ಹೋಬಳಿ ಸ್ವಾತಂತ್ಯ್ರ ಹೋರಾಟಗಾರರ ಸಂಘದವತಿಯಿಂದ ಆ.14ರ ಗುರುವಾರ ಮಧ್ಯರಾತ್ರಿ ಪಟ್ಟಣದ ಗಾಂಧಿಭವನದ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಿಎಸೈ ಘೋರ್ಪಡೆ ಧ್ವಜಾರೋಹಣ ನೆರವೇರಿಸಲಿದ್ದು, ಹಿರಿಯ ಸ್ವಾತಂತ್ಯ್ರ ಹೋರಾಟಗಾರರಾದ ಜಿ.ಎಸ್.ವೆಂಕಟಾಚಲಪತಿಶೆಟ್ಟರು ಅಧ್ಯಕ್ಷತೆವಹಿಸಲಿದ್ದು, ಕುಪ್ಪೂರು ಗದ್ದಿಗೆ ಮಠದ ಡಾ|| ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ,ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹಸಿರುಸೇನೆ ರಾಜ್ಯಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್, ಜಿಲ್ಲಾ ಕಾರ್ಯದಶರ್ಿ ಶಂಕರಣ್ಣ, ಮುಖಂಡರಾದ ನಂದಿಹಳ್ಳಿ ಶಿವಣ್ಣ ಸೇರಿದಂತೆ ಇತರರು ಆಗಮಿಸಲಿದ್ದು, ಹೋಬಳಿಯ ಎಲ್ಲಾ ಸಂಘ ಸಂಸ್ಥೆಯವರು, ಗ್ರಾ.ಪಂ.ಯವರು, ನಾಗರೀಕರು ಕಾರ್ಯಕ್ರಮದಲ್ಲಿ ಪಾಳ್ಗೊಳ್ಳುವಂತೆ ಸ್ವಾತಂತ್ಯ್ರ ಹೋರಾಟಗಾರರ ಸಂಘದ ಅಧ್ಯಕ್ಷ ಜಿ.ಎಸ್.ವೆಂಕಟಾಚಲಪತಿಶೆಟ್ಟರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ