ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ 64 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವಿಶೇಷ ನಂದಿರೂಢ ಬಾಲಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ಮುಂದಿನ ಒಟ್ಟು 27 ದಿನವಸಗಳ ಕಾಲ ಸ್ವಾಮಿಯವರಿಗೆ ನಿತ್ಯ ವಿಶೇಷ ಪೂಜೆ,ಅಭಿಷೇಕ,ಅರ್ಚನೆ ನಡೆಯಲಿದ್ದು, ಸುಗಮ ಸಂಗೀತ,ಹರಿಕಥೆ, ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಸಹ ಅಯೋಜಿಸಲಾಗಿದೆ. ಸೆ.11ರಂದು ತುಮಕೂರಿನ ಆಶಾ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ, ಸೆ.18 ರಂದು ಅರಸೀಕೆರೆ ಶೋಭಾರಾಣಿ ತಂಡದವರಿಂದ ಡ್ಯಾನ್ಸ್ ಡ್ಯಾನ್ಸ್ , ಸೆ.24 ರಂದು ಹೋಮ,ಸೆ.25 ರಂದು ಗಣಪತಿಯ ರಾಜಬೀದಿ ಉತ್ಸವ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದೆ. ಸೆ.26 ರಂದು ಸ್ವಾಮಿಯ ಗಂಗಾಪ್ರವೇಶ ಕಾರ್ಯ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ಸೆ.11 ರಂದು ಹೋಬಳಿಯ ಛಾಯಾಚಿತ್ರಗ್ರಾಹಕ ಸಂಘದಿಂದ ಒಂದರಿಂದ ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ.
ಹುಳಿಯಾರಿನ ಪ್ರಸನ್ನಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ