ಡಿ.ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಸಮುದಾಯದವರ ಅಭಿವೃಧ್ದಿಗಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಹಿಂದುಳಿದ , ದೀನದಲಿತ ವರ್ಗಗಳನ್ನು ಸಮಾಜಮುಖಿಗೆ ಬರುವಂತೆ ಮಾಡಿದ ಮಹಾನ್ ವ್ಯಕ್ತಿ ಎಂದು ಡಿ.ದೇವರಾಜ್ ಅರಸ್ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ ತಿಳಿಸಿದರು.
ಹುಳಿಯಾರಿನ ಡಿ.ದೇವರಾಜ ಅರಸು ಪತ್ತಿನ ಸಹಕಾರಸಂಘದಲ್ಲಿ ಗುರುವಾರದಂದು ಡಿ.ದೇವರಾಜ ಅರಸ್ ಅವರ 99ನೇ ಜನ್ಮ ದಿನಾಚರಣೆ ಆಚರಿಸಲಾಯಿತು. |
ಪಟ್ಟಣದ ಡಿ.ದೇವರಾಜ ಅರಸು ಪತ್ತಿನ ಸಹಕಾರಸಂಘದಲ್ಲಿ ಗುರುವಾರದಂದು ಡಿ.ದೇವರಾಜ ಅರಸ್ ಅವರ 99ನೇ ಜನ್ಮ ದಿನೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಅವರು ಮಾತನಾಡಿದರು.ಅರಸುರವರು ಬಡವರ ಏಳ್ಗೆಯನ್ನೇ ಮುಖ್ಯವಾಗಿಸಿಕೊಂಡಿದ್ದ ಹಾಗೂ ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಾಗಿದವರಾಗಿದ್ದಾರೆ ಎಂದರು.
ಅರಸುರವರ ಪರಿಕಲ್ಪನೆಯಡಿ ಹಿಂದುಳಿದ ವರ್ಗದವರಿಗೆ ಬಡವರಿಗೆ, ದೀನದಲಿತರಿಗೆ , ಬ್ಯಾಂಕ್ ಮೆಟ್ಟಿಲು ಹತ್ತದವರಿಗೆ ಸಹಕಾರ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ದೇವರಾಜ ಅರಸು ಪತ್ತಿನ ಸಹಕಾರಸಂಘ ಸ್ಥಾಪಿಸಲಾಗಿದ್ದು , ಎರಡು ವರ್ಷಗಳಿಂದ 35 ಲಕ್ಷ ರೂ ವಹಿವಾಟು ನಡೆಸಲಾಗಿದೆ ಹಾಗೂ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.
ಗ್ರಾ.ಪಂ.ಸದಸ್ಯ ಗಂಗಣ್ಣ ಮಾತನಾಡಿ , ಸರಳ,ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅರಸು ಅವರು ಹುಳಿಯಾರಿನಲ್ಲಿ ಆಗಮಿಸಿದಾಗಿನ ಘಟನೆಯನ್ನು ನೆನಪಿಸಿಕೊಂಡರು. ಗ್ರಾಮದ ಸಮಸ್ಯೆಗಳ ಬಗ್ಗೆ ಸ್ಥಳಕ್ಕಾಗಮಿಸಿ ಖುದ್ದಾಗಿ ಅಲಿಸಿದ ಮೊದಲನ ಮುಖ್ಯಮಂತ್ರಿ ದೇವರಾಜು ಅರಸು ಎಂದು ಕೊಂಡಾಡಿದರು.ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ಅನುಕೂಲವಾಗುವಂತ ಕಾರ್ಯಗಳನ್ನು ಮಾಡಿದ್ದಾರೆ. ಪ್ರಸ್ತುತದಲ್ಲಿ ಸಿಎಂ ಬರುತ್ತಾರೆಂದರೆ ಅವರಿಗೆ ಎಸಿಕಾರು ಅಲ್ಲದೆ ರಕ್ಷಣೆಗೆ ನೂರಾರು ಮಂದಿ ರಕ್ಷಣಾ ಸಿಬ್ಬಂದಿಯವರು ಅವರ ಹಿಂದೆಮುಂದೆ ಇರಬೇಕು ಎನ್ನುವಂತಾಗಿದೆ. ಆದರೆ ಅರಸು ಅವರು ಇಂತಹ ಯಾವುದೇ ಆಡಂಬರದಲ್ಲಿ ಅಧಿಕಾರ ನಡೆಸದೆ ನಾಡಿನ ಜನತೆಗೆ, ಅದರಲ್ಲೂ ಹಿಂದುಳಿದ ವರ್ಗಗಳ ಏಳ್ಗೆಗಾಗಿ ಶ್ರಮಿಸಿದವರಾಗಿದ್ದಾರೆ ಎಂದರು.
ಸಂಘದ ಉಪಾಧ್ಯಕ್ಷ ಟಿ.ಜಿ.ಜಗದೀಶ್,ನಿರ್ದೇಶಕರಾದ ಮಲ್ಲೇಶ್, ಸಣ್ಣರಂಗಯ್ಯ, ಮಂಜುನಾಥ್, ಮುಕುಂದಯ್ಯ, ಅಂಜಮ್ಮ ,ರಾಮು ಹಾಗೂ ಸಿಬ್ಬಂದಿವರ್ಗದ ಕೃಷ್ಣಮೂರ್ತಿ,ದಿವ್ಯಶ್ರೀ,ದಿವಾಕರ್, ರಘುನಾಥ್, ಯೋಗಿಶ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ