ಹುಳಿಯಾರು ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಯುಕೆಜಿ ಹಾಗೂ ಎಲ್.ಕೆ.ಜಿ ಮಕ್ಕಳಿಗಾಗಿ ಗುರುವಾರದಂದು ವೇಷಭೂಷಣ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.
ಹುಳಿಯಾರಿನ ವಾಸವಿ ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣನ ವೇಷ ತೊಟ್ಟ ಚಿಣ್ಣರು. |
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಮಾತನಾಡಿ , ಪ್ರತಿಯೊಂದು ಹಬ್ಬಕ್ಕು ಅದರದ್ದೇ ಆದ ಮಹತ್ವವಿದ್ದು ಅವುಗಳನ್ನು ಆಚರಿಸುವ ಮುಖಾಂತರ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂದರು. ಇಂತಹ ಆಚರಣೆಯಿಂದ ಮಕ್ಕಳಲ್ಲಿ ಆತ್ಮಸ್ಥರ್ಯ ವೃದ್ಧಿಸುತ್ತದೆ , ಎಲ್ಲಾ ಶಾಲೆಗಳಲ್ಲೂ ಇಂತಹ ಆಚರಣೆಗಳನ್ನು ನಡೆಸಬೇಕಿದೆ ಎಂದರು.
ಸ್ಪರ್ಧೆಯಲ್ಲಿ ಎಲ್.ಕೆ.ಜಿ ವಿಭಾಗದಲ್ಲಿ ಕೃಷ್ಣ ವೇಷದಲ್ಲಿ ನವ್ಯಶ್ರೀ ಪ್ರಥಮ, ಪೂಜಾಲಕ್ಷ್ಮಿ ದ್ವಿತೀಯ , ರಾಧೆ ವೇಷದಲ್ಲಿ ಖುಷಿ ಪ್ರಥಮ ,ಪ್ರಕೃತಿ ದ್ವಿತೀಯ ಸ್ಥಾನ ಪಡೆದರೆ,ಯುಕೆಜಿ ವಿಭಾಗದಲ್ಲಿ ಕೃಷ್ಣ ವೇಷದಲ್ಲಿ ನಾಗದರ್ಶನ ಪ್ರಥಮ, ಯಶವಂತ್ ದ್ವಿತೀಯ, ರಾಧೆ ವೇಷದಲ್ಲಿ ವರ್ಷಿಣಿ ಪ್ರಥಮ, ಇಂದುಶ್ರೀ ದ್ವಿತೀಯ ಸ್ಥಾನಪಡೆದಿದ್ದಾರೆ. ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಎಂ.ಆರ್.ಗೋಪಾಲ್ ಮಾತನಾಡಿದರು. ನಾಗಲಕ್ಷ್ಮಿ,ಶೈಲಜಾ ರಮೇಶ್ ತೀರ್ಪುಗಾರರಾಗಿದ್ದು, ಮುಖ್ಯ ಶಿಕ್ಷಕರಾದ ರಮೇಶ್,ಮಹೇಶ್ ಉಪಸ್ಥಿತರಿದ್ದು, ಶಿಕ್ಷಕಿ ಸುಧಾ ನಿರೂಪಿಸಿ, ವಂದಿಸಿದರು. ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಕೃಷ್ಣ, ರಾಧೆ ಹಾಗೂ ರುಕ್ಷ್ಮಿಣಿಯರ ವಿವಿಧ ವೇಷ ತೊಟ್ಟು ಸ್ಪರ್ಧಿಸಿದ್ದರು, ಸ್ಪರ್ಧಿಸಿದ್ದವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ