ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲೆಡೆ 68 ನೇ ಸ್ವಾತಂತ್ರ್ಯೋತ್ಸವದ ಆಚರಣೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಎಂಪಿಎಸ್ ಶಾಲಾ ಆವರಣದಲ್ಲಿ ಗ್ರಾ.ಪಂ.ವತಿಯಿಂದ ಸಾರ್ವತ್ರಿಕವಾಗಿ ಆಯೋಜಿಸಿದ್ದ ಸ್ವಾತಂತ್ಯ್ರೋತ್ಸವದಲ್ಲಿ ಉಪತಹಶೀಲ್ದಾರ್ ಸತ್ಯನಾರಾಯಣ್ ಧ್ವಜಾರೋಹಣ ನೆರವೇರಿಸಿದರು.
ಹುಳಿಯಾರು ಗ್ರಾ.ಪಂ.ವತಿಯಿಂದ ಎಂಪಿಎಸ್ ಶಾಲಾವರಣಾದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಉಪತಹಶೀಲ್ದಾರ್ ಸತ್ಯನಾರಯಣ್ ಧ್ವಜಾರೋಹಣ ನೆರವೇರಿಸಿದರು. |
ನಂತರ ಮಾತನಾಡಿದ ಅವರು ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳೂವ ಅಗತ್ಯವಿದ್ದು ಇದಕ್ಕಾಗಿ ಯುವಶಕ್ತಿಯ ಭಾಗವಹಿಸುವಿಕೆ ಅಗತ್ಯ ಬೇಕಾಗಿದೆ ಎಂದರು.
ನಮ್ಮದೇಶಕ್ಕೆ ಸ್ವಾತಂತ್ಯ್ರ ಬಂದು ವರ್ಷಗಳು ಉರುಳುತ್ತಿವೇ ಹೊರತು ಇಂದಿಗೂ ಆ ಸ್ವಾತಂತ್ರ್ಯ ಜನಸಾಮಾನ್ಯರಿಗೆ ಸಿಕ್ಕಿಲ್ಲ , ನಮ್ಮ ನಂತರ ಸ್ವಾತಂತ್ರ್ಯ ಪಡೆದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಇನ್ನೂ ಹೆಚ್ಚು ಅಭಿವೃದ್ದಿಯಾಗಬೇಕಿದೆ ಎಂದರು. ಪಟ್ಟಣದ ಎಲ್ಲಾ ಶಾಲಾಮಕ್ಕಳು ಒಂದೆಡೆ ಸೇರಿ ಈರೀತಿಯ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಇದು ನಿರಂತರವಾಗಿರಲ್ಲಿ ಎಂದು ಅಶಿಸಿದರು.
ಧ್ವಜವಂದನೆ ಸ್ವೀಕರಿಸಿದ ಪಿಎಸೈ ಘೋರ್ಪಡೆ ಮಾತನಾಡಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಾತಿತಾರತಮ್ಯ , ಭ್ರಷ್ಟಾಚಾರ ಸೇರಿದಂತೆ ದೇಶಕ್ಕೆ ಮಾರಕವಾದ ಅನೇಕ ಚಟುವಟಿಕೆಗಳು ಮಿತಿ ಮೀರಿದ್ದು ಅವುಗಳನ್ನು ತೊಡೆದುಹಾಕುವಲ್ಲಿ ಯುವಜನಾಂಗ ಮುಂದಾಗಬೇಕೆಂದರು. ದೇಶದಲ್ಲಿರುವ ಎಲ್ಲಾ ಧರ್ಮದವರಲ್ಲಿ ನಾವೆಲ್ಲಾ ಭಾರತೀಯರು ಎಂಬ ವಿಶಾಲ ಮನೋಭಾವ ಮೂಡಬೇಕು ಹಾಗೂ ಸದಾಕಾಲ ದೇಶಸೇವೆಗೆ ಮುಂದಾಗಿರಬೇಕು ಎಂದರು.
ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಸಮವಸ್ತ್ರದಲ್ಲಿ ಪಥಸಂಚಲ ನಡೆಸಿ ಧ್ವಜವಂದನೆ ಸಲ್ಲಿಸಿದರಲ್ಲದೆ ದೇಶಭಕ್ತಿಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಶಾಲಾಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ ಹಿರಿಯ ಸ್ವಾತಂತ್ಯ್ರ ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸಿದ್ದು, ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿ ಶೆಟ್ರು, ಉಪಾಧ್ಯಕ್ಷೆ ಅಬೀದುನ್ನಿಸಾ, ತಾ.ಪಂ.ಅಧ್ಯಕ್ಷೆ ಲತಾ, ಜಿ.ಪಂ. ಸದಸ್ಯೆ ಮಂಜುಳಾ,ತಾ.ಪಂ.ಸದಸ್ಯೆ ಬೀಬೀಫಾತೀಮ, ಪಿಡಿಓ ಅಡವೀಶ್ ಕುಮಾರ್, ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು, ರಂಗನಾಥ್, ಭೈರೇಶ್, ಅನ್ಸರ್ ಅಲಿ,ರಾಘವೇಂದ್ರ ,ಪುಟ್ಟರಾಜು, ಪುಟ್ಟಿಬಾಯಿ,ಗೀತಾ,ವೆಂಕಟಮ್ಮ,ದ್ರಾಕ್ಷಾಯಣಿಮ್ಮ ಸೇರಿದಂತೆ ಗ್ರಾ.ಪಂ.ಎಲ್ಲಾ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಯವರು ,ಶಾಲೆಗಳ ದೈಹಿಕ ಶಿಕ್ಷಕರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ