ಸ್ವತಂತ್ರ ಬಂದು 67 ವರ್ಷ ಕಳೆದರೂ ದಲಿತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಅನುಷ್ಟಾನಗೊಳ್ಳದೆ ಅರ್ಹರಿಗೆ ದೊರೆಯದ ಕಾರಣ ದಲಿತ ಸಹಾಯವಾಣೆ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ ಇದೇ 14ರ ರಾತ್ರಿ ಅರೆಬೆತ್ತಲೆ ಮತ್ತು ಪಂಜಿನ ಮೆರವಣಿಗೆ ನಡೆಯಲಿದೆ.
ಇದುವರೆಗೂ ಸಹ ದಲಿತರ ಬದುಕು ಹಸನಾಗಿಲ್ಲ,ಅಲೆಮಾರಿ ಸಮುದಾಯಗಳಿಗೆ ನೆಲೆಸಿಕ್ಕಿಲ್ಲ,ದಲಿತ ವಿದ್ಯಾವಂತರು ಪದವಿ ಪಡೆದು ಉದ್ಯೋಗವಿಲ್ಲದೆ ಪಡುತ್ತಿರುವ ಯಾತನೆ ನಿಜಕ್ಕೂ ಸ್ವಾತಂತ್ರ್ಯದ ಬದುಕಿಗೆ ಹಿಡಿದ ಕನ್ನಡಿಯಾಗಿದೆ.ಅಂಬೇಡ್ಕರ್ ನಿಗಮದ ಗಂಗಾಕಲ್ಯಾಣ ಯೋಜನೆ ,ಸಾಲಯೋಜನೆಗಳು ಅರ್ಹ ಫಲಾನುಭವಿಗಳಿಗೆ ದಕ್ಕದೆ ಅನ್ಯರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಣ್ಣು ತೆರೆಸುವ ಅಗತ್ಯವಿದ್ದು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸಿ 14ರ ಮಧ್ಯರಾತ್ರಿ 12 ಗಂಟೆಗೆ ಅರೆಬೆತ್ತಲೆ ಮತ್ತು ಪಂಜಿನ ಮೆರವಣಿಗೆ ನಡೆಸುವ ಮೂಲಕ ದಲಿತರ ಶೋಷಣೆಯ ಬದುಕನ್ನು ಅನಾವರಣ ಮಾಡಲಾಗುವುದು ಎಂದು ದಲಿತ ಸಹಾಯವಾಣಿ ತಾಲ್ಲೂಕ್ ಅಧ್ಯಕ್ಷ ಆರ್.ಹನುಮಂತಯ್ಯ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕ್ ಅಧ್ಯಕ್ಷ ರಾಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ