ಹುಳಿಯಾರು : ಪಟ್ಟಣ ಬಳ್ಳೆಕಟ್ಟೆ ಸಮೀಪ ರಾಜ್ಯಹೆದ್ದಾರಿ ಬದಿಯ ಬೇವಿನಮರಕ್ಕೆ ಖಾಸಗಿ ಬಸ್ಸೊಂದು ಅಪ್ಪಳಿಸಿ ವ್ಯಕ್ತಿಯೊಬ್ಬ ಸಾವನಪ್ಪಿರುವ ದುರ್ಘಟನೆ ಗುರುವಾರ ರಾತ್ರಿ ಗೌರಿ ಹಬ್ಬದ ದಿನವೇ ಘಟಿಸಿದೆ.
ಕಡೂರು ತಾಲ್ಲೂಕಿನ ಪಂಚನಹಳ್ಳಿ ಸಮೀಪದ ಚೌಡಿಪಾಳ್ಯದ ಚನ್ನಬಸವಯ್ಯ(38) ಎಂಬಾತ ಮೃತಪಟ್ಟ ವ್ಯಕ್ತಿ. ಇವರು ಕುಟುಂಬ ಸಮೇತ ಹಬ್ಬಕ್ಕೆಂದು ಬೆಂಗಳೂರಿನಿಂದ ಪ್ರಕಾಶ ಬಸ್ ನಲ್ಲಿ ಊರಿಗೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಬೇವಿನ ಮರಕ್ಕೆ ಅಪ್ಪಳಿಸಿದ್ದರ ಪರಿಣಾಮ ತೀವ್ರ ಗಾಯಗೊಂಡ ಈತನನ್ನು ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾನೆ. ಮುಂಭಾಗದ ಸೀಟ್ ನಲ್ಲಿ ಈತನ ಜೊತೆಯಲ್ಲಿ ಕುಳಿತಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಕೂಡ ತೀವ್ರಗಾಯಗಳಾಗಿದ್ದು , ಮತ್ತೊಬ್ಬ ವ್ಯಕ್ತಿಯ ಕೈ ಮುರಿದಿದೆ. ಖಾಸಗಿ ಬಸ್ ಬೆಂಗಳೂರಿನಿಂದ-ಹುಳಿಯಾರು ಮಾರ್ಗವಾಗಿ ಯಗಟಿಗೆ ಹೋಗುತಿದ್ದ ವೇಳೆ ಹುಳಿಯಾರಿನ ವಿದ್ಯಾವಾರಿಧಿ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ. ಅಪ್ಪಳಿಸಿದ ರಭಸಕ್ಕೆ ಬಸ್ ನ ಮುಂಭಾಗದ ಎಡಭಾಗ ನಜ್ಜುಗುಜ್ಜಾಗಿದ್ದು ,ಮುಂಭಾಗದಲ್ಲಿದ್ದವರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಹುಳಿಯಾರು ಠಾಣೆಯ ಪಿಎಸೈ ಘೋರ್ಪಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ