ಹುಳಿಯಾರು ಹೋಬಳಿಯ ವಿವಿಧೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ಕೃಷ್ಣಜನ್ಮಾಷ್ಟಮಿಗೆ ಚಾಲನೆ ನೀಡಿ ಮಾತನಾಡಿ ಇಂದು ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮ ಪುರುಷ ಶ್ರೀಕೃಷ್ಣ ಹುಟ್ಟಿದ ದಿನವಾಗಿದ್ದು ಇದು ಎಲ್ಲರಿಗೂ ಪರಮ ಪವಿತ್ರ ದಿನ ಎಂದರು. ಪಿಡಿಓ ಅಡವೀಶ್ ಕುಮಾರ್ ಮಾತನಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಇದೇ ಪ್ರಥಮ ಬಾರಿಗೆ ಸರ್ಕಾರಿ ಹಬ್ಬವಾಗಿ ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು. ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ಧನುಷ್ ರಂಗನಾಥ್, ಪಟಾಕಿ ಶಿವಣ್ಣ ರಾಘವೇಂದ್ರ ಸೇರಿದಂತೆ ಸಿಬ್ಬಂದಿವರ್ಗದವರು ಹಾಜರಿದ್ದರು.
|
ಹುಳಿಯಾರು ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. |
|
ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರದ ವೇಣುಗೋಪಾಲ ದೇವಾಲಯದಲ್ಲಿ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನನ್ನು ಅಲಂಕರಿಸಿರುವುದು. |
ಜೋಡಿ ತಿರುಮಲಾಪುರದ ವೇಣುಗೋಪಾಲ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಕೃಷ್ಣಶಾಸ್ತ್ರಿ , ಅರ್ಚಕ ಶ್ರೀಕಂಠ ನೇತೃತ್ವದಲ್ಲಿ ಮಹಾನ್ಯಾಸ ಪೂರಕ ರುದ್ರಾಭಿಷೇಕ , ಏಕಾವರ ರುದ್ರಾಭಿಷೇಕ,ಪಂಚಾಮೃತಾಭಿಷೇಕ, ಶೋಡಶೋಪಚಾರ ಪೂಜೆ ,ಅಷ್ಟೋತ್ತರ ಪೂಜೆ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ವಿ.ಟಿ.ಶ್ರೀನಿವಾಸಯ್ಯ, ಸುಬ್ಬಕೃಷ್ಣ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ