊಡಗಿದ್ದಾರೆ. ಇನ್ನಾದರೂ ನಾವುಗಳು ಎಚ್ಚೆತ್ತು ನಮ್ಮಗ್ರಾಮಗಳ ಮಟ್ಟದಲ್ಲಿ ಆಗುತ್ತಿರುವಂತ ಭ್ರಷ್ಟಾಚಾರದ ಬಗ್ಗೆ ಧ್ವನಿಯತ್ತಬೇಕಿದೆ ಎಂದರು. ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಸಂಘಟನೆಗಳನ್ನು ರಚಿಸಿಕೊಂಡು ಅವುಗಳ ಮೂಲಕ ನಮಗೆ ದೊರೆಯಬೇಕಾದ ಮಾಹಿತಿ ಹಾಗೂ ಸೌಲಭ್ಯಗಳನ್ನು ಪಡೆಯೋಣ ಎಂದು ತಿಳಿಸಿದರು.
ದಲಿತಬಹುಜನ ಚಳುವಳಿಯ ವೆಂಕಟೇಶ್ ಮಾತನಾಡಿ, ಸರ್ಕಾರದ ಸವಲತ್ತುಗಳಿಂದ ವಂಚಿತರಾದ ಸಮುದಾಯಗಳು ಯಾವರೀತಿ ಈ ಕಾಯ್ದೆಯಡಿ ತಮಗೆ ದೊರೆಯಬೇಕಾದ ಮಾಹಿತಿಯನ್ನು ಪಡೆಯಬಹುದು ಎಂದನ್ನು ತಿಳಿಸಿದರು. ಮಾಹಿತಿಹಕ್ಕು ಪಡೆಯಲು ಅನುಸರಿಸಬೇಕಾದ ಮಾರ್ಗಸೂಚಿ , ಅರ್ಜಿ ಬರೆಯುವ ಪರಿ, ಅದಕ್ಕೆ ತಗುಲುವ ವೆಚ್ಚ ಸೇರಿದಂತೆ ತಾವು ಬರೆದ ಅರ್ಜಿಯನ್ನು ಯಾರಿಗೆ ನೀಡುವ ಮೂಲಕ ಮಾಹಿತಿ ಪಡೆಯಬಹುದು ಎಂಬುದನ್ನು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಪಶುವೈದ್ಯಾಧಿಕಾರಿ ರಘುಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಶೋಷಿತವರ್ಗಗಳ ಅಭಿವೃದ್ಧಿಯಾಗಬೇಕೆಂದರೆ ಅದು ಹೋರಾಟದಿಂದ ಮಾತ್ರ ಸಾಧ್ಯ. ಅದಕ್ಕಾಗಿ ಸಂಘಟನೆಯಾಗಬೇಕು ಆ ಮೂಲಕ ನಮ್ಮನ್ನು ಶೋಷಿಸುತ್ತಿರುವವರನ್ನು ಜಾಗೃತರನಾಗಿ ಮಾಡುವ ಕಾರ್ಯವಾಗಬೇಕಿದೆ ಎಂದರು. ಒಬ್ಬರಿಗೊಬ್ಬರು ಸಹಕಾರಯುತವಾಗಿ,ಪ್ರತಿಫಲಾಪೇಕ್ಷೆಯಿಲ್ಲದೆ ತಮಗೆ ಸಿಗಬೇಕಾದ ಮಾಹಿತಿಯನ್ನು ಆರ್.ಟಿ.ಐ ಕಾಯ್ದೆಯಡಿ ಪಡೆಯುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀಪಾದಭಟ್,ಲೋಕೇಶ್, ಹುಳಿಯಾರಿನ ಜಯಲಕ್ಷ್ಮಿ, ಚಿಕ್ಕಣ್ಣ,ರಾಘವೇಂದ್ರ,ರಾಜಣ್ಣ,ಕೆಂಕೆರೆಮಂಜು ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳ ಗ್ರಾಮಸ್ಥರು,ವಿವಿಧ ಸಮುದಾಯದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ