ತನ್ನ ಅಸಮರ್ಪಕ ಸೇವೆಯಿಂದ ಕಳೆದೆರಡು ತಿಂಗಳಿದ ಮೊಬೈಲ್ ಸಂಪರ್ಕ ಸೇವೆ ಕಡಿತಗೊಳಿಸಿದ ಎಂಟಿಎಸ್ ಕಂಪನಿಯ ವಿರುದ್ದ ಆಕ್ರೋಶಗೊಂಡ ಗ್ರಾಹಕರು ಸಿಬ್ಬಂದಿಯನ್ನು ಕೂಡಿಹಾಕಿ ಆಕ್ರೋಶವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಹುಳಿಯಾರು ಪಟ್ಟಣದ ಕರವೇ ಕಾರ್ಯಕರ್ತರು ಎಂಟಿಎಸ್ ಸಿಬ್ಬಂದಿಯನ್ನು ಮಂಗಳವಾರ ಕೂಡಿಹಾಕಿ ಟವರ್ ಎದುರು ಪ್ರತಿಭಟಿಸಿದರು |
ಪಟ್ಟಣದಲ್ಲಿ ಕಳೆದ ಆರೇಳು ವರ್ಷಗಳಿಂದ ಸೇವೆ ನೀಡುತ್ತಿರುವ ಎಂಟಿಎಸ್ ವ್ಯಾಪ್ತಿಯಲ್ಲಿ ಸಹಸ್ರಾರು ಗ್ರಾಹಕರಿದ್ದಾರೆ. ಆದರೆ ಕಳೆದೆರಡು ತಿಂಗಳಿಂದ ನೆಟ್ ವರ್ಕ್ ಸಮಸ್ಯೆ ಉಂಟಾಗಿದ್ದು ದಿನ ವಿಡಿ ಮೊಬೈಲ್ ಸಂಪರ್ಕ ಸಿಗದೆ ಗ್ರಾಹಕರು ಬೇಸತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿ ಬೇಜವಬ್ದಾರಿ ಉತ್ತರ ನೀಡುತ್ತಿದ್ದರೆ ಹೊರತು ಸಮಸ್ಯೆ ಬಗೆಹರಿಸಲು ಮುಂದಾಗಿರಲಿಲ್ಲ. ಕಳದ ಹದಿನೈದು ದಿನದಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡು ಗ್ರಾಹಕರು ಪರದಾಡುವಂತಾಗಿತ್ತು. ಕಂಪನಿಯ ವರ್ತನೆಯಿಂದ ಬೇಸತ್ತಿದ್ದ ಗ್ರಾಹಕರು ಟವರ್ ಬಳಿ ಆಗಮಿಸುವ ಸಿಬ್ಬಂದಿಯನ್ನು ಎದುರು ನೋಡುತ್ತಿದ್ದರು.
ಮಂಗಳವಾರ ಟವರ್ ನಿರ್ವಹಣೆಗೆ ಸಂಜಯ್ ಪಾಲ್ , ಸಂತೋಷ್ ಎಂಬ ಇಬ್ಬರು ಸಿಬ್ಬಂದಿ ಆಗಮಿಸಿದ್ದನ್ನು ಕಂಡ ಗ್ರಾಹಕರು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಗಳ ನೇತೃತ್ವದಲ್ಲಿ ಆಗಮಿಸಿದ್ದ ಸಿಬ್ಬಂದಿಯನ್ನು ಟವರ್ ಕಾಂಪೌಡ್ ನಲ್ಲಿ ಕೂಡಿ ಹಾಕಿ ನಂತರ ಠಾಣೆಗೆ ಕರೆದೊಯ್ದು ತಮ್ಮ ಅಹವಾಲು ಸಮೇತ ದೂರು ನೀಡಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಸಿಬ್ಬಂದಿಯನ್ನು ಆಚೆಗೆ ಬಿಡಕೂಡದೆಂದು ಒತ್ತಾಯಿಸಿದರು. ಸಮಸ್ಯೆ ಆಲಿಸಿದ ಪಿಎಸೈ ವೈ.ಘೋರ್ಪಡೆ ಎಂಟಿಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ರಿಲಯನ್ಸ್ ನೆಟ್ ವರ್ಕ್ ನೊಂದಿಗೆ ನಮ್ಮ ಕಂಪನಿ ಒಪ್ಪಂದ ಮಾಡಿಕೊಂಡಿದ್ದು ಇದೀಗ ರಿಲಿಯನ್ಸ್ ಸೇವೆ ಸ್ಥಗಿತಗೊಳಿಸಿರುವುದರಿಂದ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ. ಇನ್ನೊಂದು ತಿಂಗಳಲ್ಲಿ ನಮ್ಮದೆ ಟವರ್ ನಿರ್ಮಾಣ ಮಾಡುತ್ತಿದ್ದು ಅಲ್ಲಿಯವರೆಗೆ ಸೇವೆಯಲ್ಲಿ ಏರುಪೇರಾಗುವ ಸಂಭವವಿದ್ದು ಗ್ರಾಹಕರು ಸಹಕರಿಸಬೇಕೆಂದು ವಿನಂತಿಸಿಕೊಂಡರು.
ಗಾಹಕರ ಸೇವಾ ನ್ಯೂನ್ಯತೆ ಉಂಟುಮಾಡಿರುವ ಕಂಪನಿಯ ವರ್ತನೆಯ ವಿರುದ್ದ ಬೇಸರಿಸಿದ ಗ್ರಾಹಕರು ಸಮರ್ಪಕ ಸೇವೆ ನೀಡದಿದ್ದಲ್ಲಿ ಕಂಪನಿಯ ವಿರುದ್ದ ಬಾರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್, ಚನ್ನಬಸವಯ್ಯ,ರಘು,ಅಂಜನ್ ಕುಮಾರ್,ರಂಗಸ್ವಾಮಿ,ನವೀನ್,ಹರೀಶ್, ಬಡಗಿರಾಜು,ವಕೀಲ ಮೋಹನ್ ಮೂರ್ತಿ,ಬೇಕರಿಪ್ರಕಾಶ್, ಜಗದೀಶ್, ಬಸವರಾಜು ರಾಘವೇಂದ್ರ ಸೇರಿದಂತೆ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ