ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಉತ್ತಮ ಹದಮಳೆಯಾಗಿದೆ. ಕಳೆದ ಎರಡು ತಿಂಗಳಿಂದ ಮಳೆಯ ಅವಕೃಪೆಯಿಂದಾಗಿ ರೈತರು ಬಿತ್ತನೆಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.
ಹುಳಿಯಾರು ಹೋಬಳಿ ವ್ಯಾಪಿಯಲ್ಲಿ ಕಳೆದೆರಡು ದಿನದಿಂದ ಬಿದ್ದ ಮಳೆಯಿಂದಾಗಿ ಹೊಯ್ಸಳಕಟ್ಟೆ ಸಮೀಪ ರಸ್ತೆ ಬದಿಯಲ್ಲಿ ನೀರು ನಿಂತಿರುವುದು. |
ಕಳೆದೆರಡು ದಿನಗಳಿಂದ ಮಳೆ ಸಿಂಚನವಾಗುತ್ತಿದೆ ಆದರೆ ಈಗಾಗಲೇ ರಾಗಿ ಮತ್ತಿತರ ಧಾನ್ಯಗಳ ಬಿತ್ತನೆ ಸಮಯವಾಗಿದ್ದು , ಈಗಾಗಲೇ ಸೋನೆ ಮಳೆಗೆ ಬಿತ್ತನೆ ಮಾಡಿದ್ದ ರಾಗಿ ಮತ್ತಿತರ ಪೈರುಗಳಿಗೆ ಜೀವಬಂದಂತಾಗಿದೆ. ಬಿತ್ತನೆ ಮಾಡದೆ ಉಳಿದಿರುವ ರೈತರು ಈಗ ಬಂದಿರುವ ಮಳೆಗೆ ಬಿತ್ತನೆ ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕೆಲ ಅನುಭವದ ರೈತರ ಪ್ರಕಾರ ಉತ್ತರೆ ಮಳೆಯವರೆಗೂ ಸಹ ಬಿತ್ತನೆ ಮಾಡಬಹುದು. ಆದರೆ ಹಿಂಗಾರಿನಲ್ಲಿ ಮಳೆ ನಡೆಸಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಕಳೆದ ಎರಡು ತಿಂಗಳಿಂದ ಮಳೆಯಿಲ್ಲದೆ ಭೂಮಿಯ ಕಾವು ಹೆಚ್ಚಾಗಿದ್ದು, ಈಗ ಬಂದ ಮಳೆಗೆ ಭೂಮಿ ಸ್ವಲ್ಪಮಟ್ಟಿಗೆ ತಂಪಾಗಿದೆ.
ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು ಹೋಬಳಿಯ ಹೊಯ್ಸಳಕಟ್ಟೆ ಭಾಗದಲ್ಲಿ 67.6 ಮೀ.ಮೀ. ಹುಳಿಯಾರು ಭಾಗದಲ್ಲಿ 64.4 ಮೀ.ಮೀ , ಸಿಂಗದಹಳ್ಳಿ ಭಾಗದಲ್ಲಿ 12.6 ಮೀಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮಳೆಯಿಂದ ರಸ್ತೆ ಪಕ್ಕದ ಗುಂಡಿಗೊಟರು ಸೇರಿದಂತೆ ಹೊಲ, ತೋಟ,ಗದ್ದೆಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡು ಬರುತ್ತಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ