ವಿದ್ಯಾರ್ಥಿಯಾದವರು ಜೀವನದಲ್ಲಿ ಒಂದಲ್ಲ ಒಂದು ಗುರಿಯಿಟ್ಟುಕೊಂಡು ಮುನ್ನೆಡೆಯಬೇಕು ಹಾಗೂ ಆ ಗುರಿ ಸಾಧನೆಗೆ ಛಲವಿರಬೇಕು ಆಗಮಾತ್ರ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತುಮಕೂರಿನ ರಾಮೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಹುಳಿಯಾರು ಹೋಬಳಿ ದಬ್ಬಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ರಾಮೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಿದರು. |
ಹೋಬಳಿಯ ದಬ್ಬಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವರ ಜೀವನದಲ್ಲಿ ವಿದ್ಯಾರ್ಥಿ ಹಂತ ಪ್ರಮುಖವಾದದ್ದು ಈ ಹಂತದಲ್ಲಿ ನಾವು ಏನು ಕಲಿತೇವೆಯೋ ಅದರಿಂದ ನಮ್ಮ ಮುಂದಿನ ಜೀವನ ನಿರ್ಮಾನವಾಗುತ್ತದೆ ಆದಕ್ಕಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯವಾಗಿ ಗುರಿ ಹೊಂದಿ ಆ ಗುರಿ ಸಾಧನೆಯತ್ತ ಹೆಚ್ಚು ಗಮನ ಮಾಡಬೇಕಿದೆ ಎಂದರು. ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯವಿದ್ದು ಗುರುಗಳ ಬೋಧನೆ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಪಡೆಯುವುದರ ಜತೆಗೆ ಜೀವನದ ಮೌಲ್ಯಗಳನ್ನೂ ಸಹ ಕಲಿಯಬೇಕಿದೆ ಎಂದು ಕರೆ ನೀಡಿದರು. ಮುಖ್ಯಶಿಕ್ಷಕ ಎಂ.ಜಿ.ಕೆಂಚಪ್ಪ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಡಿ.ಬಿ.ರವಿಕುಮಾರ್,ಹೆಂಜಾರಪ್ಪ,ಇತರರು ಮಾತನಾಡಿದರು. ದಸೂಡಿ,ಬೆಳ್ಳಾರ,ದಬ್ಬಗುಂಟೆ ಶಾಲೆಗಳಾ ಮಕ್ಕಳು ಹಾಜರಿದ್ದರಲ್ಲದೆ, ದಾನಿಗಳಾದ ಪುಟ್ಟಯ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಶಿಕ್ಷಕ ದೇವರಾಜು ಸ್ವಾಗತಿಸಿ,ನಾಗೇಂದ್ರಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ