ಹುಳಿಯಾರು ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ 68ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ್ದ ಮೂರನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ರೇಸ್ ಶುಕ್ರವಾರ ಯಶಸ್ವಿಯಾಗಿ ಜರುಗಿತು.
ಹುಳಿಯಾರಿನ ಕರವೇವತಿಯಿಂದ ಆಯೋಜಿಸಿದ್ದ ಸೈಕಲ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದ ಚಿ.ನಾ.ಹಳ್ಳಿ ಭರತ್ ಗೆ ಬಹುಮಾನವಾಗಿ ಸೈಕಲ್ ವಿತರಿಸಲಾಯಿತು. |
ಹುಳಿಯಾರಿನ ಕರವೇವತಿಯಿಂದ ಆಯೋಜಿಸಿದ್ದ ಸೈಕಲ್ ರೇಸ್ ನಲ್ಲಿ ದ್ವಿತೀಯ ಸ್ಥಾನಗಳಿಸಿ ಆಕರ್ಷಕ ಟ್ರೋಪಿ ಪಡೆದ ಶ್ರೀನಿವಾಸನಾಯ್ಕ ಮತ್ತು ಎಂ.ನಾಗೇಶ್ . |
ಹುಳಿಯಾರು ಪೋಲಿಸ್ ಠಾಣೆಯ ಸರ್ಕಲ್ ನಿಂದ ಪ್ರಾರಂಭವಾದ ಸೈಕಲ್ ರೇಸ್ ಗೆ ಕಿರುತೆರೆ ಕಲಾವಿದ ರಂಗನಾಥ್ ಚಾಲನೆ ನೀಡಿದರು. ರೇಸ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು 20 ಕಿಮೀ ದೂರದ ಸಾಲ್ಕಟೆ ಕ್ರಾಸ್ ವರೆಗೆ ಹೋಗಿ ವಾಪಸ್ಸ್ ಪಟ್ಟಣದ ಕರವೇ ವೃತ್ತಕ್ಕೆ ಬರಬೇಕಾಗಿತ್ತು. ಒಟ್ಟು ಇಪ್ಪತ್ತು ಸ್ಪರ್ಧಿಗಳು ಸ್ಪರ್ಧಿಸಿದ್ದು 13 ಮಂದಿ ಮಾತ್ರ ಸ್ಪರ್ಧೆಯನ್ನು ಸಂಪೂರ್ಣವಾಗಿ ಮುಗಿಸಿ ಬಹುಮಾನಕ್ಕೆ ಬಾಜನರಾಗಿದ್ದಾರೆ..
ವಿಜೇತರಾದವರು : ಚಿ.ನಾ. ಹಳ್ಳಿ ಭರತ್ ಪ್ರಥಮ ಸ್ಥಾನಗಳಿಸಿ ಸೈಕಲನ್ನು ಬಹುಮಾನವಾಗಿ ಪಡೆದರೆ , ಹುಳಿಯಾರಿನ ಶ್ರೀನಿವಾಸನಾಯ್ಕ ಮತ್ತು ಎಂ.ನಾಗೇಶ್ ದ್ವಿತೀಯ ಹಾಗೂ ಸ್ವಾಮಿ ತೃತೀಯ ಸ್ಥಾನದೊಂದಿಗೆ ಆಕರ್ಷಕ ಟ್ರೋಪಿ ಪಡೆದಿದ್ದಾರೆ. ದಿನೇಶ್ ಗೆ 4 ನೇಬಹುಮಾನವಾಗಿ ಮೊಬೈಲ್ ಹ್ಯಾಂಡ್ ಸೆಟ್, ಡ್ರೈವರ್ ಕುಮಾರ್ ಗೆ 5ನೇ ಬಹುಮಾನವಾಗಿ ಹಾಟ್ ಬಾಕ್ಸ್ ದೊರೆತರೆ, ನರೇಶ್ ಬಾಬು (6 ಸ್ಥಾನ), ಕೆಂಕೆರೆ ಚೇತನ್ (7ನೇ ಸ್ಥಾನ) ಪಡೆಯುವ ಮೂಲಕ ಸ್ಪೋರ್ಟ್ ಶೋಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಾಗರಾಜು(8ನೇ ಸ್ಥಾನ) , ಸುನಿಲ್( 9 ನೇ ಸ್ಥಾನ), ಸುಂದರ್ (10 ನೇ ಸ್ಥಾನ) ದೊಂದಿಗೆ ಟೀಶರ್ಟ್ ಪಡೆದರೆ ರಮೇಶ್ (11 ನೇ ಸ್ಥಾನ) , ಬಡಗಿ ಕುಮಾರ್ (12ನೇ ಸ್ಥಾನ), ಹೋಟೆಲ್ ಮಂಜುನಾಥ (13ನೇಸ್ಥಾನ)ದೊಂದಿಗೆ ಸಮಾಧಾನಕರ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಹುಮಾನ ವಿತರಣಾ ಸಮಾರಂಭದಲ್ಲಿ ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಗೌರವಾಧ್ಯಕ್ಷ ಕ್ಯಾಸೆಟ್ ರಂಗಸ್ವಾಮಿ, ಲಕ್ಷ್ಮಿ ಬೇಕರಿ ಮಂಜುನಾಥ್, ಕಿರುತೆರೆ ಕಲಾವಿದ ರಂಗಸ್ವಾಮಿ (ಗೌಡಿ) , ಬಾಲಾಜಿ ಗಾರ್ಮೆಂಟ್ಸ್ ನ ಭರತ್ ಕುಮಾರ್, ರಾಯನ್ ಫುಟ್ ವೇರ ನ ಯೂಸೂಫ್ ಖಾನ್, ಲಕ್ಷ್ಮಿ ಬ್ಯಾಂಗಲ್ ಸ್ಟೋರ್ ನ ಶಿವಕುಮಾರ್, ಕರವೇ ಪದಾಧಿಕಾರಿಗಳಾದ ಮೆಡಿಕಲ್ ಚನ್ನಬಸವಯ್ಯ ,ಅಂಜನಮೂರ್ತಿ, ಕುಮಾರ್, ಮಂಜುನಾಥ, ಮುರುಳಿ, ಹರೀಶ್, ದಿವಾಕರ,ಸಿದ್ದೇಶ್,ರಘು,ನವೀನ್,ಬಸವರಾಜನಾಯ್ಕ,ನಾಗರಾಜು,ಯೋಗೀಶ್,ಮೋಹನ್ ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ