ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ತೇರು ಬೀದಿಯಲ್ಲಿನ ಗಣೇಶ ದೇವಾಲಯದ ಮುಂಭಾಗದ ಅಶ್ವಥಕಟ್ಟೆಯ ಮರಕ್ಕೆ ವಿದ್ಯುತ್ ತಂತಿ ತಾಕುತಿದ್ದರೂ ಸ್ಥಳೀಯ ಲೈನ್ ಮೆನ್ನಾಗಲಿ , ಬೆಸ್ಕಾಂ ಇಲಾಖೆಯವರಾಗಲಿ ಇತ್ತ ಗಮನಹರಿಸಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯಲ್ಲಿನ ಅಶ್ವತ್ಥಕಟ್ಟೆ ಮರಕ್ಕೆ ತಾಗುವಂತಿರುವ ವಿದ್ಯುತ್ ವೈರ್. |
ಕೆಂಕೆರೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟಿ.ಸಿ.ಗೆ ಹುಳಿಯಾರಿನಿಂದ ಎಳೆದಿರುವ 11 ಕೆ ಬಿ ಲೈನ್ ಈ ಅಶ್ವತ್ಥಕಟ್ಟೆಯ ಮರಕ್ಕೆ ತಾಗುವಂತಿದೆ ಸ್ವಲ್ಪ ಗಾಳಿ ಬೀಸಿದರೆ ಸಾಕು ವೈರ್ ಮರಕ್ಕೆ ತಾಕುತ್ತಿದೆ. ಈ ಮರದ ನೆರಳಲ್ಲಿ ನಿತ್ಯ ಮಕ್ಕಳು ಆಟವಾಡುವುದಲ್ಲದೆ, ದನಕರುಗಳನ್ನು ಕಟ್ಟುತ್ತಾರೆ ಜನರು ಸಹ ಬಂದು ಕೂರುತ್ತಾರೆ. ಅಲ್ಲದೆ ಮಹಿಳೆಯರು ನಿತ್ಯ ಈ ಅಶ್ವತ್ಥಕಟ್ಟೆಯ ಪೂಜೆಗೆ ಬರುತ್ತಾರೆ . ವಿದ್ಯುತ್ ತಂತಿ ಮರಕ್ಕೆ ತಾಗಿ ಕರೆಂಟ್ ಶಾರ್ಟ್ ಸರ್ಕ್ಯೂಟ್ ಉಂಟಾದರೆ ಹೆಚ್ಚು ಅಪಘಾತ ಸಂಭವಿಸುತ್ತದೆ. ಈ ಬಗ್ಗೆ ಇಲ್ಲಿನ ಲೈನ್ ಮ್ಯಾನ್ ಹಾಗು ಗ್ರಾ.ಪಂ.ನವರಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಇತ್ತ ಗಮಕೊಟ್ಟಿಲ್ಲ ,ಬೆಸ್ಕಾಂನವರು ಶೀಘ್ರವೇ ಇಲ್ಲಿ ಹಾದುಹೋಗಿರುವ ಲೈನನ್ನು ಬೇರೆಕಡೆಗೆ ಸ್ಥಳಾಂತರಿಸಿ ಆಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಸ್ಥಳೀಯ ಮಹೇಶ್ ಕೋರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ