ಹುಳಿಯಾರು ಹೋಬಳಿ ಛಾಯಾಚಿತ್ರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು , ಅಧ್ಯಕ್ಷರಾಗಿ ರಾಜೇಶ್ವರಿ ಸ್ಟುಡಿಯೋದ ಗಂಗಾಧರ್, ಗೌರವಾಧ್ಯಕ್ಷರಾಗಿ ಅಂಬಿಕಾ ಸ್ಟುಡಿಯೋದ ತಾಂಡವಾಚಾರ್, ಉಪಾಧ್ಯಕ್ಷರಾಗಿ ಭೈರವೇಶ್ವರ ಸ್ಟುಡಿಯೋದ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಅಂಬಿಕಾ ಸ್ಟುಡಿಯೋದ ಸುದರ್ಶನಾಚಾರ್ , ಖಜಾಂಜಿಯಾಗಿ ಎಸ್.ಬಿ.ಸ್ಟುಡಿಯೋದ ದುರ್ಗರಾಜ್ ಆಯ್ಕೆಯಾಗಿದ್ದಾರೆ.
ಹುಳಿಯಾರಿನ ಛಾಯಾಗ್ರಾಹಕರ ಸಂಘದವತಿಯಿಂದ ವಿಶ್ವಛಾಯಾಗ್ರಾಹಕ ದಿನದ ಅಂಗವಾಗಿ ಲಿಂಗಪ್ಪನ ಪಾಳ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. |
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರ್ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕವಿತರಿಸುವ ಮೂಲಕ ವಿಶ್ವಛಾಯಾಗ್ರಾಹಕದರ ದಿನವನ್ನು ಬುಧವಾರದಂದು ಆಚರಿಸಲಾಯಿತು. ಹೋಬಳಿಯ ಲಿಂಗಪ್ಪನ ಪಾಳ್ಯ ಹಾಗೂ ವಳಗೆರೆಹಳ್ಳಿಯ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಬುಕ್ ,ಪೆನ್ನು,ವಿತರಿಸಿದರು.ಈ ಸಂದರ್ಭದಲ್ಲಿ ರಘು,ರವಿ,ಮೋಹನ್,ಕೆಂಕೆರೆ ಮಂಜುನಾಥ,ಶಿವು,ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ