ಹುಳಿಯಾರು ಪಟ್ಟಣದ ಟಿ.ಆರ್.ಎಸ್.ಆರ್ ಶಾಲೆವತಿಯಿಂದ ಆಯೋಜಿಸಿದ್ದ ಪ್ರೌಢಶಾಲಾ ವಿಭಾಗದ ಹೋಬಳಿಮಟ್ಟದ "ಬಿ" ವಿಭಾಗದ ಕ್ರೀಡಾಕೂಟದಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಪಟುಗಳು. |
ಬಾಲಕರ ವಿಭಾಗದ ಗುಂಪು ಆಟಗಳಲ್ಲಿ ವಾಲಿಬಾಲ್,ಕಬಡ್ಡಿಯಲ್ಲಿ ಪ್ರಥಮ, ಖೋಖೋ ,ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಪಡೆದರೆ ಬಾಲಕಿಯರು ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಅಥ್ಲೆಟಿಕ್ಸ್ ನ 3000ಮೀ ಓಟದಲ್ಲಿ ಮಿಲನ್ ಪ್ರಥಮ,ಯೋಗೀಶ್ ದ್ವಿತೀಯ, ಚಕ್ರಎಸೆತ ಹಾಗೂ ಜಾವಲಿನ್ ಎಸೆತದಲ್ಲಿ ಸುರೇಂದ್ರ ಪ್ರಥಮ, 1500ಮೀ ಓಟದಲ್ಲಿ ಚಂದನ ತೃತೀಯ,ಉದ್ದಜಿಗಿತದಲ್ಲಿ ಸಾಗರ್ ತೃತೀಯ,ಶಾಟ್ ಪುಟ್ ಎಸೆತದಲ್ಲಿ ಸುರೇಂದ್ರ ತೃತೀಯ, ಅಬ್ಬುತಾಯರ್ ತ್ರಿವಿಧ ಜಿಗಿತದಲ್ಲಿ ಪ್ರಥಮ ಹಾಗೂ ಎತ್ತರಜಿಗಿತದಲ್ಲಿ ದ್ವಿತೀಯ , ಮೇಘನ ಜಾವಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಶಾಲೆಗೆ ಸಮಗ್ರಪ್ರಶಸ್ತಿ ತಂದುಕೊಟ್ಟಿರುತ್ತಾರೆ. ದೈಹಿಕ ಶಿಕ್ಷಕ ಮನ್ಸೂರ್ ಅಹಮದ್ ,ಉಪಪ್ರಾಂಶುಪಾಲೆ ಇಂದಿರಾ, ಎಸ್ಡಿಎಂಸಿ ಉಪಾಧ್ಯಕ್ಷ ಮಹೇಶ್ ಹಾಗೂ ಶಾಲಾ ಸಿಬ್ಬಂದಿಯವರು ವಿಜೇತರಾದ ಮಕ್ಕಳನ್ನು ಅಭಿನಂದಿಸಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ