ಸ್ವತಂತ್ರ ಬಂದು 67 ವರ್ಷ ಕಳೆದರೂ ದಲಿತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಅನುಷ್ಟಾನಗೊಳ್ಳದೆ ವಂಚಿತಗೊಳ್ಳುತಿದ್ದಾರೆಂದು ಎಂದು ದಲಿತ ಸಹಾಯವಾಣೆ ತಾಲ್ಲೂಕ್ ಅಧ್ಯಕ್ಷ ಹನುಮಂತಪ್ಪ ಆರೋಪಿಸಿದರು
ದಲಿತರ ಸಮಸ್ಯೆಗಳಿಗೆ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಸ್ಪಂದಿಸದೇ ಇರುವುದನ್ನು ಖಂಡಿಸಿ ಈ ಬಾರಿಯ ಸ್ವಾತಂತ್ರ್ಯೋತ್ಸವನ್ನು ಬಹಿಷ್ಕರಿಸಿ ಬುಧವಾರ ರಾತ್ರಿ ಅರೆಬೆತ್ತಲೆ ಹಾಗೂ ಪಂಜಿನ ಮೆರವಣಿಗೆ ಹಮ್ಮಿಕೊಂಡು ಅವರು ಮಾತನಾಡಿದರು.
ದಲಿತ ಸಹಾಯವಾಣೆ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಪಂಜಿನ ಮೆರವಣಿಗೆ ನಡೆಸಿ ಉಪತಹಸಿಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು |
ಶತಮಾನಗಳಿಂದಲೂ ಆರ್ಥಿಕವಾಗಿ ಶೋಷಣೆಗೊಳಗಾಗಿರುವ ದಲಿತ ಸಮುದಾಯಕ್ಕೆ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇದುವರೆವಿಗೂ ಪರಿಶಿಷ್ಟ ಜಾತಿ, ವರ್ಗದವರಿಗೂ ಸವಲತ್ತುಗಳನ್ನು ವಿತರಿಸುವಲ್ಲಿ ವಿಫಲವಾಗಿವೆ. ಇದುವರೆಗೂ ಸಹ ದಲಿತರ ಬದುಕು ಹಸನಾಗಿಲ್ಲ,ಅಲೆಮಾರಿ ಸಮುದಾಯಗಳಿಗೆ ನೆಲೆಸಿಕ್ಕಿಲ್ಲ,ದಲಿತ ವಿದ್ಯಾವಂತರು ಪದವಿ ಪಡೆದು ಉದ್ಯೋಗವಿಲ್ಲದೆ ಪಡುತ್ತಿರುವ ಯಾತನೆ ನಿಜಕ್ಕೂ ಸ್ವಾತಂತ್ರ್ಯದ ಬದುಕಿಗೆ ಹಿಡಿದ ಕನ್ನಡಿಯಾಗಿದೆ.ಅಂಬೇಡ್ಕರ್ ನಿಗಮದ ಗಂಗಾಕಲ್ಯಾಣ ಯೋಜನೆ ,ಸಾಲಯೋಜನೆಗಳು ಅರ್ಹ ಫಲಾನುಭವಿಗಳಿಗೆ ದಕ್ಕದೆ ಅನ್ಯರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಣ್ಣು ತೆರೆಸುವ ಅಗತ್ಯವಿದೆ ಎಂದರು.
ದಲಿತ ಸಹಾಯವಾಣೆ ಹಾಗೂ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದ ಸುಮಾರು ನಲವತ್ತರಷ್ಟು ಸದಸ್ಯರೊಡಗೂಡಿ ರಾಂಗೋಪಾಲ್ ಸರ್ಕಲ್ ನಿಂದ ನಾಡಕಚೇರಿವರೆಗೆ ಪಂಜಿನ ಮೆರವಣಿಗೆ ನಡೆಸಿದ ಅವರು ಉಪತಹಸಿಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೂಡಲೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಅವರುಗಳು ಹಕ್ಕೊತ್ತಾಯ ಮಾಡಿದರು.ಮೆರವಣಿಗೆಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕ್ ಅಧ್ಯಕ್ಷ ರಾಜಪ್ಪ ,ಡಿಎಸ್ಎಸ್ ನ ರಾಘವೇಂದ್ರ,ದುರ್ಗಣ್ಣ ,ನರಸಿಂಹಯ್ಯ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ