ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯ ಗಣೇಶ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ. |
ಹೋಬಳಿ ಕೆಂಕೆರೆ ತೇರುಬೀದಿಯ ಗಣೇಶ ದೇವಾಲಯದಲ್ಲಿ ಶ್ರೀಸರ್ವಸಿದ್ದಿವಿನಾಯಕ ಭಕ್ತಮಂಡಳಿ ಹಾಗೂ ಟ್ರಸ್ಟ್ ವತಿಯಿಂದ 36 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭವ್ಯವಾದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. .
ಗಣೇಶ ಚತುರ್ಥಿಯ ಬೆಳಿಗ್ಗೆ ಮೂಲ ವಿಗ್ರಹಕ್ಕೆ ಅಭಿಷೇಕ, ಅರ್ಚನೆ ನಡೆಸಿ ನಂತರ ಗಣಪತಿ ಮೂರ್ತಿಗೆ ಪುಣ್ಯಾಹ ಮಾಡಿ ಮುದ್ದುಮಲ್ಲೇಗೌಡರ ಶಿವಣ್ಣ,ಪುಟ್ಟಯ್ಯ,ಕರಿಸಿದ್ದಪ್ಪನವರ ಸೇವಾರ್ಥದಲ್ಲಿ ಪ್ರತಿಷ್ಠಾಪಿಸಿ ಬಿಲ್ವಾರ್ಚನೆ, ಸಹಸ್ರನಾಮಾರ್ಚನೆ ಮಾಡಲಾಯಿತು. ಇದೇ ದಿನ ಸಂಜೆ ಸದಾಶಿವಣ್ಣ ಹಾಗೂ ಶಿಕ್ಷಕ ಕೆ.ವಿ.ರಮೇಶ್ ಅವರಿಂದ ಪುರಾಣ ಪಠಣದ ನಂತರ ಮಹಾಮಂಗಳಾರತಿ ನಡೆದು ಪನಿವಾರ ವಿತರಿಸಲಾಯಿತು.ಈ ಸಂಧರ್ಭದಲ್ಲಿ ದೇವಾಲಯ ಸಮಿತಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ