ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣಪತಿಯ ಪ್ರತಿಷ್ಠಾಪನೆ ವಿಧ್ಯುಕ್ತವಾಗಿ ನಡೆಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದರೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಗಣೇಶನನ್ನು ಸ್ಥಾಪಿಸುವ ಸಂಭ್ರಮ ಮೇರೆ ಮೀರಿತ್ತು. ಪೆಂಡಾಲ್ ಹಾಕಿ, ಧ್ವನಿ ವರ್ಧಕ ವ್ಯವಸ್ಥೆ ಮಾಡಿ ದೊಡ್ಡಗಣಪತಿ ಮೂರ್ತಿಗಳನ್ನು ಕೂರಿಸಿ ಹರಿಕಥೆ,ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ಹುಳಿಯಾರಿನ ಮನೆಯೊಂದರಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿರುವುದು. |
ಮನೆಗಳಲ್ಲೂ ಸಹ ಗಣಪತಿ ಪ್ರತಿಷ್ಠಾಪಿಸಿ ಮೊದಕ,ಕರಿಗಡುಬಿನ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಕನಿಷ್ಠ 21 ಗಣಪನನ್ನು ನೋಡಿದರೆ ವಿಘ್ನ ನಿವಾರಣೆಯಾಗುವುದೆಂಬ ವಾಡಿಕೆ ಹಿನ್ನಲೆಯಲ್ಲಿ ಸಂಜೆ ಮಕ್ಕಳುಗಳು ಹಾಗೂ ಮಹಿಳೆಯರು ಮನೆಮನೆಗೆ ತೆರಳಿ ಸಿದ್ದವಿನಾಯಕನ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಗಣೇಶನ ಪೂಜೆಯ ನಂತರ ಹಿಂದಿನಿಂದ ನಡೆಸಿಕೊಂಡು ಬಂದಂತೆ ಕುಟುಂಬದವರೆಲ್ಲಾ ಒಟ್ಟಾಗಿ ಸೇರಿ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಪೂಜೆ ಸಲ್ಲಿಸಿ ಹಾಲನ್ನೆರೆಯುವ ಮೂಲಕ ಹಬ್ಬದ ಆಚರಣೆ ನಡೆಸಿದರು.
ಹೆಚ್ಚಿನ ಜನ ಸಂಜೆ ಪೂಜೆ ನಂತರ ತಿರುಮಲಾಪುರ,ದೊಡ್ಡಬಿದರೆ ಸೇರಿದಂತೆ ಇತರ ಕೆರೆ-ಕಟ್ಟೆಗಳಿಗೆ ತೆರಳಿ ಗಣಪತಿ ವಿಸರ್ಜಿಸಿದರು. ಕಳೆದ ವಾರ ಉತ್ತಮ ಮಳೆಯಾದ್ದರಿಂದ ಗಣಪತಿ ವಿಸರ್ಜನೆಗೆ ಸಮಸ್ಯೆ ಎದುರಾಗಲಿಲ್ಲ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ