ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಪಟ್ಟಣದ ಅಂಗಡಿಗಳಲ್ಲಿ ತ್ರಿವರ್ಣ ಧ್ವಜ ,ಬ್ಯಾಂಡ್,ಟೋಪಿ ,ಟೇಪ್ ಗಳ ಮಾರಾಟ ಭರದಿಂದ ಸಾಗಿದೆ.ಒಂದೆಡೆ ಶಾಲಾಮಕ್ಕಳು ಅಂಗಡಿಗಳ ಮುಂದೆ ಇವುಗಳನ್ನು ಕೊಳ್ಳಲು ಮುಗಿಬಿದಿದ್ದರೆ ಆಟೋ ರಿಕ್ಷಾ ,ವ್ಯಾನ್ ಡ್ರೈವರ್ ಗಳು ಸಹ ವಾಹನಕ್ಕೆ ಕಟ್ಟಲು ಯಾರಿಗೇನೂ ಕಮ್ಮಿಯಿಲ್ಲದಂತೆ ಬಾವುಟಗಳ ಕೊಳ್ಳಲು ಮುಂದಾಗಿದ್ದಾರೆ.
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭಗಳಲ್ಲಿ ಬಾವುಟಗಳನ್ನು ವಾಹನಗಳಿಗೆ ಕಟ್ಟಿ , ಬಾವುಟ ಚಿತ್ರವಿರುವ ಬ್ಯಾಡ್ಜ್ ದಿರುಸುಗಳಲ್ಲಿ ಧರಿಸಿಕೊಂಡರೆ ಒಂದುರೀತಿಯ ದೇಶಭಕ್ತಿಯ ಭಾವನೆ ಮೂಡುವುದಿದ್ದು ಅದಕ್ಕಾಗೆ ಈ ದಿನಗಳಲ್ಲಿ ರಾಷ್ಟ್ರಧ್ವಜ ಸೇರಿದಂತೆ ವಂದೇ ಮಾತರಂ, ಮೇರಾ ಭಾರತ್ ಮಹಾನ್ ಮುಂತಾದ ರಾಷ್ಟ್ರ ಪ್ರೇಮ ಮೆರೆಯುವ ಬ್ಯಾಡ್ಜ್‌ಗಳ ಬೇಡಿಕೆ ಹೆಚ್ಚು.
ಹುಳಿಯಾರಿನ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಪ್ರದರ್ಶಿಸಿರುವ ತ್ರಿವರ್ಣ ಬಾವುಟ ಹಾಗೂ ಇನ್ನಿತರ ವಸ್ತುಗಳು . |
ಕಳೆದೆರಡು ವರ್ಷಗಳಿಂದ ಪ್ಲಾಸ್ಟಿಕ್ ಬಾವುಟ ಮಾರಾಟ ಮಾಡುವುದಕ್ಕೆ ನಿಷೇದ ಹೇರಿದ್ದರಿಂದ ಮಾರಾಟವನ್ನೆ ಸ್ಥಗಿತಗೊಳಿಸಿದ್ದಾಗಿ ಹೇಳುತ್ತಾರೆ ಉಮಾಸ್ಟೋರಿನ ಮಾಲಿಕ ಬದರೀಶ್.ಬಾವುಟ ಕೇಳಿ ಬರುವ ಮಕ್ಕಳೂ ಬಾವುಟ ದೊರೆಯದೆ ನಿರಾಶರಾಗಿ ಹೋಗುತ್ತಿದ್ದನ್ನು ಕಂಡು ಮನಸ್ಸು ಕರಗಿ ಮತ್ತೆ ಬಾವುಟ ಮಾರಾಟಕ್ಕೆ ತೊಡಗಿರುವುದಾಗಿ ಅವರು ಹೇಳುತ್ತಾರೆ.ಪ್ಲಾಸ್ಟಿಕ್ ಬಾವುಟಗಳನ್ನು ಮಕ್ಕಳು ಎಲ್ಲೆಂದರಲ್ಲಿ ಬಿಸಾಕಿ ಹೋಗುವದನ್ನು ಮನಗಂಡು ನಿಷೇದಿಸಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ. ಇದರಿಂದ ಮಕ್ಕಳ ಮನಸ್ಸು ಧ್ವಜಾರೋಹಣದ ನೆಮ್ಮದಿ ಕಾಣದೆ ಮುದುರುತ್ತದೆ.ವರ್ಷವಿಡಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುವಾಗ ಇದೊಂದು ದಿನ ಮಾತ್ರ ನಿಷೇಧಿಸುವುದರಿಂದ ಏನು ಪ್ರಯೋಜನ . ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭಗಳಲ್ಲಿ ಬಾವುಟ ಮಾರಾಟವಿದ್ದು ಉಳಿದಂತೆ ಜೋಪಾನಮಾಡಿಡುವುದೆ ದುಸ್ಥರದ ಕೆಲಸವಾಗುತ್ತದೆ ಎನುತ್ತಾರೆ .
ಬಾವುಟಗಳ ಮಾರಾಟ ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ನಡೆಯುವುದಿದ್ದು ಅದೂ ಕೂಡ ಹತ್ತದಿನೈದು ದಿನಗಳು ಮಾತ್ರ ದೊರೆಯುತ್ತದೆ. ಬಟ್ಟೆ ಬಾವುಟ ದುಬಾರಿಯಾಗಿದ್ದು . ಖಾದಿ ಸೇರಿದಂತೆ ಕಾಟನ್, ಪಾಲಿಸ್ಟರ್ ನ ಎಲ್ಲಾ ಅಳತೆಯ,ನಿಗದಿಪಡಿಸಿದ ಬಾವುಟಗಳು ದೊರೆಯುವುದಾದರೂ ಕಡಿಮೆ ಬೆಲೆಯ ಪ್ಲಾಸ್ಟಿಕ್ ಬಾವುಟಗಳಿಗೆ ಬೇಡಿಕೆ ಹೆಚ್ಚು ಆಟೋರಿಕ್ಷಾ,ಬಸ್,ಮ್ಯಾಕ್ಸಿ ಕ್ಯಾಬ್,ಸೈಕಲ್,ಬೈಕ್ ಗಳಿಗೆ ಬಟ್ಟೆ ಬಾವುಟಗಳ ಬೇಡಿಕೆ ಕಂಡು ಬಂದರೆ ಶಾಲಾಮಕ್ಕಳು ಮಾತ್ರ ಪ್ಲಾಸ್ಟಿಕ್ ಬಾವುಟಕ್ಕೆ ಮೊರೆಹೋಗಿದ್ದಾರೆ.
ನಿಷೇಧ:ಇಂತಹ ದಿನಗಳಂದು ಪ್ಲಾಸ್ಟಿಕ್ ಬಾವುಟಗಳ ಬಳಕೆಮಾಡಿ ನಂತರ ಎಲ್ಲೆಂದರಲ್ಲಿ ಎಸೆದು ಹೋಗುವ ಜನರ ಮನೋಭಾವದಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನಮಾಡಿದಂತಾಗುತ್ತೆದೆ ಎನ್ನುವ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಇವುಗಳನ್ನು ಉಪಯೋಗಿಸದಂತೆ ನಿಷೆಧ ಹೇರಲಾಗಿತ್ತಾದರೂ ಬಳಕೆ ಮಾತ್ರ ದಿನೇ ದಿನೆ ಹೆಚ್ಚುತ್ತಲೇ ಇದೆ .
ಇನ್ನೇನು ಸ್ವಾತಂತ್ರ್ಯ ದಿನಾಚರಣೆಗೆ ಎಣಿಕೆ ಪ್ರಾರಂಭವಾಗಿದ್ದು ಅಂಗಡಿಗಳವರು ಕೊನೆ ಕ್ಷಣದ ವ್ಯಾಪಾರದ ನೀರಿಕ್ಷೆಯಲ್ಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ